ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ; ಸೇಡಂ ಠಾಣೆ ಪಿಎಸ್‌ಐ ನಾನಾಗೌಡ ಪಾಟೀಲ್ ವಿರುದ್ಧ ಎಫ್ಐಆರ್

| Updated By: ಆಯೇಷಾ ಬಾನು

Updated on: Jul 18, 2021 | 11:18 AM

ಕಲಬುರಗಿ ಜಿಲ್ಲೆ ಸೇಡಂ ಠಾಣೆ ಪಿಎಸ್‌ಐ ನಾನಾಗೌಡ ಪಾಟೀಲ್ ವಿರುದ್ಧ ನಂದಿ ಅನಿಮಲ್ ವೆಲ್ಫೇರ್ ಸೊಸೈಟಿ ಮುಖ್ಯಸ್ಥ ಹುಣಚಿರಾಯ್ ಮೋಟಗಿ ನೀಡಿದ್ದ ದೂರು ಆಧರಿಸಿ ಎಫ್ಐಆರ್ ದಾಖಲಾಗಿದೆ.

ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ; ಸೇಡಂ ಠಾಣೆ ಪಿಎಸ್‌ಐ ನಾನಾಗೌಡ ಪಾಟೀಲ್ ವಿರುದ್ಧ ಎಫ್ಐಆರ್
ಪ್ರಾತಿನಿಧಿಕ ಚಿತ್ರ
Follow us on

ಕಲಬುರಗಿ: ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆ ಸೇಡಂ ಠಾಣೆ ಪಿಎಸ್‌ಐ ನಾನಾಗೌಡ ಪಾಟೀಲ್ ವಿರುದ್ಧ ದೂರು ದಾಖಲಾಗಿದೆ. ನಂದಿ ಅನಿಮಲ್ ವೆಲ್ಫೇರ್ ಸೊಸೈಟಿ ಮುಖ್ಯಸ್ಥ ಹುಣಚಿರಾಯ್ ಮೋಟಗಿ ನೀಡಿದ್ದ ದೂರು ಆಧರಿಸಿ ಎಫ್ಐಆರ್ ದಾಖಲಾಗಿದೆ.

ಸೇಂಡ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 47 ಜಾನುವಾರುಗಳನ್ನು ಪಿಎಸ್ಐ ನಾನಾಗೌಡ ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಜಿಲ್ಲಾಡಳಿತದ ಸೂಚನೆ ಮೇರೆಗೆ ಜಾನುವಾರುಗಳನ್ನು ಹುಣಚಿರಾಯ್ ಅವರ ಗೋ ಶಾಲೆಗೆ ಕಳುಹಿಸಲಾಗಿತ್ತು.

ಈ ವೇಳೆ 1 ಜಾನುವಾರು ಮೃತಪಟ್ಟಿದೆ. ಈ ಹಿನ್ನೆಲೆಯಲ್ಲಿ ಪಿಎಸ್‌ಐ ನಾನಾಗೌಡ ಫೋನ್‌ನಲ್ಲಿ ಹುಣಚಿರಾಯ್ ಮೋಟಗಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಕಲಬುರಗಿ ಗ್ರಾಮೀಣ ಠಾಣೆಗೆ ಹುಣಚಿರಾಯ್‌ರಿಂದ ದೂರು ದಾಖಲಾಗಿದೆ. ಹೀಗಾಗಿ ನಿಂದನೆ ಆರೋಪ ಹಿನ್ನೆಲೆಯಲ್ಲಿ ಪಿಎಸ್ಐ ನಾನಾಗೌಡ ಪಾಟೀಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ: Prem Press Meet: ದರ್ಶನ್ ‘ಪುಡಾಂಗ್’ ಪದ ಬಳಸಿದ್ದರಿಂದ ಬಹಳ ಬೇಸರವಾಗಿದೆ; ನಿರ್ದೇಶಕ ಪ್ರೇಮ್