‘ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪಿಸಿ; ಇಲ್ಲವೇ ಕ್ರೈಸ್ತರನ್ನ ಹೋರಾಟಕ್ಕೆ ಧುಮುಕುವಂತೆ ಮಾಡುವೆವು’

ಮಂಗಳೂರು: ಮರಾಠ ನಿಗಮದ ಬೆನ್ನಲ್ಲೇ ಕ್ರೈಸ್ತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವಂತೆ ಮಂಗಳೂರಿನಲ್ಲಿ ಮಾಜಿ ಎಂಎಲ್ ಸಿ, ಕೆಪಿಸಿಸಿ ವಕ್ತಾರ ಐವನ್ ಡಿಸೋಜಾ ಹೇಳಿದ್ದಾರೆ. ಕ್ರೈಸ್ತರಲ್ಲಿಯೂ ರಾಜ್ಯದಲ್ಲಿ ಸಾಕಷ್ಟು ಬಡ ಜನರಿದ್ದಾರೆ, ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಗೆ ನಮ್ಮ ಒತ್ತಾಯವಿತ್ತು. ಆದರೆ ಸರಕಾರ ನಮ್ಮ ಮನವಿಗೆ ಸರಿಯಾಗಿ ಸ್ಪಂದಿಸಿಲ್ಲ. ರಾಜ್ಯದ ಕ್ರೈಸ್ತರನ್ನ ಹೋರಾಟಕ್ಕೆ ಧುಮುಕುವಂತೆ ಮಾಡುವೆವು, ಜನರು ಬೀದಿಗೆ ಬಂದರೆ ಸರಕಾರವೇ ನೇರ ಹೊಣೆ. ಹೀಗಾಗಿ ಕ್ರೈಸ್ತರನ್ನ ಯಾವತ್ತೂ ಲಘುವಾಗಿ ಪರಿಗಣಿಸಬೇಡಿ. ಕ್ರೈಸ್ತ ಸಮುದಾಯದ ಮೌನ, ಅವರ ವೀಕ್ನೆಸ್ […]

‘ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪಿಸಿ; ಇಲ್ಲವೇ ಕ್ರೈಸ್ತರನ್ನ ಹೋರಾಟಕ್ಕೆ ಧುಮುಕುವಂತೆ ಮಾಡುವೆವು’
Updated By: ಸಾಧು ಶ್ರೀನಾಥ್​

Updated on: Nov 18, 2020 | 2:48 PM

ಮಂಗಳೂರು: ಮರಾಠ ನಿಗಮದ ಬೆನ್ನಲ್ಲೇ ಕ್ರೈಸ್ತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವಂತೆ ಮಂಗಳೂರಿನಲ್ಲಿ ಮಾಜಿ ಎಂಎಲ್ ಸಿ, ಕೆಪಿಸಿಸಿ ವಕ್ತಾರ ಐವನ್ ಡಿಸೋಜಾ ಹೇಳಿದ್ದಾರೆ.

ಕ್ರೈಸ್ತರಲ್ಲಿಯೂ ರಾಜ್ಯದಲ್ಲಿ ಸಾಕಷ್ಟು ಬಡ ಜನರಿದ್ದಾರೆ, ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಗೆ ನಮ್ಮ ಒತ್ತಾಯವಿತ್ತು. ಆದರೆ ಸರಕಾರ ನಮ್ಮ ಮನವಿಗೆ ಸರಿಯಾಗಿ ಸ್ಪಂದಿಸಿಲ್ಲ. ರಾಜ್ಯದ ಕ್ರೈಸ್ತರನ್ನ ಹೋರಾಟಕ್ಕೆ ಧುಮುಕುವಂತೆ ಮಾಡುವೆವು, ಜನರು ಬೀದಿಗೆ ಬಂದರೆ ಸರಕಾರವೇ ನೇರ ಹೊಣೆ. ಹೀಗಾಗಿ ಕ್ರೈಸ್ತರನ್ನ ಯಾವತ್ತೂ ಲಘುವಾಗಿ ಪರಿಗಣಿಸಬೇಡಿ. ಕ್ರೈಸ್ತ ಸಮುದಾಯದ ಮೌನ, ಅವರ ವೀಕ್ನೆಸ್ ಅಲ್ಲ ಎಂದು ಗುಡುಗಿದ್ದಾರೆ.

ಚರ್ಚ್ ದಾಳಿಯಾದಾಗಲೂ ತಾಳ್ಮೆ ವಹಿಸಿದ್ದೀವಿ..
ಅಂದು ಬಿಷಪ್ ಸನ್ಮಾನ ಸ್ವೀಕರಿಸಿದ ಸಿಎಂ ಇದಕ್ಕೆ ಅನುಮೋದನೆ ನೀಡುವುದಾಗಿ ಹೇಳಿದ್ರು. ಆದರೆ ಆನಂತರ ಯಾಕಾಗಿ ರದ್ದು ಮಾಡಿದ್ದೀರಿ? ತಕ್ಷಣವೇ ಸಿಎಂ ಇದಕ್ಕೆ ಉತ್ತರ ಕೊಡಬೇಕು. ಜೊತೆಗೆ 55 ಕೋಟಿ ನಿಗಮಕ್ಕಾಗಿ ಇಟ್ಟಿದ್ದು ಏನು ಮಾಡಿದ್ದೀರಿ? 2008 ರಲ್ಲಿ ಚರ್ಚ್ ದಾಳಿಯಾದಾಗಲೂ ತಾಳ್ಮೆ ವಹಿಸಿದ್ದೀವಿ.

ಅಲ್ಲದೆ ಸರಕಾರ ಕ್ರೈಸ್ತರಿಗಾಗಿ ಚಿಕ್ಕಾಸು ಖರ್ಚು ಮಾಡಿಲ್ಲ. ನಿಗಮ ಕೊಟ್ಟಿದ್ದೇವೆ ಅಂತಾ‌ ಜಾಹೀರಾತು ನೀಡಿದ್ರು. ಆದರೆ ಅದು ಏನು ಪ್ರಯೋಜನವಾಗಲಿಲ್ಲ. ಕ್ರೈಸ್ತರನ್ನ ಸಿಎಂ ಮಂಗಗಳು ಎಂದು ಭಾವಿಸಿಕೊಂಡಿದ್ದೀರೋ? ಎಂದು ಐವನ್ ಡಿಸೋಜಾ ಸರ್ಕಾರವನ್ನು ಟೀಕಿಸಿದ್ದಾರೆ.