ದೆಹಲಿ ತಲುಪಿದ ನಂತರ ಬಸನಗೌಡ ಪಾಟೀಲ್​ ಯತ್ನಾಳ್ ನಾಪತ್ತೆ! ಅಜ್ಞಾತವಾಸದಲ್ಲಿ ಮುಂದಿನ ನಡೆಗೆ ತಯಾರಾಗ್ತಿದ್ದಾರಾ ಶಾಸಕ?

ದೆಹಲಿ ತಲುಪಿದ ನಂತರ ಬಸನಗೌಡ ಪಾಟೀಲ್​ ಯತ್ನಾಳ್ ನಾಪತ್ತೆ! ಅಜ್ಞಾತವಾಸದಲ್ಲಿ ಮುಂದಿನ ನಡೆಗೆ ತಯಾರಾಗ್ತಿದ್ದಾರಾ ಶಾಸಕ?
ಬಸನಗೌಡ ಪಾಟೀಲ್​ ಯತ್ನಾಳ್

Basanagouda Patil Yatnal ಪಕ್ಷದ ಹೈಕಮಾಂಡ್​ನಿಂದ ಬುಲಾವ್​ ಬಂದ ನಂತರ ದೆಹಲಿಗೆ ತೆರಳಿದ್ದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಇದೀಗ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ. ಮೂಲಗಳ ಪ್ರಕಾರ ಶಾಸಕ ಅಜ್ಞಾತರಾಗಿಯೇ ಉಳಿದು ತಮ್ಮ ಮುಂದಿನ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

KUSHAL V

| Edited By: sadhu srinath

Feb 25, 2021 | 5:01 PM

ದೆಹಲಿ: ಪಕ್ಷದ ಹೈಕಮಾಂಡ್​ನಿಂದ ಬುಲಾವ್​ ಬಂದ ನಂತರ ದೆಹಲಿಗೆ ತೆರಳಿದ್ದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಇದೀಗ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ. ಮೂಲಗಳ ಪ್ರಕಾರ ಶಾಸಕ ಅಜ್ಞಾತರಾಗಿಯೇ ಉಳಿದು ತಮ್ಮ ಮುಂದಿನ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಕಳೆದ ಕೆಲವು ದಿನಗಳ ಹಿಂದೆ, ಪಂಚಮಸಾಲಿ ಸಮುದಾಯ ಬೆಂಗಳೂರಿನಲ್ಲಿ ಆಯೋಜಿಸಿದ್ದ ಬೃಹತ್​ ಸಮಾವೇಶದಲ್ಲಿ ರಾಜ್ಯ ಸರ್ಕಾರದ ಹಾಗೂ ಸಿಎಂ ಬಿ.ಎಸ್​.ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದ್ದರು. ಈ ಬೆನ್ನಲ್ಲೇ, ಹೈಕಮಾಂಡ್​ನಿಂದ ಶಾಸಕನಿಗೆ ಕರೆ ಬಂದಿತ್ತು ಎಂದು ಸಹ ಹೇಳಲಾಗಿತ್ತು.

ಸದ್ಯ, ಅಜ್ಞಾತರಾಗಿಯೇ ಉಳಿದು ಶಾಸಕ ಯತ್ನಾಳ್ ಕಾರ್ಯತಂತ್ರ ರೂಪಿಸಿದ್ದು ಎಷ್ಟೇ ಕಾಲ್​ ಮಾಡಿದ್ರೂ ಯಾವುದೇ ಕರೆ ಸ್ವೀಕರಿಸುತ್ತಿಲ್ಲವಂತೆ. ಯತ್ನಾಳ್ ಫೆ. 21ರ ರಾತ್ರಿ ದಿಢೀರ್‌ ದೆಹಲಿಗೆ ಭೇಟಿ ನೀಡಿದ್ದರು.

ಆದರೆ, ಶಿಕ್ಷಣ ಸಂಸ್ಥೆಗಳ ಕೆಲಸಕ್ಕೆ ದೆಹಲಿಗೆ ಬಂದಿದ್ದೆ ಎಂದಿದ್ದ ಶಾಸಕ ನನಗೆ ವರಿಷ್ಠರು ಬುಲಾವ್‌ ನೀಡಿಲ್ಲ, ಯಾರನ್ನೂ ಭೇಟಿಯಾಗಿಲ್ಲ. ಯಾವ ವರಿಷ್ಠರೂ ನನಗೆ ವಾರ್ನಿಂಗ್ ನೀಡಿಲ್ಲವೆಂದು ಪೋಸ್ಟ್‌ ಹಾಕಿಕೊಂಡಿದ್ದರು. ಶಾಸಕ ಯತ್ನಾಳ್​ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾತ್ರ ಹಾಕಿದ್ದರು.

ಆದರೆ, ದೆಹಲಿಗೆ ತೆರಳಿ 4 ದಿನ ಕಳೆದ್ರೂ ಬಹಿರಂಗವಾಗಿ ಕಾಣಿಸಿಲ್ಲ. ಅಜ್ಞಾತರಾಗಿಯೇ ಇದ್ದುಕೊಂಡು ತಮ್ಮ ಮುಂದಿನ ರಾಜಕೀಯ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ನೋಟಿಸ್ ಕೊಟ್ಟರೆ ನನ್ನ ಬಾಯಿ ಬಂದ್ ಆಗಲ್ಲ’ ಅಂದ ಹಾಗೆ, ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗಾಗಿ ಹೋರಾಟದ ಭಾಗವಾಗಿ ಆಯೋಜಿಸಲಾಗಿದ್ದ ಬೃಹತ್​ ಸಮಾವೇಶದಲ್ಲಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ನೋಟಿಸ್ ಕೊಟ್ಟರೆ ನನ್ನ ಬಾಯಿ ಬಂದ್ ಆಗಲ್ಲ. ಇವರ ನಾಟಕ ಕಂಪನಿಯ ಬಗ್ಗೆ ನನಗೆ ಎಲ್ಲಾ ಗೊತ್ತಿದೆ. ನೋಟಿಸ್ ಕೊಟ್ಟರೆ ಅಂಜುವ ಮಗ ಅಲ್ಲ. ಆ ರೀತಿ ತಿಳಿದುಕೊಂಡಿದ್ದರೆ ಕುರ್ಚಿ ಖಾಲಿ ಮಾಡಬೇಕಾಗುತ್ತೆ. ಹಲವರು ಈಗ 3B ಮೀಸಲಾತಿ ಕೊಟ್ಟಿದ್ದೇವೆ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಇದು ಎಲ್ಲಾ ಲಿಂಗಾಯತರಿಗೆ ಕೊಟ್ಟಿದ್ದಾರೆ. ಇದನ್ನು ಪದೇಪದೆ ಹೇಳಿಕೊಳ್ಳುವ ಅವಶ್ಯಕತೆ ನಮಗೆ ಇಲ್ಲ. 2A ಮೀಸಲಾತಿಗಾಗಿ ಪದೇಪದೆ ಮನವಿ ಮಾಡುತ್ತಿದ್ದೇವೆ ಎಂದು ವಾಗ್ದಾಳಿ ನಡೆಸಿದ್ದರು.

ಮೀಸಲಾತಿಗಾಗಿ 25 ಸಂಸದರನ್ನು ಕರೆದುಕೊಂಡು ಹೋಗಲು ಹೇಳಿದ್ದಾರೆ. ಆದರೆ, ಇದಕ್ಕಾಗಿ ನಾನ್ಯಾಕೆ ದೆಹಲಿಗೆ ಹೋಗಲಿ. ಲಿಂಗಾಯತರಿಗೆ OBC ಸಿಗಲು ಬೇಕಾದರೆ ದೆಹಲಿಗೆ ಹೋಗುತ್ತೇನೆ. ಸಂಸದರನ್ನು ಕೂಡ ಕರೆದುಕೊಂಡು ಹೋಗುತ್ತೇನೆ. ಆದರೆ, 2A ಮೀಸಲಾತಿಗಾಗಿ ನಾನ್ಯಾಕೆ ದೆಹಲಿಗೆ ಹೋಗಲಿ ಎಂದು ಯತ್ನಾಳ್ ಪ್ರಶ್ನಿಸಿದ್ರು.

‘ಮೀಸಲಾತಿ ನೀಡಲು ಸಿಎಂ ಯಡಿಯೂರಪ್ಪಗೇ ಮನಸ್ಸಿಲ್ಲ’ ಮೀಸಲಾತಿ ನೀಡಲು ಸಿಎಂ ಯಡಿಯೂರಪ್ಪಗೇ ಮನಸ್ಸಿಲ್ಲ. ಹೋರಾಟಕ್ಕೆ ಹೋಗಬೇಡಿ ಎಂದು ಖುದ್ದು ಸಿಎಂ ಹೇಳಿದ್ದಾರೆ. ಇಬ್ಬರು ಸಚಿವರಿಗೆ ಖುದ್ದು ಸಿಎಂ ಬಿಎಸ್‌ವೈ ಹೇಳಿದ್ದಾರೆ. ಸಿಎಂ ಮತ್ತೆ ಕೇಂದ್ರದತ್ತ ಬೊಟ್ಟು ಮಾಡಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಇಬ್ಬರಿಗೆ ಹೇಳಿದ್ದೇವೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದ್ದರು.

ಸಿಎಂ ಯಡಿಯೂರಪ್ಪರಿಂದ ಹೋರಾಟ ದಾರಿ ತಪ್ಪಿಸುವ ಯತ್ನ ನಡೆಯುತ್ತಿದೆ. ಹಾಗಾಗಿ, ಪಕ್ಷಾತೀತವಾಗಿ ನಮ್ಮ ಹೋರಾಟ ಬೆಂಬಲಿಸುವಂತೆ ಮನವಿ ಮಾಡುತ್ತೇನೆ. ಪಂಚಮಸಾಲಿಗರಿಗೆ ಶಾಸಕ ಬಸನಗೌಡ ಯತ್ನಾಳ್ ಮನವಿ ಮಾಡಿದ್ದರು. ನಾಳೆಯಿಂದ ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ. ಸಮುದಾಯದ ಸಹಕಾರದಿಂದ ಹೋರಾಟ ಯಶಸ್ವಿಯಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಸದ್ಯಕ್ಕೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಸಾಧ್ಯವೇ ಇಲ್ಲ: ಸಚಿವರುಗಳ ಸ್ಪಷ್ಟನೆ

Follow us on

Related Stories

Most Read Stories

Click on your DTH Provider to Add TV9 Kannada