‘ವೃತ್ತಿ’ಧರ್ಮಕ್ಕೆ ದ್ರೋಹ ಬಗೆದು ಮಾದಕವಸ್ತು ಪಾರ್ಸೆಲ್ ಮಾಡ್ತಿದ್ದ ಖದೀಮ ಅಂಚೆ ಉದ್ಯೋಗಿಗಳು!

ಬೆಂಗಳೂರು: ಅಂಚೆ ಎಂಬುದು ಪಾರಿವಾಳದ ಕಾಲದಿಂದಲೂ ಪವಿತ್ರ ಮತ್ತು ಮಹತ್ವದ ಸಾಧನವಾಗಿತ್ತು. ಆದ್ರೆ ಕಾಲ ಬದಲಾದಂತೆ ಅಂಚೆಯ ಸ್ವರೂಪವೇ ಬದಲಾಗಿದೆ. ಈಗಂತೂ ಯಾವ ಮಟ್ಟಕ್ಕೆ ಬಂದಿಳಿದಿದೆ ಅಂದ್ರೆ ಇದೇ ಅಂಚೆಯಣ್ಣಗಳು ತಮ್ಮ ವೃತ್ತಿಧರ್ಮಕ್ಕೆ ವಿರುದ್ಧವಾಗಿ ಇಂದಿನ ಯುವಜನತೆಯ ಹಾದಿತಪ್ಪಿಸುವಂತಹ ಕುಕೃತ್ಯದಲ್ಲಿ ತೊಡಗಿದ್ದಾರೆ. ಡ್ರಗ್ಸ್​ ಜಾಲದಲ್ಲಿ ತೊಡಗಿದ್ದ ಕೇಂದ್ರ ಸರ್ಕಾರಿ ನೌಕಕರು ಅರೆಸ್ಟ್! ಒಂದ್ ಸರ್ಕಾರಿ ಕೆಲಸ ಸಿಕ್ರೆ ಸಾಕಪ್ಪ. ಲೈಫು ಸೆಟಲ್​ ಅಂತ ಅದೆಷ್ಟೊ ಜನರು ಅಂದ್ಕೊತಾರೆ. ಆದ್ರೆ, ಇಲ್ಲಿ ಕೆಲ ಮಿಕಗಳಿವೆ. ಒಳ್ಳೆ ಕೆಲಸ. ಕೈತುಂಬ […]

‘ವೃತ್ತಿಧರ್ಮಕ್ಕೆ ದ್ರೋಹ ಬಗೆದು ಮಾದಕವಸ್ತು ಪಾರ್ಸೆಲ್ ಮಾಡ್ತಿದ್ದ ಖದೀಮ ಅಂಚೆ ಉದ್ಯೋಗಿಗಳು!
ಸಾಧು ಶ್ರೀನಾಥ್​

Updated on: Nov 19, 2020 | 12:04 AM

ಬೆಂಗಳೂರು: ಅಂಚೆ ಎಂಬುದು ಪಾರಿವಾಳದ ಕಾಲದಿಂದಲೂ ಪವಿತ್ರ ಮತ್ತು ಮಹತ್ವದ ಸಾಧನವಾಗಿತ್ತು. ಆದ್ರೆ ಕಾಲ ಬದಲಾದಂತೆ ಅಂಚೆಯ ಸ್ವರೂಪವೇ ಬದಲಾಗಿದೆ. ಈಗಂತೂ ಯಾವ ಮಟ್ಟಕ್ಕೆ ಬಂದಿಳಿದಿದೆ ಅಂದ್ರೆ ಇದೇ ಅಂಚೆಯಣ್ಣಗಳು ತಮ್ಮ ವೃತ್ತಿಧರ್ಮಕ್ಕೆ ವಿರುದ್ಧವಾಗಿ ಇಂದಿನ ಯುವಜನತೆಯ ಹಾದಿತಪ್ಪಿಸುವಂತಹ ಕುಕೃತ್ಯದಲ್ಲಿ ತೊಡಗಿದ್ದಾರೆ.

ಡ್ರಗ್ಸ್​ ಜಾಲದಲ್ಲಿ ತೊಡಗಿದ್ದ ಕೇಂದ್ರ ಸರ್ಕಾರಿ ನೌಕಕರು ಅರೆಸ್ಟ್!
ಒಂದ್ ಸರ್ಕಾರಿ ಕೆಲಸ ಸಿಕ್ರೆ ಸಾಕಪ್ಪ. ಲೈಫು ಸೆಟಲ್​ ಅಂತ ಅದೆಷ್ಟೊ ಜನರು ಅಂದ್ಕೊತಾರೆ. ಆದ್ರೆ, ಇಲ್ಲಿ ಕೆಲ ಮಿಕಗಳಿವೆ. ಒಳ್ಳೆ ಕೆಲಸ. ಕೈತುಂಬ ಸಂಬಳ ಎಲ್ಲವೂ ಇತ್ತು. ಆದ್ರೆ, ಮಾಡಬಾರದ್ದನ್ನ ಮಾಡಿ ಈಗ ಖಾಕಿ ಕೈಗೆ ತಗಲಾಕ್ಕೊಂಡಿದ್ದಾರೆ. ಹರಳು ಹರಳಿನಂತಿರೋ ಇದು ಸಕ್ಕರೆಯಲ್ಲ. ಚುಕ್ಕಿ ಚುಕ್ಕಿಯಂತಿರೋ ಇದೆಲ್ಲ ಡಿಸೈನ್​​ ಐಟಂಗಳೂ ಅಲ್ಲ. ಪಕ್ಕಾ ಕವರಿಂಗ್​​ ಆಗಿರೋ ಇದಿಷ್ಟು ಖತರ್ನಾಕ್​ ಮೆಟಿರಿಯಲ್​. ಒಂದೊಂದು ಗುಳಿಗೆಯೂ ಸಿಕ್ಕಾಪಟ್ಟೆ ದುಬಾರಿ.

ವಿದೇಶದಿಂದ ಬರುತ್ತಿದ್ದ ದುಬಾರಿ ಮೌಲ್ಯದ ಡ್ರಗ್ಸ್ ಮೆಟಿರಿಯಲ್!
ಸಿಲಿಕಾನ್ ಸಿಟಿಯಲ್ಲಿ ಸದ್ದಿಲ್ಲದೆ ಹರಡಿರೋ ನಶಾ ಲೋಕವನ್ನ ಸಿಸಿಬಿ ಪೊಲೀಸರು ಜಾಲಾಡ್ತಿದ್ದಾರೆ. ಕೆಲದಿನಗಳ ಹಿಂದಷ್ಟೇ, ಸುದ್ದಗುಂಟೆ ಪಾಳ್ಯ ಮತ್ತು ಕೆಂಗೇರಿ ಅಪಾರ್ಟ್ಮೆಂಟ್​​​ನಲ್ಲಿ ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ಖತರ್ನಾಕ್​​​​ನನ್ನ ಪೊಲೀಸರು ಅರೆಸ್ಟ್ ಮಾಡಿದ್ರು. ಇದೀಗ ಅಂಚೆ ಇಲಾಖೆಯಲ್ಲಿ ಇದ್ಕೊಂಡು ಡ್ರಗ್​​​​ ಸ್ಮಗ್ಲಿಂಗ್​​​​​​​​​ನಲ್ಲಿ ತೊಡಗಿಕೊಂಡಿದ್ದ, ಸುಬ್ಬು , ರಮೇಶ್ ಕುಮಾರ್, ಜಯರಾಜ್ ಮತ್ತು ಮಜೀದ್ ಅಹಮದ್ ಅನ್ನೋರನ್ನ ಬಂಧಿಸಿದ್ದಾರೆ.

ಜಿಪಿಓನಲ್ಲಿ (General Post Office) ಡಿ ದರ್ಜೆ ನೌಕರನಾಗಿದ್ದ ಸುಬ್ಬು, ಕಸ್ಟಮ್ಸ್​​​ ವಿಭಾಗದ ರಮೇಶ್​​​ ಕುಮಾರ್​​ ಮತ್ತು ಭದ್ರತಾ ವಿಭಾಗದ ಜಯರಾಜ್. ಎಲ್ಲರೂ​​​​​​​​​ ಸೇರಿ ಪಕ್ಕಾ ಪ್ಲಾನ್​​ ಮಾಡಿದ್ರು. ನಕಲಿ ಅಡ್ರೆಸ್​​​ ನೀಡಿ ಡಾರ್ಕ್​​​ ವೆಬ್​​​ ಮೂಲಕ ಡ್ರಗ್ಸ್​​ ಅನ್ನ ಆಮದು ಮಾಡಿಕೊಳ್ತಿದ್ರು. ಜಿಪಿಒಗೆ ಬರುತ್ತಿದ್ದ ಡ್ರಗ್ಸ್​​​ ಪಾರ್ಸೆಲ್​​ಗಳನ್ನ ಯಾರಿಗೂ ಗೊತ್ತಾಗದಂತೆ ಸಾಗಿಸ್ತಿದ್ರು. ಡೆನ್ಮಾರ್ಕ್​​​​​, ನೆದರ್ಲ್ಯಾಂಡ್​​​, ಯುಎಸ್​​​​ನಿಂದೆಲ್ಲ ಬ್ರೌನ್​ ಶುಗರ್​​​​​​​, ಎಕ್ಸ್​ಡೆಸಿ ಮಾತ್ರೆ ತರಿಸಿಕೊಳ್ತಿದ್ದ ಚಾಲಾಕಿಗಳು, ಡ್ರಗ್​​ ಪೆಡ್ಲರ್​​ ಸಂಪರ್ಕದಲ್ಲಿ ಅದನ್ನೆಲ್ಲ ಮಾರುತ್ತಿದ್ರು. ಆದ್ರೆ, ಸಿಸಿಬಿ ಪೊಲೀಸರು ಬೀಸಿದ ಬಲೆಗೆ ಎಲ್ಲರೂ ತಗಲಾಕ್ಕೊಂಡಿದ್ದಾರೆ.

Published On - 8:12 am, Tue, 31 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us