ತುಮಕೂರು: ಒಂದೆಡೆ ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಹೈಡ್ರಾಮ ನಡೆಸಿದ್ದರೆ, ಇನ್ನೊಂದು ಕಡೆ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ನಲ್ಲಿಯೂ ನಾಯಕತ್ವದ ಪ್ರಶ್ನೆ ಕಾಡತೊಡಗಿದೆ. ಈ ಹಿನ್ನೆಲೆಯಲ್ಲಿ ‘ಕಾಂಗ್ರೆಸ್ಗೆ ಪಕ್ಷದ ಅಧ್ಯಕ್ಷರೇ ಸುಪ್ರೀಂ; ಹಾಗಾಗಿ ಕರ್ನಾಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಗೆ ಹೇಳ್ತಾರೋ ಹಾಗೆ ನಾವು ಕೇಳಲೇಬೇಕು’ ಎಂದು ತುಮಕೂರಿನಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಕಾಂಗ್ರೆಸ್ ಗೆ ಪಕ್ಷದ ಅಧ್ಯಕ್ಷರೇ ಸುಪ್ರೀಂ. ಮುಂದಿನ ಸಿಎಂ ಸಿದ್ದರಾಮಯ್ಯ ಅವರೇ ಎಂಬ ಶಾಸಕ ಜಮೀರ್ ಅಹ್ಮದ್ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ಅದು ಜಮೀರ್ ಅವರ ವೈಯಕ್ತಿಕ ಅಭಿಪ್ರಾಯ ಅಂತ ಸಿದ್ದರಾಮಯ್ಯನವರೇ ಹೇಳಿದ್ದಾರೆ. ನಮ್ ಜೊತೆ ಫಾಲೊವರ್ಸ್ ಅಂತಾ ಇರ್ತಾರೆ. ಅವರಿಗೆ ಆಸೆಗಳಿರುತ್ತವೆ. ನಮ್ ನಾಯಕರು ಹೀಗ್ ಆಗ್ಬೇಕು ಎಂಬ ಆಸೆ ಇರುತ್ತೆ. ಸಿದ್ದರಾಮಯ್ಯಮವರ ಜೊತೆ ಇರುವ ಜಮೀರ್ ಗೆ ಅವರು ಸಿಎಂ ಆಗ್ಬೇಕು ಎಂಬ ಆಸೆ ಇದೆ ಎಂದು ಕಾಂಗ್ರೆಸ್ಸಿನಲ್ಲಿನ ಹಾಲಿ ಬೆಳವಣಿಗೆಗಳ ಬಗ್ಗೆ ಡಾ.ಜಿ.ಪರಮೇಶ್ವರ್ ವ್ಯಾಖ್ಯಾನಿಸಿದರು.
ಮುಂದುವರಿದು ಮಾತನಾಡಿದ ಅವರು ಕೆಲವೊಮ್ಮೆ ನಾನೂ ಸಿಎಂ ಆಗ್ಬೇಕು ಎಂಬ ಆಸೆ ನಮ್ಮ ಬೆಂಬಲಿಗರದ್ದಾಗಿರುತ್ತೆ. ಆದ್ರೆ ಈ ಬಾರಿ ಪಕ್ಷವನ್ನ ಅಧಿಕಾರಕ್ಕೆ ತರುವಂತದ್ದಾನ್ನ ಪ್ರತಿಯೊಬ್ಬರೂ ಮಾಡ್ಬೇಕು. ಅದು ನಮ್ಮ ಜವಾಬ್ದಾರಿ. ಬಿಜೆಪಿಯವರು ಕೆಟ್ಟ ಆಡಳಿತವನ್ನ ಕೊಟ್ಟಿದ್ದಾರೆ. ಹಾಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು. ನಮ್ಮಲ್ಲಿ ಪಕ್ಷದ ವ್ಯವಹಾರ ಬಂದಾಗ ಕಾಂಗ್ರೆಸ್ಸಿನ ರಾಜ್ಯಾಧ್ಯಕ್ಷರೇ ಸುಪ್ರೀಂ ಆಗುತ್ತಾರೆ. ಯಾರೇ ಅಧ್ಯಕ್ಷರಿದ್ರೂ ಕಾಂಗ್ರೆಸ್ ಪಕ್ಷದ ಎಲ್ಲಾ ವ್ಯವಹಾರಗಳಿಗೆ ಅವರೇ ಸುಪ್ರೀಂ. ಡಿ.ಕೆ ಶಿವಕುಮಾರ್ ಗೆ ಹೈ ಕಮಾಂಡ್ ಆ ಅಧಿಕಾರ ಕೊಟ್ಟಿದೆ. ಡಿ.ಕೆ ಶಿವಕುಮಾರ್ ಹೇಗೇಳ್ತಾರೋ ಹಾಗ್ ಕೇಳಲೇಬೇಕು ಎಂದು ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
ಜಮೀರ್ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಹಂತದವರೆಗೂ ವಿಚಾರ ಬಂದಿಲ್ಲ. ನಮ್ಮಲ್ಲಿ ಬಣ ರಾಜಕೀಯ ಇಲ್ಲ. ಆ ರೀತಿ ಏನಾದ್ರೂ ಇದ್ರೆ ಕಾಂಗ್ರೆಸ್ ಜನರಲ್ ಸೆಕ್ರೆಟರಿ ಸುರ್ಜೆವಾಲ ಸರಿಪಡಿಸುತ್ತಾರೆ. ನಮ್ಮಲ್ಲಿ ಯಾವುದೇ ಬಣ ರಾಜಕೀಯ ಇಲ್ಲ ಎಂದು ಮಾಜಿ ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.
(For karnataka congress kpcc president dk shivakumar is supreme says dr g parameshwara)
‘ಪರಮೇಶ್ವರ್ ಹೆಸ್ರೇಳಿ IMAಯಿಂದ 5ಕೋಟಿ ಪಡೆದಿದ್ದ PA ರಮೇಶ್, ಶೋಕಿ ಜೀವನಕ್ಕೆ ಮಾರುಹೋಗಿದ್ದ!’