KIADBಯಿಂದ ರೈತರಿಗೆ ವಂಚನೆ ಆರೋಪ: ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ವಕೀಲ
ಸರ್ಕಾರದ ಕೆಐಎಡಿಬಿ ರಿಯಲ್ ಎಸ್ಟೇಟ್ ಏಜೆಂಟ್ ಆಗುತ್ತಿದೆ. ಕೈಗಾರಿಕೆಗಳಿಗೆ ರೈತರ ಜಮೀನು ವಶಪಡಿಸಿಕೊಂಡು ಮಾರಾಟ ಮಾಡುತ್ತಿರುವುದು ಸಮಂಜಸವಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಬೆಂಗಳೂರು: ಕೈಗಾರಿಕೆಗಳಿಗೆ ರೈತರ ಜಮೀನು ವಶಪಡಿಸಿಕೊಂಡು ಮಾರಾಟ ಮಾಡುತ್ತಿರುವುದು ಸಮಂಜಸವಲ್ಲ. ಈ ನಿಟ್ಟಿನಲ್ಲಿ ಮೂಲ ಉದ್ದೇಶ ಮರೆತು ಸರ್ಕಾರಿ ಜಾಗ ಮಾರಾಟ ಮಾಡುತ್ತಿವೆ ಎಂಬುದಾಗಿ ಗ್ರಾಫೈಟ್ ಇಂಡಿಯಾ ಲಿಮಿಟೆಡ್ ಕಂಪನಿ ವಿರುದ್ಧ ಆರೋಪದ ಮಾತು ಕೇಳಿ ಬರುತ್ತಿದೆ.
ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಲು 1979-80ರಲ್ಲಿ 5 ಲಕ್ಷ ರೂ.ಗೆ 40 ಎಕರೆ ಜಮೀನು ಸರ್ಕಾರದಿಂದ ಮಂಜೂರು ಮಾಡಲಾಗಿತ್ತು. ಬಳಿಕ ಐಟಿಬಿಟಿ ಬಂದ ಮೇಲೆ ಪರಿಸರ ಮಾಲಿನ್ಯವಾಗುತ್ತೆ ಎಂದು ಕೆಲಸಗಳನ್ನು ಅಲ್ಲಿಗೆ ನಿಲ್ಲಿಸಲಾಯಿತು. ಇದನ್ನೆಲ್ಲ ನೋಡಿಯೂ KIADB ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
KIADB ಅಧಿಕಾರಿಗಳ ಜೊತೆ ಸೇರಿ ಗ್ರಾಫೈಟ್ ಇಂಡಿಯಾ 2,200 ಕೋಟಿಗೆ ಮಾರುತ್ತಿದೆ. ಈ ಮೂಲಕ ಸರ್ಕಾರದ KIADB ರಿಯಲ್ ಎಸ್ಟೇಟ್ ಏಜೆಂಟ್ ಆಗುತ್ತಿದೆ. ಮಾರಾಟ ಮಾಡುತ್ತಿರುವ ಜಾಗವನ್ನ KIADB ವಾಪಸ್ಸು ಪಡೆಯಬೇಕು. ಮೂಲ ಉದ್ದೇಶವನ್ನ ಮರೆತು ಮಾರಾಟ ಮಾಡಲಾಗುತ್ತಿದೆ. ಇದನ್ನ ಕೂಡಲೇ ಹಿಂತಿರುಗಿಸಬೇಕು ಎಂದು ವಕೀಲ ಅಮೃತೇಶ್ ಎಂಬುವವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
Published On - 8:03 am, Sun, 31 January 21