ಬಾಗಲಕೋಟೆ: ನಗರದ ಹೋಟೆಲ್ಗಳಲ್ಲಿ ಶುದ್ಧ ಕುಡಿಯುವ ನೀರು ಕೊಡದೇ ಇರೋದು, ಆಹಾರದಲ್ಲಿ ಅತಿಯಾದ ಬಣ್ಣ, ಟೇಸ್ಟಿಂಗ್ ಸಾಲ್ಟ್ ಬಳಕೆ ಮಾಡುವುದು ಅಲ್ಲದೆ ಸ್ವಚ್ಛತೆ ಕಾಪಾಡಿಕೊಳ್ಳದಿರುವುದು ಹೀಗೆ ಅನೇಕ ವಿಷಯಗಳ ಬಗ್ಗೆ ಪರಿಶೀಲಿಸಲು ವಿವಿಧ ಹೋಟೆಲ್ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಿನ್ನೆ ರಾತ್ರಿ ಆರೋಗ್ಯ ಇಲಾಖೆ, ಆಹಾರ ಸುರಕ್ಷತೆ ಇಲಾಖೆ, ನಗರಸಭೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಂದ ಜಂಟಿ ದಾಳಿ ನಡೆದಿದೆ. ಹತ್ತಕ್ಕೂ ಹೆಚ್ಚು ಹೋಟೆಲ್, ಬೇಕರಿಗಳ ಮೇಲೆ ದಾಳಿ ಮಾಡಿದ್ದು, 4ಹೋಟೆಲ್ಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಅಧಿಕಾರಿಗಳು ಅತಿಯಾದ ಬಣ್ಣ ಬಳಕೆ ಮಾಡಿದ್ದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಕರಿದ ಎಣ್ಣೆ ಮರುಬಳಿಕೆ ಮಾಡಿದಲ್ಲಿ ಹೋಟೆಲ್ ಮುಚ್ಚಿಸುವ ಎಚ್ಚರಿಕೆ ನೀಡಿದ್ದಾರೆ. ನೋಟಿಸ್ ನೀಡಿರುವ ಹೋಟೆಲ್ಗಳ ವಿರುದ್ದ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ.
Published On - 9:36 am, Wed, 18 December 19