ಮಾಧ್ಯಮದವರನ್ನು ಕೊವಿಡ್​ ವಾರಿಯರ್ಸ್​ ಎಂದು ಗುರುತಿಸಿದರೆ ಸಾಲದು, ಅವರಿಗೂ ಪರಿಹಾರ ನೀಡಬೇಕು: ಸಿಎಂಗೆ ಮಾಜಿ ಸಿಎಂ ಪತ್ರ

|

Updated on: May 12, 2021 | 11:27 PM

ಕರ್ನಾಟಕದಲ್ಲಿ ಸೇರಿ ಬಹುತೇಕ ರಾಜ್ಯಗಳಲ್ಲಿ ಹಲವು ಪತ್ರಕರ್ತರು ಕೊವಿಡ್​ 19 ಸೋಂಕಿನಿಂದ ಜೀವ ಕಳೆದುಕೊಂಡಿದ್ದಾರೆ. ಒಡಿಶಾದಲ್ಲಿ ಪತ್ರಕರ್ತರನ್ನು ಮುಂಚೂಣಿ ವಾರಿಯರ್ಸ್​ ಎಂದು ಘೋಷಿಸಲಾಗಿದೆ.

ಮಾಧ್ಯಮದವರನ್ನು ಕೊವಿಡ್​ ವಾರಿಯರ್ಸ್​ ಎಂದು ಗುರುತಿಸಿದರೆ ಸಾಲದು, ಅವರಿಗೂ ಪರಿಹಾರ ನೀಡಬೇಕು: ಸಿಎಂಗೆ ಮಾಜಿ ಸಿಎಂ ಪತ್ರ
ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ
Follow us on

ಬೆಂಗಳೂರು: ಮಾಧ್ಯಮದವರನ್ನೂ ಮುಂಚೂಣಿಯಲ್ಲಿರುವ ಕೊವಿಡ್​ 19 ವಾರಿಯರ್ಸ್​ ಎಂದು ಗುರುತಿಸಿ, ಅವರಿಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಘೋಷಣೆ ಮಾಡಿದ್ದಾರೆ. ಇದೀಗ ಈ ವಿಚಾರವಾಗಿ ಯಡಿಯೂರಪ್ಪನವರಿಗೆ ಮಾಜಿ ಸಿಎಂ ಸಿದ್ದರಾಮಯ್ಯನವರು ಪತ್ರ ಬರೆದು, ಮಾಧ್ಯಮದವರನ್ನು ಕೇವಲ ಫ್ರಂಟ್​ಲೈನ್​ ವರ್ಕರ್ಸ್​​ ಎಂದು ಗುರುತಿಸಿದರೆ ಸಾಲದು, ಅವರಿಗೆ ಪರಿಹಾರವನ್ನೂ ನೀಡಬೇಕು ಎಂದು ಒತ್ತಾಯಿಸಿದ್ದರು.

ಉಳಿದ ಮುಂಚೂಣಿ ಕೊವಿಡ್ ವಾರಿಯರ್ಸ್​ಗೆ ಸಿಗುವ ಎಲ್ಲ ಸೌಲಭ್ಯಗಳೂ ಮಾಧ್ಯಮದವರಿಗೂ ಸಿಗುವಂತಾಗಬೇಕು ಎಂದು ಸಿದ್ದರಾಮಯ್ಯನವರು ಪತ್ರದಲ್ಲಿ ಒತ್ತಾಯಿಸಿದ್ದಾರೆ. ಮಾಧ್ಯಮದವರು ಮೃತಪಟ್ಟರೆ ಪರಿಹಾರ ಕಲ್ಪಿಸಿ. ಅವರ ವೈದ್ಯಕೀಯ ವೆಚ್ಚ ಸರ್ಕಾರವೇ ಭರಿಸುವಂತಾಗಲಿ ಎಂಬ ವಿಚಾರವನ್ನೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದಲ್ಲಿ ಸೇರಿ ಬಹುತೇಕ ರಾಜ್ಯಗಳಲ್ಲಿ ಹಲವು ಪತ್ರಕರ್ತರು ಕೊವಿಡ್​ 19 ಸೋಂಕಿನಿಂದ ಜೀವ ಕಳೆದುಕೊಂಡಿದ್ದಾರೆ. ಒಡಿಶಾದಲ್ಲಿ ಪತ್ರಕರ್ತರನ್ನು ಮುಂಚೂಣಿ ವಾರಿಯರ್ಸ್​ ಎಂದು ಘೋಷಿಸಿ, ಆರ್ಥಿಕ ನೆರವು ನೀಡುವುದಾಗಿಯೂ ಅಲ್ಲಿನ ಸರ್ಕಾರ ಪ್ರಕಟಿಸಿದೆ.

ಇದನ್ನೂ ಓದಿ: ದೇಶದಲ್ಲಿ ತೀವ್ರವಾಗುತ್ತಿದೆ ಕೊವಿಡ್​ 19; ಇಂದು ಮತ್ತೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ಮೋದಿ