ಯೋಧನ ಕುಟುಂಬಕ್ಕೆ BBMP, BWSSB ಮೋಸ?

ಬೆಂಗಳೂರು: ಗಡಿ ಕಾಯುವ ಯೋಧನ ಕುಟುಂಬಕ್ಕೆ ಕಿಂಚಿತ್ತೂ ಸೌಲಭ್ಯ ಒದಗಿಸದೆ ಕಿರುಕುಳ ನೀಡಿದೆ ಎಂದು ಬಿಬಿಎಂಪಿ ಮತ್ತು ಬಿಡಬ್ಲ್ಯುಎಸ್​ಎಸ್​ಬಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. 6 ತಿಂಗಳ ಮಗುವಿನೊಂದಿಗೆ ಯೋಧ ಕೃಷ್ಣಮೂರ್ತಿ ಪತ್ನಿ ಶೃತಿ ವಿದ್ಯಾರಣ್ಯಪುರದ ರಾಮಚಂದ್ರಪುರದಲ್ಲಿ ವಾಸವಿದ್ದಾರೆ. ಕೃಷ್ಣಮೂರ್ತಿ ಜಮ್ಮ-ಕಾಶ್ಮೀರದಲ್ಲಿ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದ್ರೆ ಅವರ ಕುಟುಂಬಸ್ಥರು ಕಳೆದ 3 ವರ್ಷದಿಂದ ಕುಡಿಯಲು ನೀರಿಲ್ಲದೆ, ಮನೆಗೆ ರಸ್ತೆ ಇಲ್ದೆ, ಒಳಚರಂಡಿ ವ್ಯವಸ್ಥೆ ಇಲ್ದೆ ಪರದಾಡುತ್ತಿದ್ದಾರೆ. ಮನೆ ಮುಂದೆಯಿರುವ ಸೈಟ್ ಮಾಲೀಕರ ಗಲಾಟೆಗೆ ನೀರಿನ […]

ಯೋಧನ ಕುಟುಂಬಕ್ಕೆ BBMP, BWSSB ಮೋಸ?
ಸಾಧು ಶ್ರೀನಾಥ್​

Updated on: Nov 19, 2020 | 12:03 AM

ಬೆಂಗಳೂರು: ಗಡಿ ಕಾಯುವ ಯೋಧನ ಕುಟುಂಬಕ್ಕೆ ಕಿಂಚಿತ್ತೂ ಸೌಲಭ್ಯ ಒದಗಿಸದೆ ಕಿರುಕುಳ ನೀಡಿದೆ ಎಂದು ಬಿಬಿಎಂಪಿ ಮತ್ತು ಬಿಡಬ್ಲ್ಯುಎಸ್​ಎಸ್​ಬಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.
6 ತಿಂಗಳ ಮಗುವಿನೊಂದಿಗೆ ಯೋಧ ಕೃಷ್ಣಮೂರ್ತಿ ಪತ್ನಿ ಶೃತಿ ವಿದ್ಯಾರಣ್ಯಪುರದ ರಾಮಚಂದ್ರಪುರದಲ್ಲಿ ವಾಸವಿದ್ದಾರೆ. ಕೃಷ್ಣಮೂರ್ತಿ ಜಮ್ಮ-ಕಾಶ್ಮೀರದಲ್ಲಿ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದ್ರೆ ಅವರ ಕುಟುಂಬಸ್ಥರು ಕಳೆದ 3 ವರ್ಷದಿಂದ ಕುಡಿಯಲು ನೀರಿಲ್ಲದೆ, ಮನೆಗೆ ರಸ್ತೆ ಇಲ್ದೆ, ಒಳಚರಂಡಿ ವ್ಯವಸ್ಥೆ ಇಲ್ದೆ ಪರದಾಡುತ್ತಿದ್ದಾರೆ.

ಮನೆ ಮುಂದೆಯಿರುವ ಸೈಟ್ ಮಾಲೀಕರ ಗಲಾಟೆಗೆ ನೀರಿನ ಲೈನ್ ಸಹ ಕಟ್ ಆಗಿದೆ. ಈ ಬಗ್ಗೆ ಬಿಬಿಎಂಪಿ ಮೇಯರ್, ಕೇಂದ್ರ ಸಚಿವ ಸದಾನಂದ ಗೌಡಗೆ ಪತ್ರ ಬರೆದರು ಏನು ಪ್ರಯೋಜನೆ ಆಗಿಲ್ಲ ಎಂದು ಟಿವಿ9ಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ.

Published On - 8:21 am, Tue, 31 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us