75 ವರ್ಷಗಳ ಬಳಿಕ ಶೆಟ್ಟಿಹಳ್ಳಿಯಲ್ಲಿ ಅದ್ದೂರಿ ತೆಪ್ಪೋತ್ಸವ ಸಂಭ್ರಮ
ಚಿಕ್ಕಮಗಳೂರು: ಬಸವೇಶ್ವರ ಸ್ವಾಮಿ, ಕಂಚುಗಲ್ಲು ಶ್ರೀ ವೀರಭದ್ರಸ್ವಾಮಿ ಹಾಗೂ ಶ್ರೀ ಕರಿಯಮ್ಮ ದೇವಿಯರ ತೆಪ್ಪೋತ್ಸವ ಕಾರ್ಯಕ್ರಮವನ್ನ ಕಡೂರು ತಾಲೂಕಿನ ಸಿಂಗಟಗೆರೆ ಹೋಬಳಿ ಶೆಟ್ಟಿಹಳ್ಳಿಯಲ್ಲಿ ಅದ್ದೂರಿಯಾಗಿ ನಡೆಸಲಾಯ್ತು. ಸುಮಾರು 75 ವರ್ಷಗಳ ಹಿಂದೆ ಇದೇ ರೀತಿ ತೆಪ್ಪೋತ್ಸವ ನಡೆದಿತ್ತು. ನಂತರ ಕಾರಣಾಂತರಗಳಿಂದ ಈ ಸೇವೆ ನಡೆದಿರಲಿಲ್ಲ. ಈ ಬಾರಿ ಉತ್ತಮ ಮಳೆ ಬಂದು 45 ಹೇಕ್ಟೇರ್ ವಿಸ್ತೀರ್ಣದ ಶೆಟ್ಟಿಹಳ್ಳಿ ಕೆರೆ ತುಂಬಿದ್ದರಿಂದ ಹರ್ಷಗೊಂಡ ಭಕ್ತಾದಿಗಳು ಹಾಗೂ ಗ್ರಾಮಸ್ಥರು ತೆಪ್ಪೋತ್ಸವ ನಡೆಸಲು ತೀರ್ಮಾನಿಸಿದರು. ಈ ಹಿನ್ನೆಲೆಯಲ್ಲಿ ತೆಪ್ಪೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. […]
ಚಿಕ್ಕಮಗಳೂರು: ಬಸವೇಶ್ವರ ಸ್ವಾಮಿ, ಕಂಚುಗಲ್ಲು ಶ್ರೀ ವೀರಭದ್ರಸ್ವಾಮಿ ಹಾಗೂ ಶ್ರೀ ಕರಿಯಮ್ಮ ದೇವಿಯರ ತೆಪ್ಪೋತ್ಸವ ಕಾರ್ಯಕ್ರಮವನ್ನ ಕಡೂರು ತಾಲೂಕಿನ ಸಿಂಗಟಗೆರೆ ಹೋಬಳಿ ಶೆಟ್ಟಿಹಳ್ಳಿಯಲ್ಲಿ ಅದ್ದೂರಿಯಾಗಿ ನಡೆಸಲಾಯ್ತು. ಸುಮಾರು 75 ವರ್ಷಗಳ ಹಿಂದೆ ಇದೇ ರೀತಿ ತೆಪ್ಪೋತ್ಸವ ನಡೆದಿತ್ತು.
ನಂತರ ಕಾರಣಾಂತರಗಳಿಂದ ಈ ಸೇವೆ ನಡೆದಿರಲಿಲ್ಲ. ಈ ಬಾರಿ ಉತ್ತಮ ಮಳೆ ಬಂದು 45 ಹೇಕ್ಟೇರ್ ವಿಸ್ತೀರ್ಣದ ಶೆಟ್ಟಿಹಳ್ಳಿ ಕೆರೆ ತುಂಬಿದ್ದರಿಂದ ಹರ್ಷಗೊಂಡ ಭಕ್ತಾದಿಗಳು ಹಾಗೂ ಗ್ರಾಮಸ್ಥರು ತೆಪ್ಪೋತ್ಸವ ನಡೆಸಲು ತೀರ್ಮಾನಿಸಿದರು. ಈ ಹಿನ್ನೆಲೆಯಲ್ಲಿ ತೆಪ್ಪೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಂಚಗಲ್ಲು ಶ್ರೀ ವೀರಭದ್ರಸ್ವಾಮಿ, ಶೆಟ್ಟಿಹಳ್ಳಿ ಶ್ರೀ ಬಸವೇಶ್ವರ ಸ್ವಾಮಿ, ಶ್ರೀ ಕರಿಯಮ್ಮ ದೇವರ ಉತ್ಸವ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
Published On - 10:25 am, Wed, 18 December 19