ಕಣ್ಣು ಕಳೆದುಕೊಂಡವರಿಗೆ ಪರಿಹಾರ ನೀಡುವಲ್ಲಿ ಮಾನವೀಯತೆ ಮರೆತ ಮಿಂಟೋ ಆಸ್ಪತ್ರೆ

ಕಣ್ಣು ಕಳೆದುಕೊಂಡವರಿಗೆ ಪರಿಹಾರ ನೀಡುವಲ್ಲಿ ಮಾನವೀಯತೆ ಮರೆತ ಮಿಂಟೋ ಆಸ್ಪತ್ರೆ

ಬೆಂಗಳೂರು: ಶಸ್ತ್ರಚಿಕಿತ್ಸೆ ವೇಳೆ 22 ಜನ ಕಣ್ಣು ಕಳೆದುಕೊಂಡ ಪ್ರಕರಣದಲ್ಲಿ ಮಿಂಟೋ ಆಸ್ಪತ್ರೆ ಆಡಳಿತ ಮಂಡಳಿ ಅಮಾನವೀಯ ನಡೆ ಇಟ್ಟಿದೆ. ಕಣ್ಣು ಕಳೆದುಕೊಂಡವರಿಗೆ ಪರಿಹಾರ ನೀಡುವದರಲ್ಲೂ ಷರತ್ತು ಹಾಕುವ ಮೂಲಕ ಮಾನವೀಯತೆ ಮರೆತಿದೆ. ಜುಲೈನಲ್ಲಿ ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ನಡೆದಿತ್ತು. ಆಗ ಶಸ್ತ್ರಚಿಕಿತ್ಸೆ ವೇಳೆ 22 ಜನ ಕಣ್ಣು ಕಳೆದುಕೊಂಡಿದ್ದರು. ಈಗ ಪರಿಹಾರ ನೀಡುವ ವಿಚಾರದಲ್ಲಿ ಕಣ್ಣು ಕಳೆದುಕೊಂಡವರಿಗೆ ಆಸ್ಪತ್ರೆ ಆಡಳಿತ ಮಂಡಳಿ ಒತ್ತಡ ಹಾಕಿ ತಮಗೆ ಬೇಕಾದ ರೀತಿಯಲ್ಲಿ ಮುಚ್ಚಳಿಕೆ ಬರೆಯಿಸಿಕೊಳ್ಳಲು ಮುಂದಾಗಿದೆ. ಕಣ್ಣು […]

sadhu srinath

|

Nov 19, 2020 | 12:02 AM

ಬೆಂಗಳೂರು: ಶಸ್ತ್ರಚಿಕಿತ್ಸೆ ವೇಳೆ 22 ಜನ ಕಣ್ಣು ಕಳೆದುಕೊಂಡ ಪ್ರಕರಣದಲ್ಲಿ ಮಿಂಟೋ ಆಸ್ಪತ್ರೆ ಆಡಳಿತ ಮಂಡಳಿ ಅಮಾನವೀಯ ನಡೆ ಇಟ್ಟಿದೆ. ಕಣ್ಣು ಕಳೆದುಕೊಂಡವರಿಗೆ ಪರಿಹಾರ ನೀಡುವದರಲ್ಲೂ ಷರತ್ತು ಹಾಕುವ ಮೂಲಕ ಮಾನವೀಯತೆ ಮರೆತಿದೆ.

ಜುಲೈನಲ್ಲಿ ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ನಡೆದಿತ್ತು. ಆಗ ಶಸ್ತ್ರಚಿಕಿತ್ಸೆ ವೇಳೆ 22 ಜನ ಕಣ್ಣು ಕಳೆದುಕೊಂಡಿದ್ದರು. ಈಗ ಪರಿಹಾರ ನೀಡುವ ವಿಚಾರದಲ್ಲಿ ಕಣ್ಣು ಕಳೆದುಕೊಂಡವರಿಗೆ ಆಸ್ಪತ್ರೆ ಆಡಳಿತ ಮಂಡಳಿ ಒತ್ತಡ ಹಾಕಿ ತಮಗೆ ಬೇಕಾದ ರೀತಿಯಲ್ಲಿ ಮುಚ್ಚಳಿಕೆ ಬರೆಯಿಸಿಕೊಳ್ಳಲು ಮುಂದಾಗಿದೆ.

ಕಣ್ಣು ಕಳೆದುಕೊಂಡವರಿಗೆ 3 ಲಕ್ಷ ರೂಪಾಯಿ ಪರಿಹಾರ ಹಣವನ್ನು ನೀಡುತ್ತೇವೆ. ಇದನ್ನು ಹೊರತುಪಡಿಸಿ ಸರ್ಕಾರದಿಂದ ಅಥವಾ ನ್ಯಾಯಾಲಯದ ಮೂಲಕ ಪರಿಹಾರ ಪಡೆದುಕೊಂಡರೆ ಆಡಳಿತ ಮಂಡಳಿಗೆ ವಾಪಸ್ ಕೊಡಬೇಕು. ಅದೂ ಶೇ.15ರಷ್ಟು ಬಡ್ಡಿ ಸಮೇತ ಹಣ ವಾಪಸ್ ಕೊಡಬೇಕೆಂದು ಷರತ್ತು ವಿಧಿಸಿದೆ. ಮುಚ್ಚಳಿಕೆ ನೋಡಿ ಶಾಕ್ ಆದ ಸಂತ್ರಸ್ತರು ಮಿಂಟೋ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

22 ಸಂತ್ರಸ್ತರ ಪೈಕಿ ಕೇವಲ 7 ಮಂದಿಗೆ ಮಾತ್ರ ಪರಿಹಾರ ನೀಡಿದೆ. ಇನ್ನೂ 15 ಮಂದಿಗೆ ಪರಿಹಾರ ನೀಡದ ವಿಂಟೋ ಆಡಳಿತ ಮಂಡಳಿ ಕಣ್ಣು ಕಳೆದುಕೊಂಡವರ ಜೊತೆ ಚೆಲ್ಲಾಟವಾಡುತ್ತಿದೆ.

Follow us on

Related Stories

Most Read Stories

Click on your DTH Provider to Add TV9 Kannada