ಸ್ಕೂಟರ್ ಸಮೇತ.. ರಸ್ತೆ ಪಕ್ಕದಲ್ಲೇ ಇದ್ದ ಬಾವಿಗೆ ಬಿದ್ದ ಇಬ್ಬರು ಸವಾರರು, ಮುಂದೇನಾಯ್ತು?
ಸ್ಕೂಟರ್ ಸಮೇತ ಇಬ್ಬರು ಸವಾರರು ಬಾವಿಗೆ ಬಿದ್ದಿರುವ ಘಟನೆ ನಗರದ ಹೊರವಲಯದಲ್ಲಿರುವ ಪಕ್ಕಲಡ್ಕ ಸಮೀಪದ ಬಜಾಲ್‌ನಲ್ಲಿ ನಡೆದಿದೆ. ಬಾವಿಗೆ ಬಿದ್ದ ಇಬ್ಬರ ಪೈಕಿ ಓರ್ವ ಸವಾರನ ಶವ ಪತ್ತೆಯಾಗಿದೆ.
ಮಂಗಳೂರು: ಸ್ಕೂಟರ್ ಸಮೇತ ಇಬ್ಬರು ಸವಾರರು ಬಾವಿಗೆ ಬಿದ್ದಿರುವ ಘಟನೆ ನಗರದ ಹೊರವಲಯದಲ್ಲಿರುವ ಪಕ್ಕಲಡ್ಕ ಸಮೀಪದ ಬಜಾಲ್‌ನಲ್ಲಿ ನಡೆದಿದೆ. ಬಾವಿಗೆ ಬಿದ್ದ ಇಬ್ಬರ ಪೈಕಿ ಓರ್ವ ಸವಾರನ ಶವ ಪತ್ತೆಯಾಗಿದೆ.
ಬಾವಿಯ ಬಳಿ ಸ್ಕೂಟರ್ ಮತ್ತು ಎರಡು ಹೆಲ್ಮೆಟ್ ಸಹ ಪತ್ತೆಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಸ್ಕೂಟರ್ ಬಾವಿಗೆ ಬಿದ್ದಿದೆ ಎಂದು ಹೇಳಲಾಗಿದೆ.
ಸವಾರರು ಜನನಿಬಿಡವಾದ ಎತ್ತರದ ಪ್ರದೇಶದಲ್ಲಿ ಚಲಿಸುತ್ತಿದ್ದರು. ಈ ವೇಳೆ, ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲೇ ಇದ್ದ ಆವರಣದಲ್ಲಿದ್ದ ಬಾವಿಗೆ ಇಬ್ಬುರು ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ತೊಗರಿ ರಾಶಿಮಾಡಲು ಹೊರಗೆ ಕಳುಹಿಸಿದ್ದಾಗ.. ಬಹಿರ್ದೆಸೆಗೆ ಹೋಗ್ತಿನಿ ಅಂತಾ ಹೋದ ಕೈದಿ ಎಸ್ಕೇಪ್!