ಮೈಸೂರು: 2 ದಿನಗಳ ಕಾರ್ಯಾಚರಣೆ ಬಳಿಕ 3 ಆನೆಗಳು ಕಾಡು ಸೇರಿವೆ. ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಮತ್ತೆ ಕಾಡಿಗೆ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ದಿನದ ಹಿಂದೆ ಕಾಡಿನಿಂದ ನಾಡಿಗೆ ಬಂದಿದ್ದ ಮೂರು ಕಾಡಾನೆಗಳು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಪೆಂಜಳ್ಳಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಬೀಡುಬಿಟ್ಟಿದ್ದವು.
ಲಕ್ಷ್ಮಣತೀರ್ಥ ನದಿ ಮೂಲಕ ಆನೆಗಳು ಆಗಮಿಸಿದ್ದವು. ಜನರ ಕೂಗಾಟದಿಂದ ಕಾರ್ಯಾಚರಣೆಗೆ ಹಿನ್ನೆಡೆಯಾಗಿತ್ತು. ಸಿಕ್ಕ ಸಿಕ್ಕ ಕಡೆ ಕಾಡಾನೆಗಳು ಓಡಾಡುತ್ತಿದ್ದು ಜನರಿಗೆ ಭಯ ಉಂಟುಮಾಡಿದ್ದವು. ಸದ್ಯ ಎರಡು ದಿನದ ಕಾರ್ಯಾಚರಣೆ ಬಳಿಕ ಕೊನೆಗೂ ರಾತ್ರಿ ಮೂರು ಆನೆಗಳು ಸೆರೆಯಾಗಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಮತ್ತೆ ಕಾಡಿಗೆ ಸೇರಿಸಿದ್ದಾರೆ.
ಮೊದಲ ದಿನದ ಸಫಾರಿಯಲ್ಲೇ ಪ್ರವಾಸಿಗರಿಗೆ ಹುಲಿ ದರ್ಶನ
ಇನ್ನು ಅನ್‌ಲಾಕ್ ಬಳಿಕ ನಾಗರಹೊಳೆ ಅಭಯಾರಣ್ಯ ಸಫಾರಿಗೆ ಮುಕ್ತ ಅವಕಾಶ ನೀಡಲಾಗಿದೆ. ಮೊದಲ ದಿನದ ಸಫಾರಿಯಲ್ಲೇ ಪ್ರವಾಸಿಗರಿಗೆ ಹುಲಿ ದರ್ಶನವಾಗಿದೆ. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ ವ್ಯಾಪ್ತಿಯಲ್ಲಿ ಸಫಾರಿಯ ವೇಳೆ ಹುಲಿ ದರ್ಶನವಾಗಿದೆ. ಸುಫಾರಿಗೆ ಬಂದಿದ್ದ ಪ್ರವಾಸಿಗರು ಹುಲಿಯನ್ನು ನೋಡಿ ಫುಲ್ ಖುಷ್ ಆಗಿದ್ದಾರೆ. ಬಿಸಿಲಿನ ತಾಪದಿಂದ ನೀರಿನಲ್ಲಿದ್ದ ಹುಲಿ ಫೋಟೋಗೆ ಪೋಸು ಕೊಟ್ಟು ಪ್ರವಾಸಿಗರನ್ನು ಕಂಡು ಅಲ್ಲಿಂದ ಹೊರಟು ಹೋಗಿದೆ.
ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ಅಜ್ಜಿಯನ್ನೇ ಕೊಂದ ಯುವಕ; ತಾಯಿಯ ಮೇಲೂ ಗಂಭೀರ ಹಲ್ಲೆ