Honey Bee Attack | ಬನ್ನೇರುಘಟ್ಟ: ಕಾಲೇಜಿನಲ್ಲಿ ಕ್ಯೂ ನಿಂತಿದ್ದ ವಿದ್ಯಾರ್ಥಿ ಮೇಲೆ ಜೇನು ದಾಳಿ, ಮಗನನ್ನ ರಕ್ಷಿಸಲು ಹೋಗಿ ಅಪ್ಪ ಸಾವು

|

Updated on: Feb 25, 2021 | 5:16 PM

Honey bee: ಸುಮಾರು 20 ಮಂದಿಗೆ ಜೇನು ನೊಣ ಕಚ್ಚಿದ್ದು, ರಮೇಶ್ ಮೇಲೆ ಹೆಚ್ಚು ದಾಳಿ ನಡೆಸಿದೆ. ಆಸ್ಪತ್ರೆಗೆ ದಾಖಲು ಮಾಡಿದರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸದ್ಯ ಪಾರ್ಥೀವ ಶರೀರದೊಂದಿಗೆ ಆಂಧ್ರಕ್ಕೆ ಕುಟುಂಬ ತೆರಳಿದೆ.

Honey Bee Attack | ಬನ್ನೇರುಘಟ್ಟ: ಕಾಲೇಜಿನಲ್ಲಿ ಕ್ಯೂ ನಿಂತಿದ್ದ ವಿದ್ಯಾರ್ಥಿ ಮೇಲೆ ಜೇನು ದಾಳಿ, ಮಗನನ್ನ ರಕ್ಷಿಸಲು ಹೋಗಿ ಅಪ್ಪ ಸಾವು
ಎಎಂಸಿ ಇಂಜಿನಿಯರಿಂಗ್ ಕಾಲೇಜು
Follow us on

ಬೆಂಗಳೂರು: ಜೇನುಹುಳು ದಾಳಿಯಿಂದ ಮಗನನ್ನು ಕಾಡಾಡಲು ಹೋಗಿ ತಂದೆ ಸಾವನ್ನಪ್ಪಿರುವ ಘಟನೆ ಬನ್ನೇರುಘಟ್ಟ ಬಳಿ ಸಂಭವಿಸಿದೆ. ಎಎಂಸಿ ಇಂಜಿನಿಯರಿಂಗ್ ಕಾಲೇಜಿಗೆ ಪವೇಶ ಪರೀಕ್ಷೆ ಬರೆಯುವುದಕ್ಕೆ ಆಂಧ್ರ ಪ್ರದೇಶದಿಂದ ರಿತ್ವಿಕ್ ಅಪ್ಪನೊಂದಿಗೆ ಬೆಂಗಳೂರಿಗೆ ಬಂದಿದ್ದರು. ಕಾಲೇಜಿನಲ್ಲಿ ಕ್ಯೂನಲ್ಲಿ ನಿಂತಿದ್ದ ವೇಳೆ ವಿದ್ಯಾರ್ಥಿಗಳ ಮೇಲೆ ಜೇನು ದಾಳಿ ನಡೆಸಿದೆ.

ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ ಏಕಾಏಕಿ ಜೇನು ನೊಣಗಳು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿತು. ಮಗ ಋತ್ವಿಕ್​ನನ್ನು ರಕ್ಷಿಸಲು ವೆಂಕಟ ರಮೇಶ್ ಉಪ್ಪಳ ಪಾಟಿ ಹೋಗಿದ್ದರು. ಆಗ ರಮೇಶ್ ಮೇಲೆ ಜೇನು ದಾಳಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ರಮೇಶ್, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಒಟ್ಟು ಸುಮಾರು 20 ಮಂದಿಗೆ ಜೇನು ನೊಣ ಕಚ್ಚಿದ್ದು, ರಮೇಶ್ ಮೇಲೆ ಹೆಚ್ಚು ದಾಳಿ ನಡೆಸಿದೆ. ಆಸ್ಪತ್ರೆಗೆ ದಾಖಲು ಮಾಡಿದರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸದ್ಯ ಪಾರ್ಥಿವ ಶರೀರದೊಂದಿಗೆ ಕುಟುಂಬವು ಆಂಧ್ರಕ್ಕೆ ತೆರಳಿದೆ.

ಇದನ್ನೂ ಓದಿ

ಮಲಪ್ರಭೆ ಬಳಿ ಸೆಲ್ಫಿ ತೆಗೆಯುವಾಗ ಜೇನುಹುಳು ದಾಳಿ: ಮೂವರು ನೀರುಪಾಲು

ಅವಧಿಗೂ ಮುನ್ನ ಅರಳಿದ ಕಾಫಿ ಹೂವು.. ಕಾಫಿ ಬೆಳೆಗಾರರಿಗೆ ಹೆಚ್ಚಾಯ್ತು ತಲೆನೋವು

Published On - 4:54 pm, Thu, 25 February 21