ಬೆಂಗಳೂರು: ಸೈಬರ್ ಅಪರಾಧಿಗಳ ವಿರುದ್ಧ ಸಿಬಿಐ ಆಪರೇಷನ್ ಚಕ್ರ (Operation Chakra) ಅಸ್ತ್ರ ಪ್ರಯೋಗಿಸಿದ್ದು, ಆಪರೇಷನ್ ಚಕ್ರ ಹೆಸರಿನಲ್ಲಿ ಸಿಬಿಐ ದೇಶಾದ್ಯಂತ 115 ಕಡೆ ನಡೆಸಿದೆ. ಕರ್ನಾಟಕದಲ್ಲೂ ಸಹ ದಾಳಿಯಾಗಿದ್ದು, ಈ ವೇಳೆ ಎಷ್ಟು ಹಣ ಜಪ್ತಿ ಮಾಡಲಾಗಿದೆ ಎನ್ನುವ ಮಾಹಿತಿ ನೀಡಿದೆ.
ರಾಜ್ಯದಲ್ಲಿ 1 ಕೋಟಿ 89 ಲಕ್ಷ ಹಣ ಜಪ್ತಿ ಮಾಡಲಾಗಿದೆ. ಆಪರೇಶನ್ ಚಕ್ರ ಹೆಸರಿನಲ್ಲಿ ಕರ್ನಾಟಕದ 12 ಕಡೆ ನಡೆದಿತ್ತು. ಇದೇ ವೇಳೆ ಕರ್ನಾಟಕದ ವಿವಿಧ ಬ್ಯಾಂಕ್ ಖಾತೆಗಳಿಂದ ಸಿಬಿಐ 1.89 ಕೋಟಿ ರೂ. ಜಪ್ತಿ ಮಾಡಿದೆ ಎಂದು ಮಾಹಿತಿ ತಿಳಿದುಬಂದಿದೆ.
ಸಿಬಿಐ, ಯೂನಿಯನ್ ಟೆರಿಟರಿ ಪೊಲೀಸ್ ಫೋರ್ಸ್, ಇಂಟರ್ಪೋಲ್, ಎಫ್.ಬಿ.ಐ, ಕೆನಡಿಯನ್ ಪೊಲೀಸ್, ಹಾಗೂ ಆಸ್ಟ್ರೇಲಿಯಾ ಪೊಲೀಸ್ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಸೈಬರ್ ಕ್ರೈಂ ಗ್ಯಾಂಗ್ ಗಳ ಮೇಲೆ ದಾಳಿ ನಡೆದಿತ್ತು.
ಸೈಬರ್ ಅಪರಾಧಿಗಳ ವಿರುದ್ಧ ಅಪರೇಷನ್ ಚಕ್ರ ಹೆಸರಿನಡಿ ಸಿಬಿಐ ಈ ಕಾರ್ಯಾಚರಣೆ ಕೈಗೊಂಡಿದೆ. ಇದರಂತೆ ಒಟ್ಟು 300 ಅಪರಾಧಿಗಳಿಗಾಗಿ 105 ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದ್ದು, ಇದರಲ್ಲಿ ಸುಮಾರು 87 ಪ್ರದೇಶಗಳಲ್ಲಿ ಸಿಬಿಐ ಶೋಧ ನಡೆಸಿದ್ದರೆ, ಇನ್ನುಳಿದ ಪ್ರದೇಶಗಳಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:06 pm, Wed, 5 October 22