ಪಕ್ಷೇತರ ಅಭ್ಯರ್ಥಿಯಾಗಿಯೇ ಇದ್ದು ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡುತ್ತೇನೆ: ಸಿದ್ದರಾಮಯ್ಯ ನಿವಾಸದಲ್ಲಿ ಶರತ್ ಬಚ್ಚೇಗೌಡ ಘೋಷಣೆ
Sharath Bachegowda: ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡುವೆ ಎಂದು ಸಿದ್ದರಾಮಯ್ಯವರಿಗೆ ಮನವಿ ಮಾಡಿದ ಶರತ್ ಬಚ್ಚೇಗೌಡ ಯಾರ ಗರ್ಭದಿಂದಲೂ ಕೂಡ ಶಾಸಕರು ಆಗಲು ಸಾಧ್ಯವಿಲ್ಲ. ಜನರ ಆಶೀರ್ವಾದಿಂದ ಮಾತ್ರ ಶಾಸಕರಾಗಲು ಸಾಧ್ಯ. ನನ್ನ ಹಿತ ಮುಖ್ಯ ಅಲ್ಲ ತಾಲೂಕಿನ ಹಿತದೃಷ್ಟಿ ಮುಖ್ಯ ಎಂದು ಹೇಳಿದರು.
ಬೆಂಗಳೂರು: ಹೊಸಕೋಟೆ ಪಕ್ಷದ ಶಾಸಕರಾಗಿರುವ ಶರತ್ ಬಚ್ಚೇಗೌಡ ಇಂದು ಸಿದ್ದರಾಮಯ್ಯನವರ ಅಧಿಕೃತ ಸರ್ಕಾರಿ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಾನು ಶಾಸಕಾಂಗ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡುತ್ತೇನೆಂದು ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಹೊಸಕೋಟೆಯಿಂದ ಬೆಂಗಳೂರಿಗೆ ಸುಮಾರು 150ಕ್ಕೂ ಹೆಚ್ಚು ಕಾರುಗಳಲ್ಲಿ ಶರತ್ ಬಚ್ಚೇಗೌಡ ಬೆಂಬಲಿಗರು ಬಂದಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡುವೆ ಎಂದು ಸಿದ್ದರಾಮಯ್ಯವರಿಗೆ ಮನವಿ ಮಾಡಿದ ಶರತ್ ಬಚ್ಚೇಗೌಡ ಯಾರ ಗರ್ಭದಿಂದಲೂ ಕೂಡ ಶಾಸಕರು ಆಗಲು ಸಾಧ್ಯವಿಲ್ಲ. ಜನರ ಆಶೀರ್ವಾದಿಂದ ಮಾತ್ರ ಶಾಸಕರಾಗಲು ಸಾಧ್ಯ. ನನ್ನ ಹಿತ ಮುಖ್ಯ ಅಲ್ಲ ತಾಲೂಕಿನ ಹಿತದೃಷ್ಟಿ ಮುಖ್ಯ. ನಾನು ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದೇನೆ. ಮುಂದೆಯೂ ಕೂಡ ಸ್ವತಂತ್ರ ಅಭ್ಯರ್ಥಿಯಾಗಿ ಮುಂದುವರೆಯುತ್ತೇನೆ. ಹೊಸಕೋಟೆ ತಾಲೂಕು ದ್ವೀಪ ಅಲ್ಲ. ಅಲ್ಲಿ ದಬ್ಬಾಳಿಕೆ ನಡೆಯುತಾ ಇದೆ. ಹೊಸಕೋಟೆ ತಾಲೂಕು ಅಭಿವೃದ್ದಿಗೆ ನಾನು ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಬಾಹ್ಯ ಬೆಂಬಲ ಸೂಚಿಸುತ್ತೇನೆ ಎಂದರು. ಅಲ್ಲದೇ ಶರತ್ ಬಚ್ಚೆಗೌಡ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಬಾಹ್ಯ ಬೆಂಬಲದ ಪತ್ರವನ್ನು ಸಿದ್ದರಾಮಯ್ಯಗೆ ನೀಡಿದರು.
ಸಚಿವ ಎಂಟಿಬಿ ನಾಗರಾಜ್ ವಿರುದ್ಧ ಸ್ಪರ್ಧಿಸಿ ಶರತ್ ಬಚ್ಚೇಗೌಡ ಗೆದ್ದಿದ್ದರು. ಎಂಟಿಬಿ ನಾಗರಾಜ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಆಗಮಿಸಿದ ಹಿನ್ನೆಲೆ ಮುನಿಸಿಕೊಂಡ ಶರತ್ ಬಚ್ಚೇಗೌಡ ಪಕ್ಷ ತ್ಯಜಿಸಿದ್ದರು. ಹಿಂದೆ ಬಿಜೆಪಿ ಯುವ ಘಟಕದ ಅಧ್ಯಕ್ಷರಾಗಿದ್ದ ಶರತ್ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಬಾಹ್ಯ ಬೆಂಬಲದ ಪತ್ರವನ್ನು ಸಿದ್ದರಾಮಯ್ಯಗೆ ನೀಡಿದರು.
ಸಿಎಂ ವಿರುದ್ಧ ಸಿದ್ದರಾಮಯ್ಯ ಕಿಡಿ ರಾಜ್ಯದಲ್ಲಿ ಸರ್ಕಾರವೇ ಇಲ್ಲ, ಕೇವಲ ಅರಾಜಕತೆ ಇದೆ. ಸರ್ಕಾರ ಸತ್ತು ಹೋಗಿದೆ ಎಂದು ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ರಾಜ್ಯ ಸರ್ಕಾರದಿಂದ ಯಾವುದೇ ಅಭಿವೃದ್ಧಿ ನಡಿಯುತ್ತಿಲ್ಲ. ಹಣ ಕೇಳಿದರೆ ಕೊರೊನಾ ಬಂದಿತ್ತು ಎಂದು ಹೇಳುತ್ತಾರೆ. ಕೊರೊನಾ ಹಣದಲ್ಲಿ ಶೇ.50 ರಷ್ಟು ನುಂಗಿದ್ದಾರೆ. ಮನುಷ್ಯನಿಗೆ ಮಾನ ಮರ್ಯಾದೆ ಅನ್ನೋದು ಮುಖ್ಯ. ಯಡಿಯೂರಪ್ಪ ಡಕೋಟಾ ಬಸ್ ಮೇಲೆ ಕುಳಿತಿದ್ದಾರೆ. ಅದರಲ್ಲೂ ಸ್ವಾಹ ಮಾಡುತ್ತಿದ್ದಾರೆಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಪಕ್ಷೇತರರು ಯಾವ ಪಕ್ಷಕ್ಕೂ ಸೇರುವುದಕ್ಕೆ ಸಾಧ್ಯವಿಲ್ಲ. ಇದಕ್ಕೆ ಪಕ್ಷೇತರ ಕಾಯ್ದೆ ಅಡ್ಡ ಬರುತ್ತದೆ. ಹೀಗಾಗಿ ಶರತ್ ಬಚ್ಚೇಗೌಡ ಬಾಹ್ಯ ಬೆಂಬಲವನ್ನು ನೀಡಬಹುದು. ನಾವು ಸರ್ಕಾರ ರಚಿಸಲು ಶಾಸಕರು ಬೆಂಬಲ ನೀಡಿದ್ದರು. ಇದೇ ರೀತಿ ಶರತ್ ಕೂಡ ಬಾಹ್ಯ ಬೆಂಬಲ ನೀಡಿದ್ದಾರೆ. ಬಾಹ್ಯ ಬೆಂಬಲದ ಘೋಷಣೆ ಜೊತೆ ಪತ್ರ ಕೂಡ ನೀಡಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷ ಶರತ್ ಬೆಂಬಲ ಸ್ವೀಕರಿಸಿದೆ. ಶರತ್ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಗೆದ್ದು ಬಂದಿದ್ದಾರೆ. ಅವರಿಗೆ ಎಲ್ಲ ರೀತಿಯ ರಾಜಕೀಯ ಬೆಂಬಲ ನಿಡುತ್ತೆವೆ ಎಂದು ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ರಮೇಶ್ ಕುಮಾರ್, ಎಸ್.ಆರ್ ಪಾಟೀಲ, ಕೃಷ್ಣ ಭೈರೇಗೌಡ, ಶಾಸಕಾಂಗ ಪಕ್ಷದ ಕಾರ್ಯದರ್ಶಿ ಶಾಸಕ ತುಕಾರಾಂ ಭಾಗಿಯಾಗಿದ್ದರು.
ಇದನ್ನೂ ಓದಿ
ಕನ್ಫರ್ಮ್.. ಫೆಬ್ರವರಿ 22ರಂದು ಕಾಂಗ್ರೆಸ್ಗೆ ಸೇರ್ಪಡೆಯಾಗಲಿರುವ ಶರತ್ ಬಚ್ಚೇಗೌಡ
ಮತಗಳನ್ನು ಹರಾಜಿಗೆ ಇಟ್ಟಿದ್ದಾರೆ; ವಿಪಕ್ಷ ನಾಯಕ ಸಿದ್ದರಾಮಯ್ಯ ವಿಷಾದ
Published On - 12:40 pm, Thu, 25 February 21