AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯುತ್ ತಂತಿ ಸ್ಪರ್ಶ, ಚಾಮರಾಜನಗರದ ರೈತ ಸ್ಥಳದಲ್ಲೇ ಸಾವು

ಜೋತುಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ರೈತರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಚಾಮರಾಜನಗರ ತಾಲೂಕಿನ ಶಿವಪುರದಲ್ಲಿ ಸಂಭವಿಸಿದೆ. ವೇಲುಸ್ವಾಮಿ ಎಂಬ ರೈತ ಬೆಳಗ್ಗೆ ತಮ್ಮ ಜಮೀನಿಗೆ ಹೋಗುತ್ತಿದ್ದರು. ಈ ವೇಳೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾರೆ.

ವಿದ್ಯುತ್ ತಂತಿ ಸ್ಪರ್ಶ, ಚಾಮರಾಜನಗರದ ರೈತ ಸ್ಥಳದಲ್ಲೇ ಸಾವು
ರೈತ ವೇಲುಸ್ವಾಮಿ
sandhya thejappa
|

Updated on: Apr 19, 2021 | 10:48 AM

Share

ಚಾಮರಾಜನಗರ: ಅಧಿಕಾರಿಗಳ ನಿರ್ಲಕ್ಷವೋ, ರೈತರ ಬೇಜವಬ್ದಾರಿಯೂ ತಿಳಿಯುತ್ತಿಲ್ಲ. ರೈತರ ಹೊಲದಲ್ಲಿ ನಿಂತು ಕಣ್ಣಾಯಿಸಿದರೆ ಕಣ್ಣಿಗೆ ಕಾಣುವುದು ದಿಕ್ಕು ದೆಸೆಯಿಲ್ಲದೆ ಹಾದು ಹೋದ ವಿದ್ಯುತ್ ತಂತಿಗಳು. ಹಾದು ಹೋದ ವಿದ್ಯುತ್ ತಂತಿಗಳಿಂದ ಆಗುವ ಅನಾಹುತಗಳು ಒಂದೆರಡಲ್ಲ. ಕೆಲವೊಮ್ಮೆ ಶಾರ್ಟ್ ಸರ್ಕೂಟ್ನಿಂದ ಇಡೀ ಬೆಳೆಯೆ ನಾಶವಾಗುತ್ತದೆ. ಇನ್ನು ಕೆಲವೊಮ್ಮೆ ಹೊಲಗಳಿಗೆ ಮೇಯಲು ಹೋದ ಕುರಿ, ಹಸು, ಎಮ್ಮೆಗಳು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿವೆ. ಅಲ್ಲದೇ ಅದೆಷ್ಟೋ ರೈತರು ಕೂಡಾ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿರುವ ಸಂಗತಿಗಳು ಇವೆ. ಇಂತಹದೊಂದು ಘಟನೆ ಇದೀಗ ಚಾಮರಾಜನಗರದಲ್ಲಿ ನಡೆದಿದೆ.

ಜೋತುಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ರೈತರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಚಾಮರಾಜನಗರ ತಾಲೂಕಿನ ಶಿವಪುರದಲ್ಲಿ ಸಂಭವಿಸಿದೆ. ವೇಲುಸ್ವಾಮಿ ಎಂಬ ರೈತ ಬೆಳಗ್ಗೆ ತಮ್ಮ ಜಮೀನಿಗೆ ಹೋಗುತ್ತಿದ್ದರು. ಈ ವೇಳೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿ ವೇಲುಸ್ವಾಮಿ ಚಾಮರಾಜನಗರ ತಾಲೂಕಿನ ಶಿವಪುರ ಗ್ರಾಮದವರಾಗಿದ್ದು, ಬೆಳಿಗ್ಗಿನ ಜಾವ ಕತ್ತಲು ಇದ್ದಿದ್ದರಿಂದ ಜೋತುಬಿದ್ದ ವಿದ್ಯುತ್ ತಂತಿ ಕಾಣದೇ ಈ ದುರ್ಘಟನೆ ನಡೆದಿದೆ. ತಂತಿಗೆ ಸಿಲುಕಿದ ರೈತನ ರುಂಡ ಮುಂಡ ಪ್ರತ್ಯೇಕವಾಗಿದೆ. ಸೆಸ್ಕಾಂ ಅಧಿಕಾರಿಗಳ ನಿರ್ಲಕ್ಷೆಗೆ ರೈತ ಬಲಿಯಾಗಿದ್ದಾರೆ ಎಂದು ಗ್ರಾಮಸ್ಥರ ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ

ಹುಬ್ಬಳ್ಳಿಯಲ್ಲಿ ರುಂಡ, ಮುಂಡ ಬೇರ್ಪಡಿಸಿ ಯುವಕನ ಕೊಲೆ ಪ್ರಕರಣ; ನಾಲ್ವರ ಬಂಧನ

ಸೋಂಕಿತ ಮಗಳ ಸಾವಿಗೆ ಕಣ್ಣೀರಿಟ್ಟ ಅಮ್ಮ, ಸರ್ಕಾರ ಆಸ್ಪತ್ರೆಗಳು ಸಾವಿನ ಕೂಪಗಳು ಎಂದು ಆಕ್ರೋಶ

(farmer has died by touching an electric wire in Chamarajanagar)