ಜಿಂಕೆಗಳ ಬೇಟೆ ಆರೋಪದಡಿ 6 ದುಷ್ಕರ್ಮಿಗಳ ಬಂಧನ.. ಎಲ್ಲಿ?

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಬಳಿಯ ನಾಗಣಾಪುರ ಗ್ರಾಮದ ಹೊರವಲಯದಲ್ಲಿ ಜಿಂಕೆಗಳ ಬೇಟೆ ಆರೋಪದಡಿ 6 ಖದೀಮರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧನಕ್ಕೆ ಒಳಪಡಿಸಿದ್ದಾರೆ. 

ಜಿಂಕೆಗಳ ಬೇಟೆ ಆರೋಪದಡಿ 6 ದುಷ್ಕರ್ಮಿಗಳ ಬಂಧನ.. ಎಲ್ಲಿ?
ಜಿಂಕೆಗಳ ಬೇಟೆ ಆರೋಪದಡಿ 6 ಖದೀಮರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
Edited By:

Updated on: Jan 08, 2021 | 10:25 AM

ಮೈಸೂರು: ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಬಳಿಯ ನಾಗಣಾಪುರ ಗ್ರಾಮದ ಹೊರವಲಯದಲ್ಲಿ ಜಿಂಕೆಗಳನ್ನು ಬೇಟೆಯಾಡುತ್ತಿದ್ದ ಆರೋಪದಡಿ 6 ಖದೀಮರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.  ಆರೋಪಿಗಳು ಕೊಡಗಿನ ಸೋಮವಾರಪೇಟೆಯವರು ಎಂದು ತಿಳಿದು ಬಂದಿದೆ.

ನಾಡ ಬಂದೂಕು ಬಳಸಿ ಜಿಂಕೆಗಳನ್ನು ಕೊಲ್ಲುತ್ತಿದ್ದರು. ಜಿಂಕೆ ಮಾಂಸ ಸೇವಿಸುತ್ತ ಕುಳಿತಿರುವಾಗಲೇ ರೆಡ್ ಹ್ಯಾಂಡ್ ಆಗಿ ಖದೀಮರು ಸಿಕ್ಕಿಬಿದ್ದಿದ್ದಾರೆ. ಓಂಕಾರ ಅರಣ್ಯ ವಲಯದ ಆರ್​.ಎಫ್​.ಓ ನಾಗೇಂದ್ರ ನಾಯಕ್ ಹಾಗೂ ಸಿಬ್ಬಂದಿಯಿಂದ ಕಾರ್ಯಾಚರಣೆ ಜರುಗಿದ್ದು, ಬೇಟೆಗಾಗಿ ಬಳಸಿದ ಓಮ್ನಿ ಕಾರು ಮತ್ತು ಇತರೆ ಸಲಕರಣೆಗಳನ್ನು ವಶಕ್ಕೆ ಪಡೆಯಲಾಗಿದೆ.

ಜಿಂಕೆ ಬೇಟೆಯಾಡಲು ಬಂದ ಕಿರಾತಕ ತಾನೇ ಖಾಕಿ ಬಲೆಗೆ ಬಿದ್ದ, ಎಲ್ಲಿ?