ಬೆಂಗಳೂರಲ್ಲಿ ಮೈಕೊರೆಯುವ ಚಳಿ ವಾತಾವರಣ.. ಕೂಲ್ ವೆದರ್ ಬಗ್ಗೆ ನಿರ್ಲಕ್ಷ್ಯ ಮಾಡಿದ್ರೆ ಡೇಂಜರ್, ಹವಾಮಾನ ಇಲಾಖೆ ಎಚ್ಚರಿಕೆ
ಸಿಲಿಕಾನ್ ಸಿಟಿಯಲ್ಲಿ ಮೈಕೊರೆಯೋ ಚಳಿ ಶುರುವಾಗಿದೆ. ಬೆಳಗ್ಗೆ ಬಿಸಿಲಿದ್ರೂ ಚಳಿಯ ವಾತಾವರಣ. ಕೊರೊನಾ ಅಟ್ಟಹಾಸದ ನಡುವೆ ಚಳಿಯ ಸಮರ ಶುರುವಾಗಿದೆ. ಬೆಂಗಳೂರಿನ ಜನ ಈ ಚಳಿ ಬಗ್ಗೆ ನಿರ್ಲಕ್ಷ್ಯ ಮಾಡಿದ್ರೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಅಂತಿದೆ ಹವಾಮಾನ ಇಲಾಖೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳೆದ ಎರಡು ದಿನಗಳಿಂದ ಕ್ಲೈಮೆಟ್ ಚೇಂಜ್ ಆಗಿದೆ. ಬೆಂಗಳೂರಿನಲ್ಲಿ ಚಳಿ ಪ್ರಮಾಣ ದಿನೇ ದಿನೇ ಹೆಚ್ಚಾಗ್ತಿದೆ. ಬೆಂಗಳೂರು ಸೇರಿದಂತೆ ಬೀದರ್, ಕಲಬುರ್ಗಿ, ರಾಯಚೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲೂ 10 ಡಿಗ್ರಿ ಕನಿಷ್ಟ ತಾಪಮಾನ ದಾಖಲಾಗುವ ಸಾಧ್ಯತೆಯಿದೆ ಅಂತಿದ್ದಾರೆ ಹವಾಮಾನ ಇಲಾಖೆ ಅಧಿಕಾರಿಗಳು.
ಅಂದಹಾಗೆ ಕಳೆದ 20 ದಿನದಿಂದ ರಾತ್ರಿ ವೇಳೆ ಅತಿಯಾದ ಚಳಿಯಾಗ್ತಿದ್ದು, ಬೆಳಗ್ಗೆ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗ್ತಿದೆ. ಇದಕ್ಕೆಲ್ಲಾ ಕಾರಣ ಮಹಾರಾಷ್ಟ್ರದಲ್ಲಿ ಬೀಸುತ್ತಿರುವ ಗಾಳಿಯ ಪ್ರಭಾವ ಅಂತಿದೆ ಹವಾಮಾನ ಇಲಾಖೆ.
ಕಳೆದ ವರ್ಷ ಹೇಳಿಕೊಳ್ಳುವಷ್ಟು ಚಳಿ ಇರಲಿಲ್ಲ. ಆದರೆ ಈ ಬಾರಿ ಲ್ಯಾಬಿನೋ ಕಂಡೀಷನ್‌ನಿಂದಾಗಿ ಅತಿ ಹೆಚ್ಚಿನ ಚಳಿಯಾಗುತ್ತಿದೆ. ಫೆಸಿಫಿಕ್ ಮಹಾಸಾಗರ ಮೇಲ್ಮೈ ನೀರು ತಂಪಾಗುವಿಕೆ ಚಳಿಗೆ ಪ್ರಮುಖ ಕಾರಣವಾಗಿದೆ. ಉತ್ತರ ಹಾಗೂ ಈಶಾನ್ಯದಿಂದ ಬರುವ ಒಣಹವೆಯಿಂದಾಗಿ ಚಳಿ ಪ್ರಮಾಣ ಹೆಚ್ಚಾಗ್ತಿದೆ. ಸಂಕ್ರಾಂತಿ ಮುಗಿಯುವವರೆಗೂ ಹೆಚ್ಚಿನ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹೆಚ್ಚುತ್ತಿರುವ ಚಳಿಯಿಂದಾಗಿ ಮಕ್ಕಳು, ಬಾಣಂತಿಯರು, ವೃದ್ಧರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕೇರ್ ತಗೋಬೇಕು. ಬೆಚ್ಚಗಿನ ಉಡುಗೆ ತೊಡುವುದರಿಂದ ಸಾಧ್ಯವಾದಷ್ಟು ಚಳಿಯಿಂದ ರಕ್ಷಣೆ ಪಡೆಯಬಹುದು. ಆರೋಗ್ಯ ಕಾಪಾಡಿಕೊಳ್ಳಬಹುದು ಅಂತಾರೆ ವೈದ್ಯರು
‘ಹೆಚ್ಚು ಎಚ್ಚರಿಕೆ ಇರಲಿ’ ಈ ಬಾರಿ ಹೆಚ್ಚು ಚಳಿ ಇದೆ. ಚಳಿ ಮಧ್ಯೆ ರೂಪಾಂತರಿ ಕೊರೊನಾದ ಆರ್ಭಟ ಇದೆ. ಹೀಗಾಗಿ ಎಲ್ರೂ ಆದಷ್ಟು ಎಚ್ಚರಿಕೆಯಿಂದ ಇರಬೇಕು. ಬೆಚ್ಚಗಿನ ಉಡುಗೆ ಕಡ್ಡಾಯವಾಗಿ ಧರಿಸಿ. ಎಲ್ಲದಕ್ಕಿಂತ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆ ಇರೋ ರೋಗಿಗಳು ಹೆಚ್ಚು ಎಚ್ಚರಿಕೆಯಿಂದ ಇರೋದು ಸೂಕ್ತ.
ಒಟ್ನಲ್ಲಿ ಸಂಕ್ರಾಂತಿವರೆಗೆ ಚಳಿ ಹೀಗೆ ಮುಂದುವರಿಯಲಿದೆ. ಸಿಲಿಕಾನ್ ಸಿಟಿ ಮಂದಿ ಆದಷ್ಟು ಕೇರ್ ಫುಲ್ಲಾಗಿರಿ. ಉಲ್ಲನ್ ಮಿಶ್ರಿತ ಉಡುಗೆಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಮಕ್ಕಳು ಹಾಗೂ ಹಿರಿಯರ ಬಗ್ಗೆ ಹೆಚ್ಚು ಕಾಳಜಿ ವಹಿಸೋದನ್ನ ಮರಿಬೇಡಿ.
Published On - 6:32 am, Tue, 5 January 21