ಮೈಸೂರು: ವಂಚನೆ ಆರೋಪದಡಿ 10 ಆರ್​ಟಿಓ ಅಧಿಕಾರಿಗಳ ವಿರುದ್ಧ ಎಫ್​ಐಆರ್​ ದಾಖಲು

ವಂಚನೆ ಮಾಡಿರುವ ಆರೋಪದಡಿ 10 ಆರ್​ಟಿಓ ಅಧಿಕಾರಿಗಳು ಸೇರಿದಂತೆ 35 ಜನರ ವಿರುದ್ಧ ನಗರದ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮೈಸೂರು: ವಂಚನೆ ಆರೋಪದಡಿ 10 ಆರ್​ಟಿಓ ಅಧಿಕಾರಿಗಳ ವಿರುದ್ಧ ಎಫ್​ಐಆರ್​ ದಾಖಲು
ಸಾಂದರ್ಭಿಕ ಚಿತ್ರ
Edited By:

Updated on: Aug 04, 2023 | 8:18 AM

ಮೈಸೂರು: ವಂಚನೆ  ಆರೋಪದಡಿ 10 ಆರ್​ಟಿಓ (RTO) ಅಧಿಕಾರಿಗಳು ಸೇರಿದಂತೆ 35 ಜನರ ವಿರುದ್ಧ ನಗರದ ಲಕ್ಷ್ಮಿಪುರಂ ಪೊಲೀಸ್ (Police) ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರದೀಪ್ ಕುಮಾರ್ ಎಂಬುವರು ದೂರು ನೀಡಿದ್ದಾರೆ. ಸಂಬಂಧವಿಲ್ಲದ ವ್ಯಕ್ತಿಗಳಿಂದ ಕಚೇರಿಯಲ್ಲಿ ಕೆಲಸ ನಿರ್ವಹಣೆ ಮಾಡಿಸುವುದು ಮತ್ತು ನಕಲಿ ರಸೀತಿ ಬಳಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದರು. ಇದಕ್ಕೆ ಆರ್​ಟಿಓ ಅಧಿಕಾರಿಗಳು ಸಾಥ್ ನೀಡಿರುವ ಆರೋಪ ಕೇಳಿಬಂದಿದೆ.

ಈ ಬಗ್ಗೆ ಪ್ರದೀಪ್ ಪೋಟೋ ವಿಡಿಯೋ ಸಮೇತ ದೂರು ದಾಖಲಿಸಿದ್ದಾರೆ. ಆರ್​ಟಿಓ ಜಂಟಿ ಸಾರಿಗೆ ಆಯುಕ್ತ ಸಿ ಟಿ ಮೂರ್ತಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ದೇವಿಕಾ, ಸೂಪರಿಡೆಂಟ್ ಕುಮಾರ್ ಎಫ್​ಡಿ ಚೆನ್ನವೀರಪ್ಪ ಸೇರಿ 35 ಜನರ ವಿರುದ್ಧ ದೂರು ದಾಖಲಾಗಿದೆ.

ವೀಲಿಂಗ್ ಶೋಕಿಗಾಗಿ ಬೈಕ್​ ಕಳ್ಳತನ

ಇನ್ನು ವೀಲಿಂಗ್ ಶೋಕಿಗಾಗಿ ನಗರದಲ್ಲಿ ಬೈಕ್ ​ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುವೆಂಪು ನಗರ ಪೊಲೀಸರು ಬಂಧಿಸಿದ್ದಾರೆ. ಧನುಷ್ (19) ನಿತಿನ್ (19) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 2.5ಲಕ್ಷ ಮೌಲ್ಯದ 4 ಬೈಕ್ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಮೈಸೂರು ದಸರಾದಲ್ಲಿ ಏರ್​ ಶೋ; ರಕ್ಷಣಾ ಸಚಿವ ರಾಜನಾಥ್​ ಸಿಂಗ್​ಗೆ ಸಿಎಂ ಸಿದ್ದರಾಮಯ್ಯ ಬರೆದ ಪತ್ರದಲ್ಲೇನಿದೆ?

ಆರೋಪಿಗಳು ಒಂದು ಬೈಕ್ ಕದ್ದು ಅದೇ ಬೈಕ್​​ನಲ್ಲಿ ಹೋಗಿ, ಮೈಸೂರಿನ ಶ್ರೀರಾಂಪುರದಲ್ಲಿ ಮತ್ತೊಂದು ಬೈಕ್ ಕದಿಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ. ವಿಚಾರಣೆ ವೇಳೆ ಬೈಕ್ ವೀಲಿಂಗ್ ಮಾಡುವ ಸಲುವಾಗಿ ಕಳ್ಳತನ ಮಾಡುತ್ತಿರುವುದಾಗಿ ಬಾಯಿ ಬಿಟ್ಟಿದ್ದಾರೆ. ವಿದ್ಯಾರಣ್ಯಪುರಂ ಠಾಣೆ, ಕುವೆಂಪುನಗರ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು, ಆಲನಹಳ್ಳಿ ಪೋಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ