ಬೆಂಗಳೂರು: ಮೂರು ದಿನಗಳಿಂದ ಫ್ರೀಡಂಪಾರ್ಕ್ನಲ್ಲಿ 2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯ ಹೋರಾಟ ನಡೆಸುತ್ತಿದೆ. ಆದರೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಸರ್ಕಾರದ ನಿಲುವನ್ನು ಧರಣಿನಿರತ ಮುಖಂಡರಿಗೆ ಸಚಿವರು ಸ್ಪಷ್ಟಪಡಿಸಿದ್ದಾರೆ.
ಧರಣಿ, ಹೋರಾಟ ತೀವ್ರಗೊಂಡರೂ ಸದ್ಯಕ್ಕೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವುದು ಸಾಧ್ಯವೇ ಇಲ್ಲ ಎಂದು ಈ ಬಗ್ಗೆ ಸ್ವತಃ ಬಸವ ಮೃತ್ಯುಂಜಯ ಸ್ವಾಮೀಜಿಗಳಿಗೇ ಸಚಿವರು ಸ್ಪಷ್ಟಪಡಿಸಿದ್ದಾರೆ. ಹೋರಾಟ ಮಾಡಿಯೂ ವ್ಯರ್ಥ ಪ್ರಯತ್ನ ಆಗಲಿದೆ. ಹೋರಾಟ ಮತ್ತಷ್ಟು ತೀವ್ರಗೊಂಡರೂ ತನ್ನ ನಿಲುವು ಗಟ್ಟಿಯಾಗಿಟ್ಟು ಕೊಳ್ಳಲು ಸರ್ಕಾರದ ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ.
ಕೇಂದ್ರಕ್ಕೆ ಪತ್ರ ಬರೆಯಲು ಮುಂದಾದ ಜಯಮೃತ್ಯುಂಜಯ ಶ್ರೀ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಹೋರಾಟಕ್ಕೆ ಸಂಬಂಧಿಸಿ ಕೆಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಬಸವ ಜಯಮೃತ್ಯುಂಜಯ ಶ್ರೀಗಳು ಮುಂದಾಗಿದ್ದಾರೆ. ರಾಜ್ಯದಲ್ಲಿ ಪಂಚಮಸಾಲಿ ಸಮಾಜವನ್ನ ಕಡೆಗಣಿಸಲಾಗಿದೆ ಎಂದು ವಿವರವಾದ ಪತ್ರ ಬರೆಯುವ ಸ್ವಾಮೀಜಿ ತೀರ್ಮಾನ ಮಾಡಿದ್ದಾರೆ.
ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿ ಇಂದು ಮಹತ್ವದ ಸಭೆ ನಡೆಯುವ ಸಾಧ್ಯತೆ ಹೆಚ್ಚಿದ್ದು, ಬಿಗ್ ಟ್ವಿಸ್ಟ್ ಸಿಗುವ ಸಾಧ್ಯತೆಯಿದೆ. ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಯುವ ಸಾಧ್ಯತೆ ಕಂಡು ಬಂದಿದ್ದು, ಮುಂದಿನ ಮೀಸಲಾತಿ ಹೋರಾಟದ ರೂಪರೇಷಗಳು ತೀರ್ಮಾನವಾಗಲಿದೆ. ಇಂದು ಸಂಜೆ 4 ಗಂಟೆಗೆ ಪಂಚಮಸಾಲಿ ಸಮುದಾಯದ ಶಾಸಕರು, ಮಾಜಿ ಶಾಸಕರು, ಸಚಿವರು, ಸ್ವಾಮೀಜಿಗಳು ಹಾಗೂ ತಾಲೂಕು ಜಿಲ್ಲಾ ಮಟ್ಟದ ಮುಖಂಡರನ್ನೊಳಗೊಂಡ ದುಂಡು ಮೇಜಿನ ಸಭೆ ನಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ
ವಿಶ್ಲೇಷಣೆ | ಪಂಚಮಸಾಲಿ ಮೀಸಲಾತಿ ಮೂಸೆಯಲ್ಲಿ ಬೇಯುವುದು ಯಾರ ಬೇಳೆ?