ಕೃಷ್ಣಾಪುರ ಗ್ರಾಮದಲ್ಲಿ ಸಾಲಗಾರರ ಕಾಟ ತಾಳಲಾರದೆ ರೈತ ಆತ್ಮಹತ್ಯೆ

| Updated By: ಸಾಧು ಶ್ರೀನಾಥ್​

Updated on: Dec 28, 2020 | 11:52 AM

ಸಾಲಬಾಧೆಯಿಂದ ರೈತ ಖಿನ್ನತೆಗೆ ಒಳಗಾಗಿದ್ದ. ಸಾಲಗಾರರ ಕಾಟ ತಾಳಲಾರದೆ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೃಷ್ಣಾಪುರ ಗ್ರಾಮದಲ್ಲಿ ಸಾಲಗಾರರ ಕಾಟ ತಾಳಲಾರದೆ ರೈತ ಆತ್ಮಹತ್ಯೆ
ಮೃತ ದುರ್ದೈವಿ ಮಲ್ಲೇಶ್ ಗೌಡ
Follow us on

ಮೈಸೂರು: ಸಾಲಬಾಧೆಯಿಂದ ಖಿನ್ನತೆಗೆ ಒಳಗಾಗಿದ್ದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲೂಕಿನ ಕೃಷ್ಣಾಪುರದಲ್ಲಿ ನಡೆದಿದೆ. ಮೃತ ರೈತ ಮಲ್ಲೇಶ್ ಗೌಡ(40) ಎಂದು ತಿಳಿದು ಬಂದಿದೆ.

ಮಲ್ಲೇಶ್ ಗೌಡ ಖಾಸಗಿ ಸಂಸ್ಥೆಯಿಂದ ಸಾಲ ಪಡೆದಿದ್ದ. ಸಾಲಗಾರರ ಕಾಟ ತಾಳಲಾರದೆ ಸಾಲಬಾಧೆಯಿಂದ ಖಿನ್ನತೆಗೆ ಒಳಗಾಗಿದ್ದ. ಹಾಗಾಗಿ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣ ಮೈಸೂರಿನ ಕೆ.ಆರ್.​ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮಲ್ಲೇಶ್​ ಮರಣ ಹೊಂದಿದ್ದಾನೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2 ದಿನದ ಹಿಂದೆ ತಾನೇ ಕೊರೆಸಿದ್ದ ಕೊಳವೆ ಬಾವಿಗೆ ಜಿಗಿದು ರೈತ ಆತ್ಮಹತ್ಯೆ! ಏಕೆ?