ರಾಜ್ಯದಲ್ಲಿ ಇಂದಿನಿಂದ ಪೋಲಿಯೋ ಲಸಿಕೆ ಕಾರ್ಯಕ್ರಮ.. ಮುಂಜಾಗ್ರತಾ ಕ್ರಮವಾಗಿ 4 ದಿನ ಕೊವಿಡ್ ಲಸಿಕೆ ಅಭಿಯಾನ ಸ್ಥಗಿತ..!

|

Updated on: Jan 31, 2021 | 7:11 AM

5 ವರ್ಷದೊಳಗಿನ ಮಕ್ಕಳಿಗೆ ಇಂದಿನಿಂದ ಫೆ.3ರವರೆಗೆ ಪೋಲಿಯೋ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಹಿಸಿ ಪೋಲಿಯೋ ಲಸಿಕೆ ನಡೆಸಬೇಕು. ಇದಕ್ಕೆ ಹೆಚ್ಚಿನ ಸಮಯಾವಕಾಶ ಬೇಕಾದ ಹಿನ್ನೆಲೆಯಲ್ಲಿ ಕೊವಿಡ್ ಲಸಿಕೆ ಅಭಿಯಾನವನ್ನು ಸ್ಥಗಿತಗೊಳಿಸಲಾಗಿದೆ.

ರಾಜ್ಯದಲ್ಲಿ ಇಂದಿನಿಂದ ಪೋಲಿಯೋ ಲಸಿಕೆ ಕಾರ್ಯಕ್ರಮ.. ಮುಂಜಾಗ್ರತಾ ಕ್ರಮವಾಗಿ 4 ದಿನ ಕೊವಿಡ್ ಲಸಿಕೆ ಅಭಿಯಾನ ಸ್ಥಗಿತ..!
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ 4 ದಿನ ಪೋಲಿಯೋ ಲಸಿಕೆ ಕಾರ್ಯಕ್ರಮ ಆಯೋಜಿಸಿರುವ ಹಿನ್ನೆಲೆಯಿಂದಾಗಿ ಇಂದಿನಿಂದ 4 ದಿನ ರಾಜ್ಯದಲ್ಲಿ ಕೊವಿಡ್ ಲಸಿಕೆ ಅಭಿಯಾನವಿರುವುದಿಲ್ಲ.

5 ವರ್ಷದೊಳಗಿನ ಮಕ್ಕಳಿಗೆ ಇಂದಿನಿಂದ ಫೆ.3ರವರೆಗೆ ಪೋಲಿಯೋ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಹಿಸಿ ಪೋಲಿಯೋ ಲಸಿಕೆ ನಡೆಸಬೇಕು. ಇದಕ್ಕೆ ಹೆಚ್ಚಿನ ಸಮಯಾವಕಾಶ ಬೇಕಾದ ಹಿನ್ನೆಲೆಯಲ್ಲಿ ಕೊವಿಡ್ ಲಸಿಕೆ ಅಭಿಯಾನವನ್ನು ಸ್ಥಗಿತಗೊಳಿಸಲಾಗಿದೆ. 4 ದಿನ ಕೊವಿಡ್ ಲಸಿಕೆ ಕಾರ್ಯಕ್ರಮ ನಡೆಸದಂತೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ಕುಮಾರ್ ಪಾಂಡೆ ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಜನವರಿ 31 ರಂದು 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ: ಸಚಿವ ಕೆ. ಸುಧಾಕರ್

Published On - 7:10 am, Sun, 31 January 21