ಕೊರೊನಾ ಲಾಕ್ಡೌನ್ ಭೀತಿ; ತವರಿಗೆ ಹಿಂದಿರುಗುತ್ತಿರುವ ವಲಸೆ ಕಾರ್ಮಿಕರು
ಕೊಪ್ಪಳ: ದೇಶದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಕರ್ನಾಟಕದಲ್ಲೂ ನಿತ್ಯ ಐದಾರು ಸಾವಿರ ಪ್ರಕರಣಗಳು ಬರುತ್ತಿವೆ. ಹೀಗಿರುವಾಗ ಕಾರ್ಮಿಕರಿಗೆ ಮತ್ತೆ ಲಾಕ್ಡೌನ್ ಭೀತಿ ಶುರುವಾಗಿದೆ. ದುಡಿಯಲು ಗುಳೆ ಹೋಗಿದ್ದ ಕಾರ್ಮಿಕರು ಹಿಂತಿರುಗಿ ಗ್ರಾಮಕ್ಕೆ ಸೇರಿಕೊಳ್ಳುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ರಾಯಚೂರು, ಬಳ್ಳಾರಿ ಜಿಲ್ಲೆಯ ಲ್ಲಿ ಇಂದಿಗೂ ಜನ ಹೊಟ್ಟೆ ತುಂಬಿಸಿಕೊಳ್ಳಲು ಗುಳೆ ಹೋಗುತ್ತಾರೆ. ಮಂಗಳೂರು, ಉಡುಪಿ, ಬೆಂಗಳೂರು, ಮಹಾರಾಷ್ಟ್ರ ಭಾಗಕ್ಕೆ ಗುಳೆ ಹೋಗಿ ಹೊಟ್ಟೆ ತುಂಬಿಸಿಕೊಳ್ತಾರೆ. ಬಹುತೇಕ ಜನ ಕಟ್ಟಡ ಕೆಲಸಕ್ಕೆ ಹೋಗುತ್ತಾರೆ. ಮನೆಗೆ […]
ಕೊಪ್ಪಳ: ದೇಶದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಕರ್ನಾಟಕದಲ್ಲೂ ನಿತ್ಯ ಐದಾರು ಸಾವಿರ ಪ್ರಕರಣಗಳು ಬರುತ್ತಿವೆ. ಹೀಗಿರುವಾಗ ಕಾರ್ಮಿಕರಿಗೆ ಮತ್ತೆ ಲಾಕ್ಡೌನ್ ಭೀತಿ ಶುರುವಾಗಿದೆ. ದುಡಿಯಲು ಗುಳೆ ಹೋಗಿದ್ದ ಕಾರ್ಮಿಕರು ಹಿಂತಿರುಗಿ ಗ್ರಾಮಕ್ಕೆ ಸೇರಿಕೊಳ್ಳುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ರಾಯಚೂರು, ಬಳ್ಳಾರಿ ಜಿಲ್ಲೆಯ ಲ್ಲಿ ಇಂದಿಗೂ ಜನ ಹೊಟ್ಟೆ ತುಂಬಿಸಿಕೊಳ್ಳಲು ಗುಳೆ ಹೋಗುತ್ತಾರೆ. ಮಂಗಳೂರು, ಉಡುಪಿ, ಬೆಂಗಳೂರು, ಮಹಾರಾಷ್ಟ್ರ ಭಾಗಕ್ಕೆ ಗುಳೆ ಹೋಗಿ ಹೊಟ್ಟೆ ತುಂಬಿಸಿಕೊಳ್ತಾರೆ. ಬಹುತೇಕ ಜನ ಕಟ್ಟಡ ಕೆಲಸಕ್ಕೆ ಹೋಗುತ್ತಾರೆ. ಮನೆಗೆ ಹಿಂತಿರುಗಲು ವರ್ಷವೂ ಆಗಬಹುದು. ಆದರೆ, ಇದೀಗ ಮತ್ತೆ ಕೊರೊನಾ ಎರಡನೇ ಅಲೆ ಹಾಗೂ ಲಾಕ್ಡೌನ್ ಭೀತಿ ಜನರು ಮನೆಗೆ ಹಿಂತಿರುಗುತ್ತಿದ್ದಾರೆ.
ಗುಳೆ ಹೋದ ಜನ ತವರಿಗೆ ವಾಪಸ್ ಜಿಲ್ಲೆಯ ಜನರು ಸಾಮಾನ್ಯವಾಗಿ ದೂರದಲ್ಲಿರುವ ಮಂಗಳೂರು, ಉಡುಪಿ ಭಾಗಕ್ಕೆ ಗುಳೆ ಹೋಗುತ್ತಾರೆ. ಅದರಲ್ಲೂ ತಾಂಡಾದ ಜನ ಗುಳೆ ಹೋಗುವುದು ಹೆಚ್ಚು. ಕೊಪ್ಪಳ ಬಿಸಿಲ ನಾಡು. ಇಲ್ಲಿ ಕೆಲಸ ಕಡಿಮೆ, ಉದ್ಯೋಗವೂ ಹೆಚ್ಚಾಗಿ ಇರುವುದಿಲ್ಲ. ಹೀಗಾಗಿ ಕೆಲಸಗಳನ್ನು ಹುಡುಕಿಕೊಂಡು ಬೇರೆ ಬೇರೆ ಊರಿಗೆ ಗುಳೆ ಹೋಗುತ್ತಾರೆ ಇಲ್ಲಿನ ಜನ. ತಮ್ಮ ಮಕ್ಕಳು ಮರಿಗಳನ್ನು ಕರೆದುಕೊಂಡು ಗುಳೆ ಹೋಗಿ ದುಡಿದು ಜೀವನ ಸಾಗಿಸುತ್ತಾರೆ. ಇದೀಗ ಇಡೀ ದೇಶದಲ್ಲಿ ಕೊರೊನಾ ಅಲೆ ಜೋರಾಗಿದೆ. ಬೇರೆ ಬೇರೆ ಕಡೆಗಳಲ್ಲಿ ತಮ್ಮ ಕೆಲಸವನ್ನು ಕಂಡುಕೊಂಡ ಕಾರ್ಮಿಕರು, ತವರಿಗೆ ಹಿಂತಿರುಗುತ್ತಿದ್ದಾರೆ.
ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಐದರಿಂದ ಆರು ಸಾವಿರ ಜನರಲ್ಲಿ ಹೆಮ್ಮಾರಿ ಕೊರೊನಾ ಕಾಣಿಸಿಕೊಳ್ಳುತ್ತಿದೆ. ಸರ್ಕಾರ ಮತ್ತೆ ಲಾಕ್ಡೌನ್ ಮಾಡುವ ಹಾಗೆ ಮಾಡಬೇಡಿ ಎಂದು ಜನರಲ್ಲಿ ವಿನಂತಿಸಿಕೊಳ್ಳುತ್ತಿದೆ. ಲಾಕ್ಡೌನ್ ಜಾರಿಯಾಗಬಾರದು ಎಂದರೆ ಕೊರೊನಾ ತಡೆ ನಿಯಮಗಳನ್ನು ಜನರು ಸರಿಯಾಗಿ ಪಾಲಿಸಬೇಕು. ಒಂದು ಕಡೆ ಬಸ್ ಬಂದ್ ಆದ ಹಿನ್ನೆಲೆ ಮತ್ತೊಂದು ಕಡೆ ಲಾಕ್ಡೌನ್ ಭಯದಿಂದ ಗುಳೆ ಹೋದ ಕಾರ್ಮಿಕರು ತವರಿಗೆ ಹಿಂತಿರುಗಿ ಬರುತ್ತಿದ್ದಾರೆ.
ಒಂದೇ ಊರಲ್ಲಿ ಹಿಂತಿರುವಾಗ ಬಂದ 100 ಕ್ಕೂ ಹೆಚ್ಚು ಜನ
ಕುಣಕೇರಿ ತಾಂಡಾದಲ್ಲಿ ಲಂಬಾಣಿ ಸಮುದಾಯದ ಜನ ಹೆಚ್ಚು. ಇವರು ಗುಳೆ ಹೋಗಿ ತಮ್ಮ ಬದುಕು ನಡೆಸುತ್ತಾರೆ. ಇದೀಗ ಕೊರೊನಾ ಎರಡನೇ ಅಲೆ ಲಾಕ್ಡೌನ್ ಭೀತಿಗೆ ಹೆದರಿ ಕಾರ್ಮಿಕರು ವಾಪಸ್ ಆಗುತ್ತಿದ್ದಾರೆ.
ಕಾರ್ಮಿಕರಿಗೆ ಲಾಕ್ಡೌನ್ ಭೀತಿ ಮಾಹಾಮಾರಿ ಕೊರೊನಾ ಹಿನ್ನೆಲೆ ಕಳೆದ ವರ್ಷ ಲಾಕ್ಡೌನ್ ಆಗಿತ್ತು. ಗುಳೆ ಹೋದ ಕಾರ್ಮಿಕರು ವಾಪಸ್ ಬರಲು ಸಾಕಷ್ಟು ಕಷ್ಟ ಪಟ್ಟಿದ್ದರು. ಆಹಾರ ಸಿಗದೇ ತುತ್ತು ಅನ್ಬಕ್ಕೂ ಕಷ್ಟ ಪಡುವ ಪರಿಸ್ಥಿತಿ ಎದುರಾಗಿತ್ತು. ಅದೆಷ್ಟೋ ಕಾರ್ಮಿಕರು ನಡೆದುಕೊಂಡೇ ಊರು ಸೇರಿದ್ದರು. ದಿನ ಸಾಗುತ್ತಿದ್ದಂತೆ ಮತ್ತೆ ಲಾಕ್ಡೌನ್ ಆದರೆ ಅದೇ ಪರಿಸ್ಥಿತಿ ಬರುತ್ತದೆ ಎಂದು ಹೆದರಿದ ಕಾರ್ಮಿಕರು ಮುಂಜಾಗೃತಾ ಕ್ರಮವಾಗಿ ತವರಿಗೆ ಹಿಂತಿರುಗುತ್ತಿದ್ದಾರೆ.
ನಮ್ಮ ಜಿಲ್ಲೆಯ ಜನರು ಮಂಗಳೂರು, ಉಡುಪಿ, ಮಾಹಾರಷ್ಟ್ರ ಸೇರಿದಂತೆ ಅನೇಕ ಕಡೆ ಗುಳೆ ಹೋಗುತ್ತಾರೆ. ಇದೀಗ ಕೊರೊನಾ ಹಿನ್ನೆಲೆ ವಾಪಸ್ ಬರುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಈಗಾಗಲೇ ಜಿಲ್ಲಾಡಳಿತ ನೆರೆಯ ರಾಜ್ಯದಿಂದ ಬಂದವರ ಮಾಹಿತಿ ಸಂಗ್ರಹಿಸುತ್ತಿದೆ ಎಂದು ಜಿಲ್ಲಾಧಿಕಾರಿ ಕಿಶೋರ್ ಮಾಹಿತಿ ಹಂಚಿಕೊಂಡಿದ್ದಾರೆ.
ನಮ್ಮ ಗ್ರಾಮದಲ್ಲಿ ಪ್ರತಿ ವರ್ಷ ಗುಳೆ ಹೋಗುವುದು ಇಂದಿಗೂ ಜೀವಂತವಾಗಿದೆ. ಕಳೆದ ಬಾರಿ ಲಾಕ್ ಡೌನ್ ಆದಾಗ ಗ್ರಾಮಸ್ಥರಿಗೆ ಕಷ್ಟ ಎದುರಾಗಿತ್ತು. ಹಿಂತಿರುಗೆ ಮನೆಗೆ ತೆರಳಲು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ನಂತರದಲ್ಲಿ ಕಳೆದೆರಡು ತಿಂಗಳ ಹಿಂದೆ ಮತ್ತೆ ಗುಳೆ ಹೋದರು. ಇದೀಗ ಮತ್ತೆ ಲಾಕ್ಡೌನ್ ಆಗಬಹುದು ಎಂಬ ಭಯದಿಂದ ಕಾರ್ಮಿಕರೆಲ್ಲ ಹಿಂತಿರುಗಿ ಬರುತ್ತಿದ್ದಾರೆ ಎಂದು ಕುಣಕೇರಿ ಗ್ರಾಮಸ್ಥ ಟಿಕ್ಯಾ ನಾಯಕ್ ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಲಾಕ್ಡೌನ್ ಭೀತಿ: ವದಂತಿಗೆ ಬೆದರಿ ಗುಳೆ ಹೊರಟ ಕೂಲಿ ಕಾರ್ಮಿಕರು
ಹೊಟ್ಟೆಪಾಡಿಗಾಗಿ ಗುಳೆ ಹೋಗುತ್ತಿರುವ ಬಾಗಲಕೋಟೆಯ ಈ ಗ್ರಾಮದ ಜನರು; ನೀರಾವರಿ ವ್ಯವಸ್ಥೆ ಕಲ್ಪಿಸಲು ಆಗ್ರಹ