45ವರ್ಷ ಮೇಲ್ಪಟ್ಟವರಾಗಿದ್ದು, ಯಾವುದಾದರೂ ಕಾಯಿಲೆಗಳಿವೆಯಾ? ಈ ಬಾರಿ ಕೊರೊನಾ ಲಸಿಕೆ ಪಡೆಯಲು ಸಿದ್ಧರಾಗಿ.. ಒಂದಷ್ಟು ನಿಯಮಗಳಿವೆ ನೋಡಿ

Coronavirus Vaccine: ಪಟ್ಟಿ ಬಿಡುಗಡೆ ಮಾಡಿದ ಬಳಿಕವಷ್ಟೇ 45 ವರ್ಷ ಮೇಲ್ಪಟ್ಟ, ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಒಂದು ಸ್ಪಷ್ಟತೆ ಸಿಗಲಿದೆ. ಇನ್ನು ಕೇಂದ್ರ ಬಿಡುಗಡೆ ಮಾಡಿದ ಪಟ್ಟಿಗೆ ಅನ್ವಯ ಆಗುವವರು ಲಸಿಕೆ ಪಡೆಯಲು ಒಂದು ಫಾರ್ಮ್​ ತುಂಬ ಬೇಕಾಗುತ್ತದೆ.

45ವರ್ಷ ಮೇಲ್ಪಟ್ಟವರಾಗಿದ್ದು, ಯಾವುದಾದರೂ ಕಾಯಿಲೆಗಳಿವೆಯಾ? ಈ ಬಾರಿ ಕೊರೊನಾ ಲಸಿಕೆ ಪಡೆಯಲು ಸಿದ್ಧರಾಗಿ.. ಒಂದಷ್ಟು ನಿಯಮಗಳಿವೆ ನೋಡಿ
ಕೊರೊನಾ ವ್ಯಾಕ್ಸಿನ್​ (ಸಂಗ್ರಹ ಚಿತ್ರ)
Follow us
Lakshmi Hegde
|

Updated on:Feb 25, 2021 | 12:06 PM

ದೆಹಲಿ: ಮಾರ್ಚ್​ 1ರಿಂದ ಎರಡನೇ ಹಂತದ ಕೊವಿಡ್​-19 ಲಸಿಕೆ (Coronavirus Vaccine) ವಿತರಣೆ ನಡೆಯಲಿದೆ. ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್​ಗೆ ಲಸಿಕೆ ನೀಡಿದ ಬಳಿಕ ಇದೀಗ ದೇಶ ಎರಡನೇ ಹಂತದ ಕೊರೊನಾ ಲಸಿಕೆ ವಿತರಣಾ ಅಭಿಯಾನಕ್ಕೆ ಸಿದ್ಧವಾಗಿದೆ. ನಿನ್ನೆಯಷ್ಟೇ ಈ ಬಗ್ಗೆ ಮಾತನಾಡಿದ್ದ ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​, ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟ ಎಲ್ಲರಿಗೆ ಮತ್ತು 45 ವರ್ಷ ಮೇಲ್ಪಟ್ಟ, ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲಾಗುವುದು. ಅಂದರೆ 60 ವರ್ಷ ಮೇಲ್ಪಟ್ಟ ಸುಮಾರು 10 ಕೋಟಿ ಜನರು ಹಾಗೂ

45 ವರ್ಷ ಮೇಲ್ಪಟ್ಟ ಇತರ ರೋಗಗಳುಳ್ಳ ಸುಮಾರು 27 ಕೋಟಿ ಜನರು ವ್ಯಾಕ್ಸಿನ್​ ಪಡೆಯಲಿದ್ದಾರೆ ಎಂದು ತಿಳಿಸಿದ್ದರು. ಆದರೆ 45 ವರ್ಷ ಮೇಲ್ಪಟ್ಟು, ಇತರ ಕಾಯಿಲೆಗಳಿಂದ ಬಳಲುತ್ತಿರುವವರು ಲಸಿಕೆ ಪಡೆಯಲು ಕೆಲವು ನಿಯಮಗಳಿವೆ. ಅವರಲ್ಲಿರುವ ಕಾಯಿಲೆ, ಅದರ ತೀವ್ರತೆಯನ್ನು ದೃಢೀಕರಿಸುವ, ಸಂಬಂಧಪಟ್ಟ ವೈದ್ಯರ ಸಹಿ ಇರುವ ಮೆಡಿಕಲ್​ ಸರ್ಟಿಫಿಕೇಟ್ ಅಗತ್ಯ ಇರುತ್ತದೆ ಎಂದು ಮೂಲಗಳು ತಿಳಿಸಿವೆ.

45 ವರ್ಷ ಮೇಲ್ಪಟ್ಟ, ಇತರ ಕಾಯಿಲೆಗಳುಳ್ಳ ಎಂದು ಹೇಳಲಾಗಿದೆಯೇ ಹೊರತು, ಯಾವ ಸ್ವರೂಪದ ಕಾಯಿಲೆ ಎಂಬುದನ್ನು ಇನ್ನೂ ಸ್ಪಷ್ಟಪಡಿಸಲಾಗಿಲ್ಲ. ಯಾವ್ಯಾವ ಕಾಯಿಲೆಗಳನ್ನು ಹೊಂದಿರುವವರಿಗೆ ಲಸಿಕೆ ನೀಡಲಾಗುತ್ತದೆ ಎಂಬ ಪಟ್ಟಿಯನ್ನು ಇನ್ನೆರಡು ದಿನಗಳಲ್ಲಿ ಕೇಂದ್ರಸರ್ಕಾರ ಬಿಡುಗಡೆ ಮಾಡುವ ಸಾಧ್ಯತೆ ಇದೆ. ದೀರ್ಘಕಾಲದ ಕಾಯಿಲೆಗಳಾದ ಹೃದಯ ಸಮಸ್ಯೆ, ಶ್ವಾಸಕೋಶ, ಕಿಡ್ನಿ, ಲಿವರ್​, ಡಯಾಬಿಟಿಸ್​, ಕ್ಯಾನ್ಸರ್, ಗಂಭೀರ ಸ್ವರೂಪದ ಅಸ್ತಮಾ, ಮಾನಸಿಕ ಮತ್ತು ದೈಹಿಕ ವೈಕಲ್ಯದಿಂದ ಬಳಲುತ್ತಿರುವವರಿಗೂ ಈ ಹಂತದಲ್ಲಿ ಲಸಿಕೆ ಕೊಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಫಾರ್ಮ್​ ತುಂಬ ಬೇಕು  ಪಟ್ಟಿ ಬಿಡುಗಡೆ ಮಾಡಿದ ಬಳಿಕವಷ್ಟೇ 45 ವರ್ಷ ಮೇಲ್ಪಟ್ಟ, ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಒಂದು ಸ್ಪಷ್ಟತೆ ಸಿಗಲಿದೆ. ಇನ್ನು ಕೇಂದ್ರ ಬಿಡುಗಡೆ ಮಾಡಿದ ಪಟ್ಟಿಗೆ ಅನ್ವಯ ಆಗುವವರು ಲಸಿಕೆ ಪಡೆಯಲು ಒಂದು ಫಾರ್ಮ್​ ತುಂಬ ಬೇಕಾಗುತ್ತದೆ. ಅದರಲ್ಲಿ Yes/No ಪ್ರಶ್ನೆಗಳಿದ್ದು, ಅದನ್ನು ತುಂಬಬೇಕು. ನಂತರ ಆ ಫಾರ್ಮ್​ಗೆ ಸಂಬಂಧಪಟ್ಟ ವೈದ್ಯರ ಸಹಿ ಆಗಬೇಕು. ಈ ಮೆಡಿಕಲ್​ ಸರ್ಟಿಫಿಕೇಟ್​ನ್ನು ಕೊವಿಡ್​-19 ಲಸಿಕೆ ಪಡೆಯಲು ಹೋದಾಗ, ಅಲ್ಲಿನ ಅಧಿಕಾರಿಗಳಿಗೆ ನೀಡಬೇಕು. ಸರ್ಕಾರಿ ಕೇಂದ್ರಗಳಲ್ಲಿ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಸಚಿವ ಜಾವಡೇಕರ್​ ತಿಳಿಸಿದ್ದಾರೆ. ಆದರೆ ಖಾಸಗಿ ಕೇಂದ್ರಗಳಲ್ಲಿ 300 ರೂ. ನೀಡಬೇಕು ಎಂದು ಮೂಲಗಳು ತಿಳಿಸಿವೆ.

ಭಾರತದಲ್ಲಿ ಸೀರಂ ಸಂಸ್ಥೆಯ ಕೊವಿಶೀಲ್ಡ್​ ಮತ್ತು ಭಾರತ್​ ಬಯೋಟೆಕ್​ನ ಕೊವ್ಯಾಕ್ಸಿನ್ ಲಸಿಕೆಗಳಿಗೆ ಅನುಮೋದನೆ ಸಿಕ್ಕಿದ್ದು, ಮೊದಲ ಹಂತದ ಲಸಿಕೆ ವಿತರಣೆ ಅಭಿಯಾನ ಜ.16ರಂದು ಪ್ರಾರಂಭವಾಗಿತ್ತು. ಈ ಹಂತದಲ್ಲಿ ವೈದ್ಯರು, ಆರೋಗ್ಯ ಕಾರ್ಯಕರ್ತರು ಸೇರಿ ಕೊವಿಡ್​-19 ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗೆ ನೀಡಲಾಗಿತ್ತು.

ಇದನ್ನೂ ಓದಿ: Corona Vaccine: ಕೊರೊನಾ ಲಸಿಕೆ ಪಡೆದಿದ್ದ ಚಿಕ್ಕಬಳ್ಳಾಪುರದ ಆಶಾ ಕಾರ್ಯಕರ್ತೆ ಅಸ್ವಸ್ಥ; ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲು

Published On - 11:54 am, Thu, 25 February 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ