ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರ ನಡುವೆ ತಡರಾತ್ರಿ ಮಾರಾಮಾರಿ
ಕಿರುವತ್ತಿ ಮತ್ತು ಮುದ್ನೂರ್ ಗ್ರಾಮ ಪಂಚಾಯತಿ ಸದಸ್ಯರ ನಡುವೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ವಿಚಾರವಾಗಿ ಡಾಬಾವೊಂದರಲ್ಲಿ ಗಲಾಟೆ ನಡೆದಿದೆ.
ಕಾರವಾರ: ಪ್ರವಾಸಕ್ಕೆ ಹೋಗಿದ್ದ ವೇಳೆ ಮದ್ಯದ ನಶೆಯಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರ ನಡುವೆ ತಡರಾತ್ರಿ ಗಲಾಟೆ ನಡೆದಿದ್ದು, ಈ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿಯ ಡಾಬಾದಲ್ಲಿ ಸಂಭವಿಸಿದೆ. ಹೊಡೆದಾಟದ ನಂತರ ಕೆಲ ಸದಸ್ಯರ ಗುಂಪು ಸ್ಥಳದಿಂದ ಪರಾರಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಿರುವತ್ತಿ ಮತ್ತು ಮುದ್ನೂರ್ ಗ್ರಾಮ ಪಂಚಾಯತಿ ಸದಸ್ಯರ ನಡುವೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ವಿಚಾರವಾಗಿ ಡಾಬಾವೊಂದರಲ್ಲಿ ಗಲಾಟೆ ನಡೆದಿದೆ. ಹೊಡೆದಾಟದ ನಂತರ ಕೇಸ್ ಕೂಡ ದಾಖಲಿಸದೇ ಕೆಲ ಸದಸ್ಯರ ಗುಂಪು ಸ್ಥಳದಿಂದ ಪರಾರಿಯಾಗಿದೆ. ಮಾರಾಮಾರಿಯಲ್ಲಿ 5ಕ್ಕೂ ಹೆಚ್ಚು ಸದಸ್ಯರಿಗೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಟೋ, ಡಿಯೋ ಸ್ಕೂಟರ್ಗೆ ಲ್ಯಾಂಬೋರ್ಗಿನಿ ಕಾರ್ ಡಿಕ್ಕಿ: ಅಪಘಾತವೆಸಗಿದ ಚಾಲಕ ಶರವೇಗದಲ್ಲಿ ಎಸ್ಕೇಪ್
Published On - 12:32 pm, Mon, 8 February 21