ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಕುಸ್ತಿ! ಮಧ್ಯೆ ಪರಮೇಶ್ವರ್​ ಇಣುಕಿ ನೋಡ್ತಿದ್ದಾರೆ: ಡಿಸಿಎಂ ಗೋವಿಂದ ಕಾರಜೋಳ

| Updated By: ಸಾಧು ಶ್ರೀನಾಥ್​

Updated on: Jun 22, 2021 | 4:36 PM

Govind Karjol: ತಮ್ಮ ಪಕ್ಷದ ಪ್ರಚಲಿತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ  ಅವರು ನಮ್ಮಲ್ಲಿ ಪೂರ್ಣಾವಧಿಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿರುತ್ತಾರೆ. ಬಿಜೆಪಿಯವರು ಸ್ವಂತ ಕೆಲಸದ ಮೇಲೆ ದೆಹಲಿಗೆ ಹೊರಟಿದ್ದಾರೆ. ರಾಜೀನಾಮೆ ಬಗ್ಗೆ ರಮೇಶ ಜಾರಕಿಹೊಳಿ ಎಲ್ಲಿಯೂ ಹೇಳಿಲ್ಲ. ಅದು ಕೇವಲ ಮಾಧ್ಯಮಗಳ ಸೃಷ್ಟಿ ಅಷ್ಟೇ ಎಂದರು. 

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಕುಸ್ತಿ! ಮಧ್ಯೆ ಪರಮೇಶ್ವರ್​ ಇಣುಕಿ ನೋಡ್ತಿದ್ದಾರೆ: ಡಿಸಿಎಂ ಗೋವಿಂದ ಕಾರಜೋಳ
ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಕುಸ್ತಿ! ಮಧ್ಯೆ ಪರಮೇಶ್ವರ್​ ಸಹ ಇಣುಕಿ ನೋಡ್ತಿದ್ದಾರೆ: ಡಿಸಿಎಂ ಗೋವಿಂದ ಕಾರಜೋಳ
Follow us on

ಧಾರವಾಡ: ರಾಜ್ಯದಲ್ಲಿ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಇನ್ನೂ ಒಂದೂ ಮುಕ್ಕಾಲು ವರ್ಷ ಇದೆ.  ಚುನಾವಣೆ ಬಳಿಕ ಬಹುಮತ ಬಂದವರು ಮುಖ್ಯಮಂತ್ರಿ ಆಗುತ್ತಾರೆ. ಆದರೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ ಮಧ್ಯೆ ಕುಸ್ತಿ ಶುರುವಾಗಿದೆ ಎಂದು ಧಾರವಾಡದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ. 

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​  ಮಧ್ಯದಲ್ಲಿ ಒಬ್ಬರು ಇಣುಕು ಹಾಕುತ್ತಿದ್ದಾರೆ. ಡಾ. ಜಿ. ಪರಮೇಶ್ವರ್​ ಕಷ್ಟದ ದಿನಗಳಲ್ಲಿ ಅಧ್ಯಕ್ಷರಾಗಿದ್ದವರು. ಇನ್ನೇನು ಮುಖ್ಯಮಂತ್ರಿ ಆಗಬೇಕು ಎನ್ನುವಾಗಲೇ ಅವರನ್ನು ಸೋಲಿಸಿದ್ದರು. ಈಗ ಪರಮೇಶ್ವರ್ ಅವರೇ ಮುಖ್ಯಮಂತ್ರಿ ಆಗುವ ಚಿಂತನೆಯಲ್ಲಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷದ ಸದ್ಯದ ಪರಿಸ್ಥಿತಿ ಬಗ್ಗೆ ವ್ಯಂಗ್ಯವಾಡಿದರು. ​

ಇನ್ನು ತಮ್ಮ ಪಕ್ಷದ ಪ್ರಚಲಿತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ  ಅವರು ನಮ್ಮಲ್ಲಿ ಪೂರ್ಣಾವಧಿಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿರುತ್ತಾರೆ. ಬಿಜೆಪಿಯವರು ಸ್ವಂತ ಕೆಲಸದ ಮೇಲೆ ದೆಹಲಿಗೆ ಹೊರಟಿದ್ದಾರೆ. ರಾಜೀನಾಮೆ ಬಗ್ಗೆ ರಮೇಶ ಜಾರಕಿಹೊಳಿ ಎಲ್ಲಿಯೂ ಹೇಳಿಲ್ಲ. ಅದು ಕೇವಲ ಮಾಧ್ಯಮಗಳ ಸೃಷ್ಟಿ ಅಷ್ಟೇ ಎಂದರು.

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇದ್ರ ಫಡ್ನವೀಸ್​ ಅವರು  ರಮೇಶ ಜಾರಕಿಹೊಳಿಗೆ ಮೊದಲಿನಿಂದಲೂ ಪರಿಚಯ. ಆಗಾಗ ಭೇಟಿ ಆಗುತ್ತಲೇ ಇರುತ್ತಾರೆ. ಬೆಳಗಾವಿಯಲ್ಲಿದ್ದವರಿಗೆ ಮಹಾರಾಷ್ಟ್ರ ಸಂಪರ್ಕ ಜಾಸ್ತಿ. ಬೆಳಗಾವಿ ರಾಜಕೀಯ ನಾಯಕರು ಮಹಾರಾಷ್ಟ್ರ ರಾಜಕೀಯ ನಾಯಕರನ್ನು ಆಗಾಗ ಭೇಟಿಯಾಗುತ್ತಾ ಇರುತ್ತಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ  ಸಮಜಾಯಿಷಿ ನೀಡಿದರು.

(Fight for chief minister among siddaramaiah, dk shivakumar and g parameshwara says dcm govind karjol)

Published On - 4:35 pm, Tue, 22 June 21