ವಿಜಯವಾಡ ಇಂದ್ರಕೀಲಾದ್ರಿಯಲ್ಲಿ ಭೀಷ್ಮ ಏಕಾದಶಿ ವಿಶೇಷ: ವಿಷ್ಣುಸಹಸ್ರನಾಮ ವಿರಾಟ್ ಪಾರಾಯಣ

ವಿಜಯವಾಡದ ಇಂದ್ರಕೀಲಾದ್ರಿಯಲ್ಲಿ ತ್ರಿಂದಡಿ ಚಿನ್ನಜೀಯರ್ ಸ್ವಾಮೀಜಿ ಆಶೀರ್ವಚನ
ವಿಷ್ಣುಸಹಸ್ರನಾಮ ಸ್ತೋತ್ರ ಪಠಣೆಯಿಂದ ಭೀಷ್ಮನ ಹೆಸರು ಚರಿತ್ರೆಯಲ್ಲಿ ನಿಂತಿದೆ. ಭೀಷ್ಮ ಏಕಾದಶಿಯಂದು ವಿಷ್ಣು ಸಹಸ್ರನಾಮ ಪಠಿಸುವವರ ಜನ್ಮ ಸಾರ್ಥಕವಾಗುತ್ತದೆ ಎಂದು ತ್ರಿದಂಡಿ ಚಿನ್ನಜೀಯರ್ ಸ್ವಾಮೀಜಿ ಹೇಳಿದರು.
ವಿಜಯವಾಡ: ಆಂಧ್ರ ಪ್ರದೇಶದ ವಿಜಯವಾಡದ ವಿಜಯಕೀಲಾದ್ರಿಯಲ್ಲಿ ಭೀಷ್ಮ ಏಕಾದಶಿ ಪ್ರಯುಕ್ತ ತ್ರಿದಂಡಿ ಚಿನ್ನಜಿಯರ್ ಸ್ವಾಮೀಜಿ ಹಲವು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಬೆಳಿಗ್ಗೆ 11ರಿಂದ ಸಂಜೆಯವರೆಗೆ ವಿಶೇಷ ಪೂಜೆಗಳು ನಡೆದವು. ಈ ಸಂದರ್ಭ ಚಿನ್ನಜೀಯರ್ ಸ್ವಾಮೀಜಿ ವಿಷ್ಣು ಸಹಸ್ರನಾಮ ಸ್ತ್ರೋತ್ರದ ವಿರಾಟ ಪಾರಾಯಣ ಮಾಡಿದರು. ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ಪಾರಾಯಣ ಆಲಿಸಿ, ದೇವರಿಗೆ ಮತ್ತು ಸ್ವಾಮೀಜಿಗೆ ನಮಿಸಿದರು. ಟಿವಿ9 ನೆಟ್ವರ್ಕ್ನ ಪ್ರವರ್ತಕರೂ ಆಗಿರುವ ಹೈದರಾಬಾದ್ನ ಮೈ ಹೋಂ ಗ್ರೂಪ್ನ ಸಂಸ್ಥಾಪಕ ಜೂಪಲ್ಲಿ ರಾಮೇಶ್ವರರಾವ್ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು.
ಮಧ್ಯಾಹ್ನ 3 ಗಂಟೆಯವರೆಗೂ ಪಾರಾಯಣ ಮುಂದುವರಿಯಿತು. ಈ ಸಂದರ್ಭ ಮಾತನಾಡಿದ ಚಿನ್ನಜೀಯರ್ ಸ್ವಾಮೀಜಿ, ವಿಷ್ಣುಸಹಸ್ರನಾಮ ಸ್ತೋತ್ರ ಪಠಣೆಯಿಂದ ಭೀಷ್ಮನ ಹೆಸರು ಚರಿತ್ರೆಯಲ್ಲಿ ನಿಂತಿದೆ. ಭೀಷ್ಮ ಏಕಾದಶಿಯಂದು ವಿಷ್ಣು ಸಹಸ್ರನಾಮ ಪಠಿಸುವವರ ಜನ್ಮ ಸಾರ್ಥಕವಾಗುತ್ತದೆ ಎಂದರು.