ಬೆಂಗಳೂರು: ನಾನ್ಯಾರು ಗೊತ್ತಾ?.. 3 ಬಾರಿ ಚುನಾವಣೆ ಸ್ಪರ್ಧಿಸಿ ಸೋತವನು. ನನ್ನ ಹೆಸರು ಜವರಾಯಿಗೌಡನೆಂದು ಎಂದು ಆವಾಜ್ ಹಾಕಿದ ಆರೋಪದಡಿ JDS ಪರಾಜಿತ ಅಭ್ಯರ್ಥಿಯೊಬ್ಬರ ವಿರುದ್ಧ FIR ದಾಖಲು ಆಗಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಪರಾಜಿತ JDS ಅಭ್ಯರ್ಥಿ ಜವರಾಯಿಗೌಡ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ FIR ದಾಖಲಾಗಿದೆ.
IPC ಸೆಕ್ಷನ್ 447, 341, 504, 506ರಡಿ ದೂರು ದಾಖಲಾಗಿದೆ. ನಾನ್ಯಾರು ಗೊತ್ತಾ? 3 ಬಾರಿ ಚುನಾವಣೆ ಸ್ಪರ್ಧಿಸಿ ಸೋತವನು. ನನ್ನ ಹೆಸರು ಜವರಾಯಿಗೌಡನೆಂದು ನವೀನ್ ಎಂಬುವವರಿಗೆ ಆವಾಜ್ ಹಾಕಿದ್ದರು ಎಂಬ ಆರೋಪ ಕೇಳಿಬಂದಿದೆ. ಹಾಗಾಗಿ, ನವೀನ್ ನೀಡಿದ್ದ ದೂರಿನ ಮೇರೆಗೆ FIR ದಾಖಲಾಗಿದೆ.
ಪಂಜಾಬ್ CM ಅಮರೀಂದರ್ ಹತ್ಯೆ ಮಾಡಿದರೆ 10 ಲಕ್ಷ ಬಹುಮಾನ -ಮೊಹಾಲಿಯಲ್ಲಿ ರಾರಾಜಿಸಿವೆ ಪೋಸ್ಟರ್ಗಳು