ಮಡಿಕೇರಿ ರೈತರ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದ ಆನೆ ಸೆರೆ
ರೈತರೊಬ್ಬರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದ ಆನೆಯನ್ನು ಸೆರೆ ಇದೀಗ ಹಿಡಿಯಲಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಸಮೀಪದ ಕಳತ್ಮಾಡು ಕಾಫಿ ಎಸ್ಟೇಟ್ನಲ್ಲಿ 30 ವರ್ಷದ ಗಂಡಾನೆಯನ್ನು ಸೆರೆ ಹಿಡಿಯಲಾಗಿದೆ.

ಮಡಿಕೇರಿ: ಕೊಡಗು ಜಿಲ್ಲೆಯ ರೈತರಿಗೆ ಆನೆಗಳಿಂದಾಗುವ ಸಮಸ್ಯೆಗಳು ಒಂದೆರಡಲ್ಲ. ಬೆಳೆ ಇನ್ನೇನು ರೈತನ ಕೈಗೆ ಸಿಗುವ ಹೊತ್ತಿಗೆ ಆನೆಗಳು ಬೆಳೆಗಳ ಮೇಲೆ ದಾಳಿ ನಡೆಸುತ್ತವೆ. ಜಿಲ್ಲೆಯ ಬಹುತೇಕ ರೈತರು ಆನೆಗಳ ಬಗ್ಗೆ ತೀರಾ ತಲೆಕೆಡಿಸಿಕೊಂಡಿದ್ದಾರೆ. ಕೇವಲ ಬೆಳೆ ಮಾತ್ರವಲ್ಲ. ಈಗಾಗಲೇ ಜಿಲ್ಲೆಯ ಹಲವರ ಮೇಲೆ ಆನೆಗಳು ದಾಳಿ ಮಾಡಿ ಜೀವ ತೆಗೆದಿವೆ. ಹೀಗೆ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದ ಆನೆಯನ್ನು ಇದೀಗ ಸೆರೆ ಹಿಡಿಯಲಾಗಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲು ಸಮೀಪದ ಕಳತ್ಮಾಡು ಕಾಫಿ ಎಸ್ಟೇಟ್ನಲ್ಲಿ 30 ವರ್ಷದ ಗಂಡಾನೆಯನ್ನು ಸೆರೆ ಹಿಡಿಯಲಾಗಿದೆ. ಮತ್ತಿಗೋಡು ಆನೆ ಶಿಬಿರದ ಸಾಕಾನೆ ಬಳಸಿ ಸೆರೆ ಕಾರ್ಯಚರಣೆಯನ್ನು ನಡೆಸಿದ 50ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಸೆರೆ ಸಿಕ್ಕ ಕಾಡಾನೆಯನ್ನು ಬಂಡೀಪುರ ಅಭಯಾರಣ್ಯಕ್ಕೆ ಸ್ಥಳಾಂತರ ಮಾಡಿದ್ದಾರೆ.
ಈ ಹಿಂದೆ ಅಂದರೆ ಏಪ್ರಿಲ್ 6 ರಂದು ಕಾಡಾನೆ ದಾಳಿಯಿಂದ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಬಿಬಿಟಿಸಿ ಎಸ್ಟೇಟ್ ಬಳಿ ನಡೆದಿತ್ತು. ರಾತ್ರಿ ಬಹಿರ್ದೆಸೆಗೆ ತೆರಳಿದ್ದಾಗ ಕಾರ್ಮಿಕ ಮಹಿಳೆ ಮೇಲೆ ಆನೆ ದಾಳಿ ನಡೆಸಿತ್ತು. ತೀವ್ರ ಗಾಯಗೊಂಡಿದ್ದ 80 ವರ್ಷದ ಲಕ್ಷ್ಮೀ ಎಂಬ ವೃದ್ಧೆಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

30 ವರ್ಷದ ಗಂಡಾನೆಯನ್ನು ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ
ಇದನ್ನೂ ಓದಿ
ಬನ್ನೇರುಘಟ್ಟ ವ್ಯಾಪ್ತಿಯಲ್ಲಿ ಕರಡಿ ಸೆರೆ; ಪರಾರಿಯಾಗಿದ್ದ ಕರಡಿಯೇ ಬೋನಿಗೆ ಬಿತ್ತಾ ಎನ್ನುವುದು ಮಾತ್ರ ನಿಗೂಢ
ಆನೇಕಲ್: ಮದ್ದೂರಮ್ಮ ಜಾತ್ರೆಗಾಗಿ ಕೆರೆ ಶುದ್ಧಿ ಮಾಡುವಾಗ ಶಿವಲಿಂಗ ಪತ್ತೆ, ಶಿವಲಿಂಗ ನೋಡಲು ಮುಗಿಬಿದ್ದ ಜನ