ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಅವರ ಗಾಡ್ಫಾದರ್ ಪ್ರಚಾರಪ್ರಿಯರು -ರಮೇಶ್ ಜಾರಕಿಹೊಳಿ ಟಾಂಗ್
ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಅವರ ಗಾಡ್ಫಾದರ್ ಪ್ರಚಾರಪ್ರಿಯರು ಎಂದು ಸಚಿವ ರಮೇಶ್ ಜಾರಕಿಹೊಳಿ ಡಿಕೆಶಿ ಪ್ರಚಾರಪ್ರಿಯ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಬೆಳಗಾವಿ: ಹೈಜಾಕ್ ಮಾಡುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿ. ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಅವರ ಗಾಡ್ಫಾದರ್ ಪ್ರಚಾರಪ್ರಿಯರು ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಈ ಮೂಲಕ ಡಿಕೆಶಿ ಪ್ರಚಾರಪ್ರಿಯ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಆದಷ್ಟು ಬೇಗ ಬಿಜೆಪಿ ಬೆಂಬಲಿತ ಗ್ರಾ.ಪಂ. ಸದಸ್ಯರನ್ನ ಹಾಜರು ಪಡಿಸುತ್ತೇನೆ. ಗ್ರಾಮೀಣ ಭಾಗದಲ್ಲಿ ನೂರಕ್ಕೆ ನೂರು ನಾವು ಗೆದ್ದಿದ್ದೇವೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ನನ್ನ ಸೋಲಿಸಲು ಷಡ್ಯಂತ್ರ ಮಾಡ್ತಿದ್ದಾರೆಂಬ ಶಾಸಕಿ ಲಕ್ಷ್ಮೀ ಹೇಳಿಕೆಗೆ ಷಡ್ಯಂತ್ರ ಯಾಕೆ, ಸೋಲಿಸುವುದು ಗೆಲ್ಲಿಸುವುದು ನಮ್ಮ ಹಕ್ಕು. ಪ್ರಜಾಪ್ರಭುತ್ವದಲ್ಲಿ ಸೋಲಿಸುವುದು, ಗೆಲ್ಲಿಸುವುದು ತಪ್ಪಾ? ಗೋಕಾಕ್, ಅರಬಾವಿಯಂತೆ ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲೂ ಒಳ್ಳೇ ರೀತಿ ಸಂಘಟನೆ ಮಾಡುತ್ತೇವೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
‘ಬೆಳಗಾವಿ ಗ್ರಾಮೀಣ ಕ್ಷೇತ್ರ ನಂದು, ನಾನು ತಯಾರಿಸಿದ ಕ್ಷೇತ್ರ’ ಬೆಳಗಾವಿ ಗ್ರಾಮೀಣ ಕ್ಷೇತ್ರ ನಂದು. ಅದು ನಾನು ತಯಾರಿಸಿದ ಕ್ಷೇತ್ರ. ಕ್ಷೇತ್ರದಲ್ಲಿ ಯಾರೋ ಗೆದ್ದಿರಬಹುದು, ಆದ್ರೆ ಅನ್ಯಾಯ ಮಾಡಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಅನ್ಯಾಯ ಮಾಡಲು ಬಿಡುವುದಿಲ್ಲ. ಹಾಗಂತ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ. ಗ್ರಾಮೀಣ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತನನ್ನ ಗೆಲ್ಲಿಸುತ್ತೇನೆ. ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತನ ಗೆಲ್ಲಿಸುವುದೇ ನನ್ನ ಉದ್ದೇಶ ಎಂದು ಲಕ್ಷ್ಮೀ ಹೆಬ್ಬಾಳ್ಕರ್ಗೆ ಸಚಿವ ರಮೇಶ್ ಜಾರಕಿಹೊಳಿ ಸವಾಲು ಹಾಕಿದ್ದಾರೆ.
ಜ. 15ರ ನಂತರ ಯಡಿಯೂರಪ್ಪ ಸಿಎಂ ಆಗಿ ಇರುವುದಿಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಚಿವ ರಮೇಶ್ ಜಾರಕಿಹೊಳಿ ತಿರುಗೇಟು ಕೊಟ್ಟಿದ್ದು ಡಿ.ಕೆ.ಶಿವಕುಮಾರ್ ಹೇಳಿದ ಭವಿಷ್ಯ ಅವರಿಗೆ ಗೊತ್ತು. ನನ್ನ ಭವಿಷ್ಯದ ಪ್ರಕಾರ ಎರಡೂವರೆ ವರ್ಷ BSY ಸಿಎಂ ಎಂದು ಹೇಳಿ ಸುಮ್ಮನಾದರು.
2023ಕ್ಕೆ .. JDS ಪಕ್ಷವನ್ನು ಅಧಿಕಾರಕ್ಕೆ ತರದಿದ್ರೆ ನಾನು ಅಧಿಕಾರದಲ್ಲಿರಲ್ಲ -H.D.ರೇವಣ್ಣ