ಬಾಲಿವುಡ್ ನಿರ್ದೇಶಕರನ್ನು ಭೇಟಿ ಮಾಡಿ ವಿಶೇಷ ಕೋರಿಕೆ ಇಟ್ಟ ಅಲ್ಲು ಅರ್ಜುನ್
ಅಲ್ಲು ಸಿರಿಶ್ ಬಾಲ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. 2013ರಲ್ಲಿ ತೆರೆಗೆ ಬಂದ ‘ಗೌರವಂ’ ಚಿತ್ರದ ಮೂಲಕ ಹೀರೋ ಆಗಿ ಬಡ್ತಿ ಪಡೆದರು. ಅಲ್ಲಿಂದ ಇಲ್ಲಿವರೆಗೆ ಹಲವು ಚಿತ್ರಗಳಲ್ಲಿ ಅಲ್ಲು ಸಿರಿಶ್ ನಟಿಸಿದ್ದಾರೆ. ಆದರೆ, ಯಶಸ್ಸು ಮಾತ್ರ ಸಿಕ್ಕಿಲ್ಲ.
ಸ್ಟಾರ್ ನಟರ ಮಕ್ಕಳು ಚಿತ್ರರಂಗಕ್ಕೆ ಕಾಲಿಟ್ಟರೆ ಅವರನ್ನು ಅಭಿಮಾನಿಗಳು ಒಪ್ಪಿಕೊಂಡೇ ಬಿಡುತ್ತಾರೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಈ ರೀತಿ ಪ್ರಯತ್ನ ಮಾಡಿ ಯಶಸ್ಸು ಸಿಗದೆ ಮೂಲೆಗುಂಪಾದ ಅನೇಕರಿದ್ದಾರೆ. ಟಾಲಿವುಡ್ನ ಸ್ಟಾರ್ ನಟ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರಿಶ್ (Allu Sirish) ಅವರನ್ನು ಕೂಡ ಅಭಿಮಾನಿಗಳು ಅಷ್ಟಾಗಿ ಒಪ್ಪಿಕೊಂಡಿಲ್ಲ. ಅವರ ನಟನೆಯ ಯಾವ ಚಿತ್ರಗಳೂ ಇಲ್ಲಿವರೆಗೆ ದೊಡ್ಡ ಮಟ್ಟದಲ್ಲಿ ಹಿಟ್ ಆಗಿಲ್ಲ. ಇದು ಅಲ್ಲು ಅರ್ಜುನ್ಗೆ (Allu Arjun) ಬೇಸರ ತಂದಿದೆ. ಹೀಗಾಗಿ, ಬಾಲಿವುಡ್ನ (Bollywood) ದೊಡ್ಡ ಸ್ಟಾರ್ ನಟರನ್ನು ಭೇಟಿ ಮಾಡಿ, ತಮ್ಮನಿಗೋಸ್ಕರ ಒಂದು ಸಿನಿಮಾ ಮಾಡುವಂತೆ ಕೋರಿದ್ದಾರೆ ಎಂದು ವರದಿ ಆಗಿದೆ. ಈ ಮೂಲಕ ತಮ್ಮನ ವೃತ್ತಿ ಜೀವನಕ್ಕೆ ಸಹಕಾರಿ ಆಗುತ್ತಿದ್ದಾರೆ.
ಅಲ್ಲು ಸಿರಿಶ್ ಬಾಲ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. 2013ರಲ್ಲಿ ತೆರೆಗೆ ಬಂದ ‘ಗೌರವಂ’ ಚಿತ್ರದ ಮೂಲಕ ಹೀರೋ ಆಗಿ ಬಡ್ತಿ ಪಡೆದರು. ಅಲ್ಲಿಂದ ಇಲ್ಲಿವರೆಗೆ ಹಲವು ಚಿತ್ರಗಳಲ್ಲಿ ಅಲ್ಲು ಸಿರಿಶ್ ನಟಿಸಿದ್ದಾರೆ. ಹೀರೋ ಆಗಿ ಬಡ್ತಿ ಪಡೆದು 10 ವರ್ಷ ಕಳೆದರೂ ಅವರಿಗೆ ಒಂದು ದೊಡ್ಡ ಯಶಸ್ಸು ಸಿಕ್ಕಿಲ್ಲ. ಈ ಕಾರಣಕ್ಕೆ ತಮ್ಮನ ಬಗ್ಗೆ ಚಿಂತೆ ಮಾಡುತ್ತಿದ್ದಾರೆ ಅಲ್ಲು.
ಇತ್ತೀಚೆಗೆ ಅಲ್ಲು ಅರ್ಜುನ್ ಮುಂಬೈಗೆ ತೆರಳಿದ್ದರು. ಸಂಜಯ್ ಲೀಲಾ ಬನ್ಸಾಲಿ ಕಚೇರಿಯಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದರು. ಇದು ಹಲವು ಗಾಸಿಪ್ಗಳನ್ನು ಹುಟ್ಟುಹಾಕಿತ್ತು. ಅಲ್ಲು ಅರ್ಜುನ್ ಅವರು ಬನ್ಸಾಲಿ ಜತೆ ಸಿನಿಮಾ ಮಾಡ್ತಾರಾ ಎನ್ನುವ ಪ್ರಶ್ನೆಗಳು ಮೂಡಿದ್ದವು. ಇದಾದ ಬೆನ್ನಲ್ಲೇ ಹಲವು ನಿರ್ದೇಶಕರನ್ನು ಅಲ್ಲು ಅರ್ಜುನ್ ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ಅಲ್ಲು ಅರ್ಜುನ್ ಅವರು ಕೆಲ ನಿರ್ದೇಶಕರ ಬಳಿ ಅಲ್ಲು ಸಿರಿಶ್ಗೆ ಸಿನಿಮಾ ಮಾಡುವಂತೆ ಕೋರಿದ್ದಾರೆ ಎನ್ನಲಾಗಿದೆ. ಈ ಮೂಲಕ ಅಲ್ಲು ಸಿರಿಶ್ಗೆ ಬಾಲಿವುಡ್ನಲ್ಲಿ ಹೊಸ ಸ್ಟಾರ್ಟ್ ಕೊಡೋಕೆ ಅವರು ಚಿಂತನೆ ನಡೆಸಿದ್ದಾರೆ. ಇದಕ್ಕೆ ಯಾವ ನಿರ್ದೇಶಕರು ಗ್ರೀನ್ ಸಿಗ್ನಲ್ ನೀಡಿದ್ದಾರೆ, ಯಾರು ಸಿರಿಶ್ಗೆ ಆ್ಯಕ್ಷನ್ ಕಟ್ ಹೇಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಅಲ್ಲು ಅರ್ಜುನ್ ಅವರಿಗೆ ಬಾಲಿವುಡ್ನಲ್ಲಿ ಬೇಡಿಕೆ ಹೆಚ್ಚುತ್ತಿದೆ. ‘ಪುಷ್ಪ’ ಸಿನಿಮಾ ಹಿಂದಿಗೆ ಡಬ್ ಆಗಿ ತೆರೆಕಂಡು 100 ಕೋಟಿ ರೂಪಾಯಿಯನ್ನು ಹಿಂದಿ ವರ್ಷನ್ನಿಂದಲೇ ಬಾಚಿಕೊಂಡಿದೆ. ಹೀಗಾಗಿ, ಬಾಲಿವುಡ್ನ ಹಲವರಿಗೆ ಅವರು ಪರಿಚಿತರಾಗಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ, ಪೂಜಾ ಬಳಿಕ ಅಲ್ಲು ಅರ್ಜುನ್ ಜತೆ ತೆರೆ ಹಂಚಿಕೊಂಡ ಮತ್ತೋರ್ವ ಕನ್ನಡದ ನಟಿ
‘ಪುನೀತ್ ರೀತಿ ನಾವು ಸ್ಟಂಟ್ ಮಾಡೋದಿಲ್ಲ’; ನಿಜ ಒಪ್ಪಿಕೊಂಡಿದ್ದ ಅಲ್ಲು ಅರ್ಜುನ್, ಜ್ಯೂ. ಎನ್ಟಿಆರ್