ಕೆರೆಯಲ್ಲಿ ಬಚ್ಚಿಟ್ಟಿದ್ದ 330 ಲೀಟರ್ ಕಳ್ಳಭಟ್ಟಿಯ ವಾಸನೆ ಹಿಡಿದ ಖಾಕಿ ಪಡೆ!
ಕೆರೆಯಲ್ಲಿ ಅಕ್ರಮವಾಗಿ ಬಚ್ಚಿಟ್ಟಿದ್ದ ಕಳ್ಳಭಟ್ಟಿ ಕೊಡಗಳನ್ನು ಪೊಲೀಸರು ಕಂಡುಹಿಡಿದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದಲ್ಲಿ ನಡೆದಿದೆ. ಕೆರೆಯಲ್ಲಿ ಬೆಲ್ಲದ ರಾಸಾಯನಿಕ ಹೊಂದಿದ್ದ ಕೊಡಗಳನ್ನು ಕಳ್ಳರು ಬಚ್ಚಿಟ್ಟಿದ್ದರು.
ಬಾಗಲಕೋಟೆ: ಖದೀಮರು ಕೆರೆಯಲ್ಲಿ ಅಕ್ರಮವಾಗಿ ಬಚ್ಚಿಟ್ಟಿದ್ದ ಕಳ್ಳಭಟ್ಟಿ ಕೊಡಗಳನ್ನು ಪೊಲೀಸರು ಕಂಡುಹಿಡಿದಿರುವ ಘಟನೆಯು ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದಲ್ಲಿ ನಡೆದಿದೆ. ಕೆರೆಯಲ್ಲಿ ಬೆಲ್ಲದ ರಾಸಾಯನಿಕ ಹೊಂದಿದ್ದ ಕೊಡಗಳನ್ನು ಕಳ್ಳರು ಬಚ್ಚಿಟ್ಟಿದ್ದರು. ಇದೀಗ, ಕೆರೆಯಲ್ಲಿದ್ದ ಸುಮಾರು 22 ಕೊಡಗಳನ್ನು ಖಾಕಿ ಪಡೆ ಹೊರತೆಗೆದಿದೆ. ಜೊತೆಗೆ, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ.
ಖಚಿತ ಮಾಹಿತಿ ಮೇರೆಗೆ ಅಮೀನಗಡ PSI ಎಂ.ಜಿ. ಕುಲಕರ್ಣಿ ನೇತೃತ್ವದಲ್ಲಿ ಪೋಲಿಸರು ಕಾರ್ಯಾಚರಣೆ ನಡೆಸಿದರು. 22 ಕೊಡಗಳಲ್ಲಿ ಖದೀಮರು ಅಂದಾಜು 3 ಸಾವಿರ ಮೌಲ್ಯದ 330 ಲೀಟರ್ ಬೆಲ್ಲದ ರಸಾಯನವನ್ನು ಅವಿತಿಟ್ಟಿದ್ದರು.
ಬೆಳಗಾವಿ ಶಾಲಾ ಆವರಣದಲ್ಲೇ ತಲ್ವಾರ್‌ನಿಂದ ಕೇಕ್ ಕತ್ತರಿಸಿ ಬರ್ತ್‌ಡೇ ಆಚರಣೆ ಇತ್ತ, ಶಾಲಾ ಆವರಣದಲ್ಲೇ ತಲ್ವಾರ್‌ನಿಂದ ಕೇಕ್ ಕತ್ತರಿಸಿ ಬರ್ತ್‌ಡೇ ಆಚರಣೆ ಮಾಡಿಕೊಂಡಿರುವ ಪ್ರಸಂಗ ಬೆಳಗಾವಿ ಹೊರವಲಯ ಹಿಂಡಲಗಾದಲ್ಲಿನ ವಿಜಯನಗರ ಶಾಲಾ ಆವರಣದಲ್ಲಿ ನಡೆದಿದೆ. ಜ್ಯೋತಿಬಾ ಅಲಿಯಾಸ್ ಮುತ್ತುರಾಜ್ ಎಂಬಾತ ತಲ್ವಾರ್‌ನಿಂದ ಕೇಕ್ ಕತ್ತರಿಸಿ ಬರ್ತ್‌ಡೇ ಆಚರಿಸಿಕೊಂಡಿದ್ದಾನೆ.
ಕಳೆದ ರಾತ್ರಿ ತಲ್ವಾರ್‌ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಜ್ಯೋತಿಬಾ ಬಳಿಕ ತನ್ನ ಗೆಳೆಯರೊಟ್ಟಿಗೆ DJ ಬೀಟ್ಸ್ಗೆ ಸ್ಟೆಪ್ ಹಾಕಿ ಕುಣಿದು ಕುಪ್ಪಳಿಸಿದ್ದಾನೆ. ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ. ಬೆಳಗಾವಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ವಿದ್ಯುತ್ ಕಂಬದ ಮೇಲಿಂದ ಬಿದ್ದು ಎಲೆಕ್ಟ್ರಿಷಿಯನ್ ಸಾವು ವಿದ್ಯುತ್ ಕಂಬದ ಮೇಲಿಂದ ಬಿದ್ದು ಎಲೆಕ್ಟ್ರಿಷಿಯನ್ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ವಿವೇಕನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಲು ಜಾರಿ ಕೆಳಗೆ ಬಿದ್ದ ಪರಿಣಾಮ ಎಲೆಕ್ಟ್ರಿಷಿಯನ್ ಸುರೇಶ್ ತಲೆಗೆ ಗಾಯಗಳಾಗಿ ಸಾವನ್ನಪ್ಪಿದ್ದಾರೆ. ಮೃತನ ಕುಟುಂಬಸ್ಥರು ಗುತ್ತಿಗೆದಾರ ಬಾಬು ಎಂಬಾತನ ವಿರುದ್ಧ ದೂರು ದಾಖಲಿಸಿದ್ದಾರೆ. ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾರ್ಕಿಂಗ್ ವಿಚಾರಕ್ಕೆ ಮಹಿಳೆಯ ಮೇಲೆ BJP ಮುಖಂಡನಿಂದ ಹಲ್ಲೆ ಆರೋಪ ಪಾರ್ಕಿಂಗ್ ವಿಚಾರಕ್ಕೆ ಮಹಿಳೆಯ ಮೇಲೆ BJP ಮುಖಂಡನೊಬ್ಬ ಹಲ್ಲೆ ಮಾಡಿರುವ ಆರೋಪ ಬೆಂಗಳೂರಿನ ಬಂಡೇಪಾಳ್ಯದ ಹೊಸಪಾಳ್ಯದಲ್ಲಿ ಕೇಳಿಬಂದಿದೆ. BJP ಮುಖಂಡ ಉಮೇಶ್ ವಿರುದ್ಧ ಠಾಣೆಗೆ ದೂರು ದಾಖಲಾಗಿದೆ. ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲೀಲಾವತಿ ಎಂಬುವವರ ಮೇಲೆ ಉಮೇಶ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬೈಕ್ಗೆ ಟಿಪ್ಪರ್ ಡಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು ಬೈಕ್ಗೆ ಟಿಪ್ಪರ್ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಇಟಗಿ ಗ್ರಾಮದ ಬಳಿ ಸಂಭವಿಸಿದೆ. ಭೀಕರ ಅಪಘಾತದಲ್ಲಿ ದಂಪತಿ ಹಾಗೂ ಅವರ ಇಬ್ಬರು ಮಕ್ಕಳು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ದೆಹಲಿ ತಲುಪಿದ ನಂತರ ಬಸನಗೌಡ ಪಾಟೀಲ್ ಯತ್ನಾಳ್ ನಾಪತ್ತೆ! ಅಜ್ಞಾತವಾಸದಲ್ಲಿ ಮುಂದಿನ ನಡೆಗೆ ತಯಾರಾಗ್ತಿದ್ದಾರಾ ಶಾಸಕ?