AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯಲ್ಲಿ ಧಾರಾಕಾರ ಮಳೆಗೆ ಕೆಇಬಿ ಉಪಕೇಂದ್ರದ ಕಚೇರಿ ಜಲಾವೃತ; ಇಬ್ಬರು ಸಿಬ್ಬಂದಿಯ ರಕ್ಷಣೆ

ಜಿಲ್ಲೆಯಲ್ಲಿ 124.7 ಮಿಲಿಮೀಟರ್ ಮಳೆ ದಾಖಲಾಗಿದೆ. ದಾವಣಗೆರೆ ತಾಲೂಕಿನ ಕಾಡಜ್ಜಿ ಕೃಷಿ ತರಬೇತಿ ಕೇಂದ್ರದ ಮಳೆ ಮಾಪನ ಕೇಂದ್ರದಲ್ಲಿ ಮಳೆ ದಾಖಲಾಗಿದೆ. ಕಂದಾಯ ಇಲಾಖೆಯಿಂದ ಮಳೆ ಹಾನಿ ಸಮೀಕ್ಷೆ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.

ದಾವಣಗೆರೆಯಲ್ಲಿ ಧಾರಾಕಾರ ಮಳೆಗೆ ಕೆಇಬಿ ಉಪಕೇಂದ್ರದ ಕಚೇರಿ ಜಲಾವೃತ; ಇಬ್ಬರು ಸಿಬ್ಬಂದಿಯ ರಕ್ಷಣೆ
ಇಬ್ಬರು ಕೆಇಬಿ ಸಿಬ್ಬಂದಿಯನ್ನು ರಕ್ಷಿಸಲಾಗಿದೆ
TV9 Web
| Updated By: sandhya thejappa|

Updated on: Jul 18, 2021 | 10:32 AM

Share

ದಾವಣಗೆರೆ: ಜಿಲ್ಲೆಯಲ್ಲಿ ರಾತ್ರಿಯಿಡೀ ಧಾರಾಕಾರ ಮಳೆಯಾಗಿದ್ದು, ಕಾಡಜ್ಜಿ-ಆಲೂರು ಹಳ್ಳ ಭರ್ತಿಯಾಗಿದೆ. ಇದರಿಂದ ಕಾಡಜ್ಜಿಯ ಕೆಇಬಿ (KEB) ಉಪಕೇಂದ್ರದ ಕಚೇರಿ ಜಲಾವೃತವಾಗಿದ್ದು, ಕಚೇರಿಯಲ್ಲಿ ಇಬ್ಬರು ಕೆಇಬಿ ಸಿಬ್ಬಂದಿಗಳು ಸಿಲುಕಿದ್ದರು. ಕಚೇರಿಯಲ್ಲಿ ಸಿಲುಕಿದ್ದ ಇಬ್ಬರನ್ನು ಇದೀಗ ರಕ್ಷಣೆ ಮಾಡಲಾಗಿದೆ. ಕಾಡಜ್ಜಿ ಆಲೂರು ನಡುವಿನ ಹಳ್ಳ ತುಂಬಿ ಹರಿಯುತ್ತಿದೆ. ಅಪಾರ ಪ್ರಮಾಣದ ಬೆಳೆಗೆ ನೀರು ನುಗ್ಗಿದೆ. ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಒಂದು ನೂರು ಎಕರೆ ಪ್ರದೇಶದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಟ್ನಳ್ಳಿ ಕೆರೆಗೆ ಕೊಡಿ ಬಿದ್ದು ಅಪಾರ ಪ್ರಮಾಣದ ನೀರು ಬೆಳೆ ಹಾಗೂ ಮನೆಗಳಿಗೆ ನುಗ್ಗಿದೆ. ಇದೇ ತಾಲೂಕಿನ ಬೇವಿನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೆಳೆ ಹಾನಿಯಾಗಿದ್ದು, ಬೇವಿನಹಳ್ಳಿಯ ಕೃಷ್ಣ ನಾಯ್ಕ ಎಂಬುವರಿಗೆ ಸೇರಿದ ಮೂರು ಎಕರೆ ಅಡಿಕೆ ನಾಶವಾಗಿದೆ.

ಜಿಲ್ಲೆಯಲ್ಲಿ 124.7 ಮಿಲಿಮೀಟರ್ ಮಳೆ ದಾಖಲಾಗಿದೆ. ದಾವಣಗೆರೆ ತಾಲೂಕಿನ ಕಾಡಜ್ಜಿ ಕೃಷಿ ತರಬೇತಿ ಕೇಂದ್ರದ ಮಳೆ ಮಾಪನ ಕೇಂದ್ರದಲ್ಲಿ ಮಳೆ ದಾಖಲಾಗಿದೆ. ಕಂದಾಯ ಇಲಾಖೆಯಿಂದ ಮಳೆ ಹಾನಿ ಸಮೀಕ್ಷೆ ಮಾಡುವಂತೆ ರೈತರು ಆಗ್ರಹಿಸಿದ್ದಾರೆ. ರಸ್ತೆಗಳು ಸಂಪೂರ್ಣ ಜಲಾವೃತ ಚಿತ್ರದುರ್ಗದಲ್ಲೂ ತಡರಾತ್ರಿ ಸುರಿದ ಮಳೆಯಿಂದ ಗುಮಾಸ್ತ ಕಾಲೋನಿಯ ರಸ್ತೆಗಳು ಸಂಪೂರ್ಣ ಜಲಾವೃತವಾಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುತ್ತಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ ಮುಂದುವರೆದಿದೆ. ಜಿಟಿಜಿಟಿ ಮಳೆ ರಾತ್ರಿಯಿಂದ ಬರುತ್ತಿರುವ ಹಿನ್ನೆಲೆ ಹಲವೆಡೆ ರಸ್ತೆಗಳು ನೀರಿನಿಂದ ತುಂಬಿವೆ.

ಇನ್ನು ಹಾಸನದಲ್ಲೂ ವಿವಿಧೆಡೆ ಮಳೆ ಮುಂದುವರಿದಿದೆ. ತಡರಾತ್ರಿಯಿಂದಲೂ ಎಡಬಿಡದೆ ಸುರಿಯುತ್ತಿದೆ. ಬೇಲೂರು, ಸಕಲೇಶಪುರ, ಹಾಸನ, ಆಲೂರಿನಲ್ಲಿ ಧಾರಾಕಾರ ಮಳೆಯಿಂದಾಗಿ ನದಿ ತೊರೆಗಳು ತುಂಬಿ ಹರಿಯುತ್ತಿವೆ. ನಿನ್ನೆ ಕೊಂಚ ಬಿಡುವು ನೀಡಿದ್ದ ಮಳೆ ಇಂದು ಮತ್ತೆ ಆರಂಭವಾಗಿದೆ.

ಮಳೆ ಬಂದರೆ ತುಮಕೂರಿನ ರಸ್ತೆಗಳು ಕೆರೆಯಂತೆ ಕಾಣುತ್ತವೆ. ಓಡಾಡಲು ಜನ ಪರದಾಡುತ್ತಿದ್ದಾರೆ. ಆದರೆ ಜನರ ಗೋಳು ಕೇಳಲು ಯಾರು ಮುಂದೆ ಬರುತ್ತಿಲ್ಲ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಅಕ್ಕಮ್ಮನಹಳ್ಳಿಯಲ್ಲಿ ಗ್ರಾಮದಲ್ಲಿ ಚರಂಡಿ ಇಲ್ಲದೆ ನೀರು ಹರಿಯದೆ ನಿಂತಿದೆ. ಕೊಳಚೆ ನೀರು ಮಳೆ ನೀರಲ್ಲಿ ಸೇರಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಶುರುವಾಗಿದೆ. ರಸ್ತೆಯಲ್ಲಿ ನಿಂತ ನೀರನ್ನ ಚರಂಡಿ ಮೂಲಕ ಹರಿಸುವಂತೆ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲೂ ಧಾರಾಕರ ಮಳೆಯಿಂದ ಬೆಳೆಗಳು ಜಲಾವೃತವಾಗಿದೆ. ರೈತರು ಬೆಳೆದ ತರಕಾರಿ, ಹೂ ಬೆಳೆಗಳು ಜಲಾವೃತವಾಗಿವೆ. ಉತ್ತರಕನ್ನಡದ ಹಲವು ಕಡೆ ಸುರಿದ ಭಾರೀ ಮಳೆಯಿಂದ ತಗ್ಗು ಪ್ರದೇಶಗಳು ನೀರಿನಿಂದ ಮುಚ್ಚಿ ಹೋಗಿವೆ. ರಸ್ತೆಯಲ್ಲಿ ನೀರು ನಿಂತು ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ.

ಇದನ್ನೂ ಓದಿ

Karnataka Weather: ಕರ್ನಾಟಕದಲ್ಲಿ ಜುಲೈ 21 ರ ತನಕ ಭಾರೀ ಮಳೆ ಸಾಧ್ಯತೆ; SSLC ಪರೀಕ್ಷೆಗೆ ತೆರಳುವಾಗ ಎಚ್ಚರದಿಂದಿರಿ ಮಕ್ಕಳೇ

ಅಪ್ಪನಿಗೆ ಬ್ಯಾಟರಿ ಚಾಲಿತ ಬೈಕ್, ಮಗನಿಗೆ ಜೀಪ್; ಲಾಕ್​ಡೌನ್​ ಸಮಯವನ್ನು ಸದುಪಯೋಗ ಮಾಡಿಕೊಂಡ ಬೀದರ್ ವ್ಯಕ್ತಿ

(KEB sub office sinks in torrential rain in Davanagere)