AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರಕಾಸ್ತ್ರಗಳಿಂದ ಕೊಚ್ಚಿ ಅಜ್ಜಿಯನ್ನೇ ಕೊಂದ ಯುವಕ; ತಾಯಿಯ ಮೇಲೂ ಗಂಭೀರ ಹಲ್ಲೆ

ತಾಯಿ ಹಾಗೂ ಅಜ್ಜಿ ಇಬ್ಬರ ಮೇಲೆಯೂ ದಾಳಿ ಮಾಡಿರುವ ಯುವಕ ದತ್ತು ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ತೀವ್ರ ಸ್ವರೂಪದಲ್ಲಿ ಗಾಯಗೊಂಡಿರುವ ತಾಯಿ ಗೌರಮ್ಮ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆಯಾದರೂ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಮಾರಕಾಸ್ತ್ರಗಳಿಂದ ಕೊಚ್ಚಿ ಅಜ್ಜಿಯನ್ನೇ ಕೊಂದ ಯುವಕ; ತಾಯಿಯ ಮೇಲೂ ಗಂಭೀರ ಹಲ್ಲೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Jul 06, 2021 | 7:59 AM

Share

ಧಾರವಾಡ: ಧಾರವಾಡ ನಗರದ ಸಪ್ತಾಪುರ ಬಡಾವಣೆಯಲ್ಲಿ ನಡೆದ ದುರ್ಘಟನೆಯೊಂದರಲ್ಲಿ ಅಜ್ಜಿಯನ್ನು ಮೊಮ್ಮಗನೇ ಕೊಲೆ ಮಾಡಿದ್ದಾನೆ. ದತ್ತು ಎಂಬ ಯುವಕ ಮಾರಕಾಸ್ತ್ರಗಳಿಂದ ಅಜ್ಜಿ ಭೀಮವ್ವ (70 ವರ್ಷ) ಮೇಲೆ ಭೀಕರ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಅಜ್ಜಿಯ ಮೇಲೆ ಮಾತ್ರವಲ್ಲದೇ ತನ್ನ ತಾಯಿ ಗೌರಮ್ಮ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು, ತೀವ್ರವಾಗಿ ಗಾಯಗೊಂಡಿರುವ ಗೌರಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಯಿ ಹಾಗೂ ಅಜ್ಜಿ ಇಬ್ಬರ ಮೇಲೆಯೂ ದಾಳಿ ಮಾಡಿರುವ ಯುವಕ ದತ್ತು ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ತೀವ್ರ ಸ್ವರೂಪದಲ್ಲಿ ಗಾಯಗೊಂಡಿರುವ ತಾಯಿ ಗೌರಮ್ಮ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆಯಾದರೂ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ದುಷ್ಕೃತ್ಯದ ಹಿಂದಿನ ಕಾರಣಗಳೇನು ಎನ್ನುವುದು ಸದ್ಯಕ್ಕೆ ನಿಗೂಢವಾಗಿಯೇ ಉಳಿದಿದ್ದು, ಧಾರವಾಡ ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ವಿದ್ಯುತ್​ ಕಂಬಕ್ಕೆ ನೇಣು ಹಾಕಿಕೊಂಡ ಅಪರಿಚಿತ ವ್ಯಕ್ತಿ ಕೊಪ್ಪಳ: ಸುಮಾರು 35 ವರ್ಷ ಆಸುಪಾಸಿನ ವಯಸ್ಸಿನ ಅಪರಿಚಿತ ವ್ಯಕ್ತಿಯೋರ್ವ ಹೆದ್ದಾರಿ ಪಕ್ಕದ ವಿದ್ಯುತ್​ ಕಂಬಕ್ಕೆ ನೇಣು ಬಿಗಿದುಕೊಂಡು ಸಾವಿಗೀಡಾಗಿರುವ ಘಟನೆ ಕೊಪ್ಪಳ-ಗದಗ ರಸ್ತೆಯ ಸದಾಶಿವನಗರದಲ್ಲಿ ನಡೆದಿದೆ. ರಸ್ತೆಯ ಪಕ್ಕದಲ್ಲಿನ ವಿದ್ಯುತ್​ ಕಂಬದಲ್ಲಿ ಶವ ನೇತಾಡುತ್ತಿರುವುದು ಬೆಳಗ್ಗೆ ಕಾಣಿಸಿದ್ದು, ನಿನ್ನೆ ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನಿಸಲಾಗಿದೆ.

ಮಧ್ಯ ವಯಸ್ಕ ವ್ಯಕ್ತಿಯ ಗುರುತು, ಪರಿಚಯ, ಊರಿನ ಬಗ್ಗೆ ಮಾಹಿತಿ ಯಾವುದೂ ಸ್ಪಷ್ಟವಾಗಿ ದೊರೆತಿಲ್ಲ. ಅನ್ಯ ರಾಜ್ಯದಿಂದ ಕೊಪ್ಪಳಕ್ಕೆ ದುಡಿಯಲು ಬಂದಿರುವ ಕಾರ್ಮಿಕ ಎಂದು ಹೇಳಲಾಗುತ್ತಿದ್ದು, ರಸ್ತೆಯ ಪಕ್ಕದ ವಿದ್ಯುತ್​ ಕಂಬಕ್ಕೆ ನೇಣು ಹಾಕಿಕೊಂಡಿರುವುದೋ ಅಥವಾ ಬೇರೆ ಏನಾದರೂ ಘಟಿಸಿರಬಹುದೋ ಎಂಬ ಅನುಮಾನವೂ ಮೂಡಿದೆ. ಘಟನೆ ಸಂಭವಿಸಿದ ಸ್ಥಳಕ್ಕೆ ಕೊಪ್ಪಳ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಪತ್ನಿಯನ್ನು ಕೊಲೆ ಮಾಡಿ ಸ್ಟ್ರೋಕ್ ಎಂದು ಬಿಂಬಿಸಿ ತಪ್ಪಿಸಿಕೊಳ್ಳುಲು ಯತ್ನಿಸಿದ ಪತಿ ಅರೆಸ್ಟ್ 

ಬಚ್ಚಲಲ್ಲೇ ಹೆತ್ತು, ಮಗುವನ್ನು ನೇಣಿಗೆ ಹಾಕಿದ ತಾಯಿ; ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಕಿಟಕಿಯಲ್ಲಿ ನವಜಾತ ಶಿಶು ಪತ್ತೆ

Published On - 7:58 am, Tue, 6 July 21