ಸಾಲಬಾಧೆ: ಗ್ರಾ.ಪಂ ಮಾಜಿ ಸದಸ್ಯ, ಜೆಡಿಎಸ್​ ಮುಖಂಡನಾಗಿದ್ದ ರೈತ ನೇಣಿಗೆ ಶರಣು

ಕೃಷಿಗಾಗಿ ರೈತ ಬ್ಯಾಕಿನಲ್ಲಿ ಸಾಲ ಮಾಡಿದ್ದ. 2 ವರ್ಷಗಳಿಂದ ತಂಬಾಕು ಬೆಳೆಯಲ್ಲಿ ಆದಾಯ ಸಿಗದೇ, ಸಾಲ ತೀರಿಸಲು ಕಷ್ಟ ಪಡುತ್ತಿದ್ದ. ಸಾಲಬಾಧೆಯಿಂದ ನೊಂದ ರೈತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಾಲಬಾಧೆ: ಗ್ರಾ.ಪಂ ಮಾಜಿ ಸದಸ್ಯ, ಜೆಡಿಎಸ್​ ಮುಖಂಡನಾಗಿದ್ದ ರೈತ ನೇಣಿಗೆ ಶರಣು
ಅತ್ತೆ ಸೊಸೆ ಕಿತ್ತಾಟ: ಸೊಸೆಗೆ ಚಾಕುವಿನಿಂದ ಚುಚ್ಚಿದ್ದ ಅತ್ತೆ, ಸೊಸೆ ಸತ್ತಳೆಂದು ಅಂಜಿ ನೇಣಿಗೆ ಶರಣು
Edited By:

Updated on: Jan 05, 2021 | 8:05 AM

ಮೈಸೂರು: ಬೆಳೆ ವೈಫಲ್ಯದಿಂದಾಗಿ ಉಂಟಾದ ಸಾಲಬಾಧೆ ತಾಳಲಾರದೆ ರೈತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಭೋಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿ ಪುಟ್ಟರಾಜು(41) ಎಂದು ತಿಳಿದು ಬಂದಿದೆ.

ರೈತ ಪುಟ್ಟರಾಜು ಗ್ರಾ.ಪಂಚಾಯತಿ ಮಾಜಿ ಸದಸ್ಯ ಮತ್ತು ಜೆಡಿಎಸ್​ ಮುಖಂಡರಾಗಿದ್ದವರು. 4 ಎಕರೆ ಜಮೀನು ಹೊಂದಿದ್ದು, ತಂಬಾಕು ಕೃಷಿಯಲ್ಲಿ ಜೀವನ ತೊಡಗಿಸಿಕೊಂಡಿದ್ದರು. ಕೃಷಿಗೆಂದು ಪಟ್ಟಣದ ಎಸ್.ಬಿ.ಐ ಬ್ಯಾಂಕ್​ನಲ್ಲಿ 8 ಲಕ್ಷ ಬೆಳೆ ಸಾಲ ಮಾಡಿದ್ದರು. ಅದೊಂದೇ ಅಲ್ಲದೇ, ಇವರ ಹೆಸರಿನಲ್ಲಿ ಕೆ.ಆರ್ ನಗರದ ಖಾಸಗಿ ಬ್ಯಾಂಕ್​ನಲ್ಲಿ 4 ಲಕ್ಷ ಬೆಳೆ ಸಾಲವಿತ್ತು. ಕಳೆದ 2 ವರ್ಷಗಳಿಂದ ತಂಬಾಕು ಬೆಳೆಗೆ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬಾರದ ಕಾರಣ ಆದಾಯದಲ್ಲಿ ನಷ್ಟ ಉಂಟಾಗಿದೆ.

ಮನೆಯಲ್ಲಿ ಯಾರೂ ಇಲ್ಲದಿರುವ ಸಮಯ ನೋಡಿ ಪುಟ್ಟರಾಜು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೃಷ್ಣಾಪುರ ಗ್ರಾಮದಲ್ಲಿ ಸಾಲಗಾರರ ಕಾಟ ತಾಳಲಾರದೆ ರೈತ ಆತ್ಮಹತ್ಯೆ