ಮಂಡ್ಯ: ಕೆರೆಯ ಹೂಳೆತ್ತುವಾಗ ಮನುಷ್ಯನ ತಲೆ ಬುರುಡೆ, ಕೈಕಾಲಿನ ಮೂಳೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಕೆರೆಯ ಅಂಗಳದಲ್ಲಿ ಪತ್ತೆಯಾಗಿರುವ ಮೂಳೆಗಳು ಹಾಗೂ ತಲೆ ಬುರುಡೆ ಪತ್ತೆಯಾಗಿರುವ ಸ್ಥಳದಲ್ಲಿ ಸಿಕ್ಕಿರುವ ಕೆಲವು ವಸ್ತುಗಳನ್ನು ಗಮನಿಸಿದಾಗ ಇದೊಂದು ಮಹಿಳೆಯ ಶವ ಎನ್ನುವ ಅನುಮಾನವಿದೆಯಾದರೂ, ಈಗಲೇ ಯಾವುದೇ ತೀರ್ಮಾನಕ್ಕೆ ಬರಲಾಗುವುದಿಲ್ಲ. ಸದ್ಯ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಾರಂಭಿಸಲಾಗುತ್ತದೆ ಎಂದು ಮಂಡ್ಯ ಎಸ್​ಪಿ ಡಾ. ಅಶ್ವಿನಿ ಹೇಳಿದ್ದಾರೆ.

ಮಂಡ್ಯ: ಕೆರೆಯ ಹೂಳೆತ್ತುವಾಗ ಮನುಷ್ಯನ ತಲೆ ಬುರುಡೆ, ಕೈಕಾಲಿನ ಮೂಳೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ
ಕೆರೆಯ ಹೂಳೆತ್ತುವಾಗ ಮನುಷ್ಯನ ತಲೆ ಬುರುಡೆ, ಕೈಕಾಲಿನ ಮೂಳೆ ಪ್ರತ್ಯಕ್ಷ

ಮಂಡ್ಯ: ಜಿಲ್ಲೆಯ ಪ್ರಮುಖ ಕೆರೆಗಳಲ್ಲಿ ಒಂದಾಗಿರುವ ಚಿಕ್ಕ ಕೆರೆ ಬೇಸಿಗೆಯಲ್ಲಿ ನೀರಿಲ್ಲದೆ ಸಂಪೂರ್ಣ ಒಣಗಿ ಹೋಗುತ್ತದೆ. ಆದರೆ ಮಳೆಗಾಲದಲ್ಲಿ ಪೂರ್ಣ ಮಟ್ಟಕ್ಕೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಈ ಬಾರಿ ಕೆರೆಯಲ್ಲಿ ಕಡಿಮೆ ನೀರು ಸಂಗ್ರಹವಾಗಿದ್ದು, ಹೀಗಾಗಿ ಕೆರೆಯಲ್ಲಿ ಹೂಳು ತೆಗೆಸುವ ಕೆಲಸ ಆರಂಭವಾಗಿದೆ. ಆದರೆ ಕೆರೆಯ ಹೂಳೆತ್ತುವಾಗ ವಿಚಿತ್ರವಾದ ಘಟನೆಯೊಂದು ನಡೆದಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಕೆರೆಯಲ್ಲಿ ಮನುಷ್ಯನ ತಲೆ ಬುರುಡೆ ಸೇರಿದಂತೆ ಕೈ ಕಾಲಿನ ಮೂಳೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಶವವೊಂದು ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಗೋಚರವಾಗಿದೆ.

ಮಂಡ್ಯ ತಾಲೂಕಿನ ಬಸರಾಳು ಗ್ರಾಮದಲ್ಲಿನ ಚಿಕ್ಕ ಕೆರೆಯಲ್ಲಿ ಈ ಘಟನೆ ನಡೆದಿದ್ದು, ಚಿಕ್ಕ ಕೆರೆಯ ಅಂಗಳದಲ್ಲಿ ಮನುಷ್ಯನ ತಲೆ ಬುರುಡೆ ಸಿಕ್ಕಿದೆ. ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಆ ಬುರುಡೆಯ ಹತ್ತಿರ ಹೋಗಿ ನೋಡಿದ್ದು, ಮತ್ತೊಂದು ಅಚ್ಚರಿ ಕಂಡು ಬಂದಿದೆ. ಆ ತಲೆ ಬುರುಡೆ ಪತ್ತೆಯಾದ ಒಂದಷ್ಟು ದೂರದಲ್ಲಿ ಕೈ ಕಾಲುಗಳ ಮೂಳೆಗಳು ಬಿದ್ದಿದ್ದವು ಎಂದು ಸ್ಥಳಿಯರಾದ ತಿಮ್ಮೇಗೌಡ ತಿಳಿಸಿದ್ದಾರೆ.

ಬಸರಾಳು ಗ್ರಾಮದ ಜನರು ಪ್ರತೀ ನಿತ್ಯ ಆ ಕೆರೆಯ ಅಂಗಳದಲ್ಲೇ ಓಡಾಡುತ್ತಿದ್ದರೂ, ಈ ರೀತಿ ತಲೆ ಬುರುಡೆ ಕೈ ಕಾಲುಗಳ ಮೂಳೆಗಳು ಯಾವಾಗಲೂ ಕಾಣಿಸಿಕೊಂಡಿರಲಿಲ್ಲ. ಕೆರೆಯ ಸಮೀಪದಲ್ಲೇ ಸ್ಮಶಾನ ಇರುವುದರಿಂದ ನಾಯಿಗಳು ಏನಾದರೂ ಈ ಮೂಳೆಗಳನ್ನು ಎಳೆದು ತಂದು ಕೆರೆ ಅಂಗಳದಲ್ಲಿ ಬಿಸಾಡಿಸಿದ್ದವಾ ಎಂಬ ಬಗೆಗೆ ಪ್ರಾರಂಭದಲ್ಲಿ ಅನುಮಾನ ಇತ್ತು ಎಂದು ಸ್ಥಳೀಯರಾದ ಚಂದನ್ ಹೇಳಿದ್ದಾರೆ.

ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಬಸರಾಳು ಠಾಣೆ ಪೊಲೀಸರು ತಲೆ ಬುರುಡೆ ಬಿದ್ದಿದ್ದ ಸ್ಥಳದ ಸುತ್ತಲೂ ಪರೀಕ್ಷೆ ನಡೆಸಿದ್ದು, ಅಲ್ಲಿ ಕೊಳೆತಿರುವ ಸ್ಥಿತಿಯಲ್ಲಿ ಒಂದು ಶವವೂ ಇದೆ ಎನ್ನುವುದು ಗೊತ್ತಾಗಿದೆ. ಶವ ಬಿದ್ದಿರುವ ಸ್ಥಳದಲ್ಲಿ ಒಂದಷ್ಟು ಮೂಳೆಗಳಿದ್ದು, ತಲೆ ಕೂದಲು ಉದ್ದ ಇದೆ. ಅಲ್ಲದೆ, ವೇಲ್ ಸಹ ಬಿದ್ದಿದ್ದು ಮೇಲ್ನೋಟಕ್ಕೆ ಇದೊಂದು ಕೊಲೆ ಅನ್ನಿಸಿದೆಯಾದರೂ, ಇಲ್ಲಿ ಮೂಳೆಗಳಾಗಿ ಸಿಕ್ಕಿರುವುದು ಯಾರು ಎನ್ನುವುದು ಪತ್ತೆಯಾಗದೇ ಯಾವುದೇ ನಿರ್ಧಾರಕ್ಕೆ ಬರುವುದಕ್ಕೆ ಸಾಧ್ಯವಿಲ್ಲ. ಹೀಗಾಗಿಯೇ ಮೂಳೆಗಳನ್ನು ಸಂಗ್ರಹಿಸಿ ಲ್ಯಾಬ್​ಗೆ ಕಳುಹಿಸಿಕೊಟ್ಟಿದ್ದು, ಸುತ್ತಮುತ್ತಲ ಠಾಣೆಗಳಲ್ಲಿ ಯಾವುದಾದರೂ ನಾಪತ್ತೆ ಕೇಸ್ ದಾಖಲಾಗಿದೆಯಾ ಎಂಬುದನ್ನು ನೋಡಬೇಕಿದೆ ಎಂದು ಮಂಡ್ಯ ಎಸ್​ಪಿ ಡಾ. ಅಶ್ವಿನಿ ತಿಳಿಸಿದ್ದಾರೆ.

ಕೆರೆಯ ಅಂಗಳದಲ್ಲಿ ಪತ್ತೆಯಾಗಿರುವ ಮೂಳೆಗಳು ಹಾಗೂ ತಲೆ ಬುರುಡೆ ಪತ್ತೆಯಾಗಿರುವ ಸ್ಥಳದಲ್ಲಿ ಸಿಕ್ಕಿರುವ ಕೆಲವು ವಸ್ತುಗಳನ್ನು ಗಮನಿಸಿದಾಗ ಇದೊಂದು ಮಹಿಳೆಯ ಶವ ಎನ್ನುವ ಅನುಮಾನವಿದೆಯಾದರೂ, ಈಗಲೇ ಯಾವುದೇ ತೀರ್ಮಾನಕ್ಕೆ ಬರಲಾಗುವುದಿಲ್ಲ. ಸದ್ಯ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಾರಂಭಿಸಲಾಗುತ್ತದೆ ಎಂದು ಮಂಡ್ಯ ಎಸ್​ಪಿ ಡಾ. ಅಶ್ವಿನಿ ಹೇಳಿದ್ದಾರೆ.

ಇದನ್ನೂ ಓದಿ:
Explainer: ನಮ್ಮ ಮೂಲ ಯಾವುದು? ಚೀನಾದಲ್ಲಿ ಸಿಕ್ಕ ಹಳೇ ತಲೆಬುರುಡೆ ಹೇಳಿದ ಹೊಸ ಪಾಠಗಳಿವು

ಗೃಹಿಣಿ ಮೇಲೆ ಕಣ್ಣು.. ತನಗೆ ಸಹಕರಿಸ್ತಿಲ್ಲ ಅಂತಾ ಈ ಪಾಪಿ ಮಾಡಿದ್ದು ಭಯಾನಕ ಕೃತ್ಯ, ಪೊಲೀಸರಿಗೆ ಪತ್ತೆಯಾಯ್ತು ಮಗುವಿನ ತಲೆ ಬುರಡೆ