ಒಟ್ಟು 109 ಸ್ಥಳಗಳಲ್ಲಿ ಈ ಸೌಲಭ್ಯ ಲಭ್ಯವಾಗಲಿದೆ. ನೆರೆ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ತೆಲಂಗಾಣ ಮತ್ತು ಗೋವಾಗೂ ಕಾಡಾ ಈ ಸೌಲಭ್ಯ ಸಿಗಲಿದೆ. ಕೊವಿಡ್ ಬಳಿಕ ಸಾರಿಗೆ ಇಲಾಖೆಗೆ 2,780 ಕೋಟಿ ನಷ್ಟವಾಗಿದೆ. ಕೊವಿಡ್ ಮೊದಲು 1,508 ಕೋಟಿ ರೂಪಾಯಿ ನಷ್ಟವಾಗಿದೆ. ಕೊವಿಡ್ ಬಳಿಕ ಸಾರಿಗೆ ಇಲಾಖೆಗೆ 4 ಸಾವಿರ ಕೋಟಿ ಆದಾಯ ಕೊರತೆ ಉಂಟಾಗಿದೆ. ಸಾರಿಗೆ ಇಲಾಖೆಗೆ ನಷ್ಟವಾಗಿದ್ದರೂ ಸಾರಿಗೆ ಸಿಬ್ಬಂದಿಗೆ ಸಂಬಳ ಕಡಿತ ಮಾಡಿಲ್ಲ ಎಂದು ಹೇಳಿದ್ದಾರೆ.
ಬಿಎಂಟಿಸಿಗೆ ಆದಾಯದ ಕೊರತೆ
ಬಿಎಂಟಿಸಿಗೆ ಬಹಳ ಆದಾಯಯದ ಕೊರತೆ ಇದೆ. ಸಂಬಳ ನೀಡಲು 80 ಕೋಟಿ ರೂ. ಸರ್ಕಾರದಿಂದ ಪಡೆದಿದ್ದೇವೆ. 556 ಕೋಟಿ ರೂ. ಬ್ಯಾಂಕಿನಿಂದ ಸಾಲ ಪಡೆದಿದ್ದೇವೆ ಎಂದು ತಿಳಿಸಿದ ಸಚಿವ ಲಕ್ಷ್ಮಣ ಸವದಿ ಸುಮಾರು 2,980 ಕೋಟಿ ವಿದ್ಯಾರ್ಥಿಗಳ ಬಸ್ ಪಾಸ್ ಹಣ ಬರಬೇಕು ಎಂದರು. ಜೊತೆಗೆ ಘಟಕ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಕಿರುಕುಳ ತಪ್ಪಿಸಲು ಕ್ರಮ ತೆಗೆದುಕೊಂಡಿದ್ದೇವೆ ಎಂದು ಹೇಳಿದರು. ಭತ್ಯೆಯನ್ನು ನೀಡುವುದು ನಿಂತಿತ್ತು. ಅದನ್ನು ನಾಳೆಯಿಂದ ಮತ್ತೆ ಜಾರಿಗೆ ತರುತ್ತೇವೆ. ಅಂತರ್ ನಿಗಮ ವರ್ಗಾವಣೆ ಬಗ್ಗೆ ಸಮತಿ ರಚನೆ ಮಾಡಿ, ಎಷ್ಟು ಪ್ರತಿಶತ ಮಾಡಬೇಕು ಅಂತ ನಿರ್ಧಾರ ಮಾಡುತ್ತೀವಿ ಎಂದು ತಿಳಿಸಿದರು.
ರೈತ ಸಂಘಕ್ಕೂ ಸಾರಿಗೆ ಇಲಾಖೆಗೆ ಸಂಬಂಧ ಇಲ್ಲ. ಸಮಸ್ಯೆ ಬಗ್ಗೆ ಸಿಬ್ಬಂದಿಯೇ ಬಂದು ಚರ್ಚಿಸಬೇಕು..
ಸಾರಿಗೆ ಸಿಬ್ಬಂದಿ 9 ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ಮಾಡಿದ್ದರು. ಈ ಪೈಕಿ ನಾವು 6 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಕೊರೊನಾಗೆ ಬಲಿಯಾದ ಸಾರಿಗೆ ಸಿಬ್ಬಂದಿ ಕುಟುಂಬಕ್ಕೆ 30 ಲಕ್ಷ ಪರಿಹಾರ ನೀಡಲು ತೀರ್ಮಾನಿಸಿದ್ದೇವೆ. ನಾಳೆ ಸಾಂಕೇತಿಕವಾಗಿ ಚೆಕ್ ಹಸ್ತಾಂತರ ಮಾಡಲಾಗುವುದು. 15 ದಿನದಲ್ಲಿ ಎಲ್ಲರಿಗೂ ಪರಿಹಾರ ಹಣ ತಲುಪಿಸುತ್ತೇವೆ ಎಂದು ತಿಳಿಸಿದ ಸವದಿ ರೈತ ಸಂಘಕ್ಕೂ ಸಾರಿಗೆ ಇಲಾಖೆಗೆ ಸಂಬಂಧ ಇಲ್ಲ. ಸಮಸ್ಯೆ ಬಗ್ಗೆ ಸಿಬ್ಬಂದಿಯೇ ಬಂದು ಚರ್ಚಿಸಬೇಕು. ಕೋಡಿಹಳ್ಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದರು.
ಇದನ್ನೂ ಓದಿ
Ind vs Eng, 3rd Test, Day 2, LIVE Score: ಸಂಕಷ್ಟದಲ್ಲಿ ಟೀಂ ಇಂಡಿಯಾ, ರೋಹಿತ್, ರಹಾನೆ, ಪಂತ್ ಔಟ್