ಕೋಳಿ ಕಾಳಗದ ಜೂಜು: ರಾಯಚೂರು ಜಿಲ್ಲೆಯ ರೈತರಲ್ಲಿ ಆತಂಕ!
ಜಾತ್ರೆಯಂತೆ ಬಿಂದಾಸಾಗಿ ನಡೆಯುವ ಕೋಳಿ ಕಾಳದ ಜೂಜಿನಿಂದಾಗಿ ಸದ್ಯ ರೈತರು ಕಂಗಾಲಾಗಿದ್ದಾರೆ. 10 ಲಕ್ಷಕ್ಕೂ ಅಧಿಕ ವಹಿವಾಟು ನಡೆಯುವ ಈ ಕೋಳಿ ಕಾಳಗದ ಜೂಜು ನೋಡಲು ಮಸ್ಕಿ, ಸಿಂಧನೂರು, ಶಹಾಪುರ, ಸುರಪುರ ಭಾಗದಿಂದ ನೂರಾರು ಜನರು ಆಗಮಿಸುತ್ತಿದ್ದಾರೆ.
ರಾಯಚೂರು: ಜಿಲ್ಲೆಯಲ್ಲಿ ಕೋಳಿ ಕಾಳಗದಿಂದ ರೈತರ ಜಮೀನು ಹಾಳಾಗುತ್ತಿದ್ದು, ಈ ಬಗ್ಗೆ ಪೊಲೀಸರಿಗೆ ಎಷ್ಟೇ ದೂರು ಸಲ್ಲಿಸಿದರು ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುವುದು ಸದ್ಯ ರೈತರ ಆರೋಪವಾಗಿದೆ.
ಜಾತ್ರೆಯಂತೆ ಬಿಂದಾಸಾಗಿ ನಡೆಯುವ ಕೋಳಿ ಕಾಳದ ಜೂಜಿನಿಂದಾಗಿ ಸದ್ಯ ರೈತರು ಕಂಗಾಲಾಗಿದ್ದಾರೆ. ರೂ. 10 ಲಕ್ಷಕ್ಕೂ ಅಧಿಕ ವಹಿವಾಟು ನಡೆಯುವ ಈ ಕೋಳಿ ಕಾಳಗದ ಜೂಜು ನೋಡಲು ಮಸ್ಕಿ, ಸಿಂಧನೂರು, ಶಹಾಪುರ, ಸುರಪುರ ಭಾಗದಿಂದ ನೂರಾರು ಜನರು ಆಗಮಿಸುತ್ತಿದ್ದಾರೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗ್ರಾಮಗಳಾದ ಜಾನಮರಡಿ, ಮಲ್ಲದಕಲ್ ಸೇರಿ ಹಲವೆಡೆ ಕೋಳಿ ಕಾಳಗ ನಡೆಯುತ್ತಿದ್ದು, ಪ್ರತಿನಿತ್ಯ ಕೋಳಿ ಕಾಳಗಕ್ಕೆ ನೂರಾರು ಜನ ಬರ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತೊಂದರೆಯಾಗಿದೆ. ರೈತರ ಫಲವತ್ತಾದ ಭೂಮಿಯಲ್ಲಿ ಕೋಳಿ ಕಾಳಗ ಆಯೋಜನೆ ಮಾಡುತ್ತಿದ್ದು ಹದ ಮಾಡಿಟ್ಟಿರುವ ಕೃಷಿ ಭೂಮಿ ಹಾಳಾಗುತ್ತಿದೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಆದಷ್ಟು ಬೇಗ ಗಮನಹರಿಸಬೇಕು ಎನ್ನುವುದು ಸದ್ಯ ರೈತರ ಮನವಿಯಾಗಿದೆ.
ಮನೆ ಮಾರಿ ಆನ್‌ಲೈನ್ ಜೂಜಾಟ: ಎಲ್ಲವನ್ನೂ ಕಳೆದುಕೊಂಡವ ಸಾವಿಗೂ ಮುನ್ನ ಏನು ಬರೆದಿಟ್ಟ?