ಬೆಂಗಳೂರು, ಸೆಪ್ಟೆಂಬರ್ 15: ನಕಲಿ ದೂರು ದಾಖಲಿಸಿ ಅಮಾಯಕರನ್ನು ಜೈಲಿಗಟ್ಟಿದ್ದ ಬೆಂಗಳೂರಿನ ಬನಶಂಕರಿ ಠಾಣೆ ಪಿಎಸ್ಐ ಸೇರಿದಂತೆ ನಾಲ್ವರ ಪೊಲೀಸರ ಅಮಾನತು (suspended) ಮಾಡಲಾಗಿದೆ. ಬನಶಂಕರಿ ಠಾಣೆ ಪಿಎಸ್ಐ ಶ್ರೀಧರ್ ಗುಗ್ರಿ, ಎಎಸ್ಐ ಎಸ್.ಕೆ.ರಾಜು, ಕಾನ್ಸ್ಟೇಬಲ್ಗಳಾದ ಸತೀಶ್ ಬಗಲಿ, ತಿಮ್ಮಪ್ಪ ಪೂಜಾರ ಅಮಾನತುಗೊಳಿಸಿ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಆದೇಶ ಹೊರಡಿಸಿದ್ದಾರೆ.
ಸುಳ್ಳು ಮಾಹಿತಿ ನೀಡಿ ದೂರು ದಾಖಲಿಸಿದ್ದ ಬೆಂಗಳೂರಿನ ಸುಬ್ರಹ್ಮಣ್ಯಪುರ ಎಸಿಪಿ ಸ್ಕ್ವಾಡ್ನಿಂದ ರಾಜನ್, ಚೈತ್ರಾ ಕೂಡ ಬಂಧನ ಮಾಡಲಾಗಿದೆ. ಕದಿರೇನಹಳ್ಳಿಯ ಇಬ್ಬರ ವಿರುದ್ಧ ಸುಳ್ಳು ಎನ್ಡಿಪಿಎಸ್ ಕೇಸ್ ದಾಖಲಿಸಿ ಜೈಲು ಕಳುಹಿಸಲಾಗಿತ್ತು.
ಇದನ್ನೂ ಓದಿ: ತುಮಕೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ದುರ್ಘಟನೆ: ತಂದೆ, ಮಗ ಸೇರಿ ಮೂವರು ಸಾವು
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅಫೀಮು ಮಾರುತ್ತಿದ್ದಾರೆಂದು ಕದಿರೇನಹಳ್ಳಿಯ ಇಬ್ಬರ ವಿರುದ್ಧ ರಾಜನ್, ಚೈತ್ರಾ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಜೈಲಿಗಟ್ಟಿದ್ದಾರೆಂದು ಕಮಿಷನರ್ಗೆ ಜೈಲಿಗೆ ಹೋಗಿದ್ದವರ ಸಂಬಂಧಿಕರು ಆಯುಕ್ತರಿಗೆ ದೂರು ನೀಡಿದ್ದರು. ಹಾಗಾಗಿ ತನಿಖೆ ನಡೆಸಿ ಸುಳ್ಳು ಕೇಸ್ ದಾಖಲಿಸಿ ಜೈಲಿಗಟ್ಟಿದ್ದ ಪೊಲೀಸರ ಸಸ್ಪೆಂಡ್ ಮಾಡಲಾಗಿದ್ದು, ತಪ್ಪು ಮಾಹಿತಿ ನೀಡಿದ್ದ ರಾಜನ್, ಚೈತ್ರಾರನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸನ: ಕ್ಲಬ್ನಲ್ಲಿ ಪಾರ್ಟಿ ಮಾಡಿ ಅನುಚಿತ ವರ್ತನೆ ತೋರಿದ ಆರೋಪದಲ್ಲಿ ಜಿಲ್ಲೆಯ ಬೇಲೂರು ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸುಬ್ರಹ್ಮಣ್ಯ, ತಾಲ್ಲೂಕಿನ ಹಳೆಬೀಡು ವೃತ್ತದ ಸರ್ಕಲ್ ಇನ್ಸಪೆಕ್ಟರ್ ಜಯರಾಂ ಹಾಗೂ ಬೇಲೂರು ಠಾಣೆಯ ಪಿಎಸ್ಐ ಪ್ರವೀಣ್ ಸೇರಿ ಮೂವರನ್ನ ಅಮಾನತು ಮಾಡಿ ಹಾಸನ ಎಸ್ಪಿ ಮೊಹಮದ್ ಸುಜೀತಾ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಗ್ರಾಮ ಪಂಚಾಯತಿ ಮಾಜಿ ಸದಸ್ಯನ ತಲೆಗೆ 3 ಗುಂಡು ಹೊಡೆದು ಬರ್ಬರ ಹತ್ಯೆ
ಸೆಪ್ಟೆಂಬರ್ 3ರಂದು ಅಧಿಕಾರಿಗಳು ಸೇರಿ ಸಣ್ಣದೊಂದು ಡಿನ್ನರ್ ಪಾರ್ಟಿ ಮಾಡಿದ್ದಾರೆ. ಈ ವೇಳೆ ಊಟ ಮುಗಿಸಿ ಹೊರಡುವ ವೇಳೆ ಬಿಲ್ ವಿಚಾರಕ್ಕೆ ಕ್ಲಬ್ ಸಿಬ್ಬಂದಿ ಜೊತೆಗೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂಬ ಬಗ್ಗೆ ಕೇಳಿ ಬಂದ ದೂರು ಆಧರಿಸಿ ತನಿಖೆ ನಡೆಸಿದ ಎಸ್ಪಿ ತನಿಖಾ ವರದಿ ಪಡೆದು ಅಮಾನತು ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.