AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ಗ್ರಾಮ ಪಂಚಾಯತಿ ಮಾಜಿ ಸದಸ್ಯನ ತಲೆಗೆ 3 ಗುಂಡು ಹೊಡೆದು ಬರ್ಬರ ಹತ್ಯೆ

ಬೆಳಗ್ಗೆ ಮಗನನ್ನ ಶಾಲೆಗೆ ಬಿಟ್ಟು ಬರುತ್ತನೆಂದು ಹೇಳಿ ಹೋದ ಗ್ರಾಮ ಪಂಚಾಯತಿ ಮಾಜಿ ಸದಸ್ಯ ವಾಪಸ್ ಮನೆಗೆ ಬಂದಿದ್ದು ಹೆಣವಾಗಿ. ದಾರಿ ಮಧ್ಯೆ ದುಷ್ಕರ್ಮಿಗಳ ಗುಂಡಿನ ದಾಳಿಗೆ ಗ್ರಾಮ ಪಂಚಾಯತಿ ಮಾಜಿ ಸದಸ್ಯ ವಿಶ್ವನಾಥ್​ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಘಟನೆ ನಡೆದಿದೆ.

ಕಲಬುರಗಿ: ಗ್ರಾಮ ಪಂಚಾಯತಿ ಮಾಜಿ ಸದಸ್ಯನ ತಲೆಗೆ 3 ಗುಂಡು ಹೊಡೆದು ಬರ್ಬರ ಹತ್ಯೆ
ಮೃತ ವಿಶ್ವನಾಥ್​ ಜಮಾದಾರ್​​
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on:Sep 14, 2024 | 2:31 PM

Share

ಕಲಬುರಗಿ, ಸಪ್ಟೆಂಬರ್​ 14: ಗ್ರಾಮ ಪಂಚಾಯಿತಿ (Gram Panchayat) ಮಾಜಿ ಸದಸ್ಯನನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಆಳಂದ (Alanda) ತಾಲೂಕಿನ ಜಿಡಗಾ ಕ್ರಾಸ್ ಬಳಿ ನಡೆದಿದೆ. ಪಡಸಾವಳಗಿ ಗ್ರಾಮದ ವಿಶ್ವನಾಥ್​ ಜಮಾದಾರ್ ಕೊಲೆಯಾದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ. ವಿಶ್ವನಾಥ್​​​ ಜಮಾದಾರ್ ಶುಕ್ರವಾರ ಬೆಳಿಗ್ಗೆ ಮಗನನ್ನು ಶಾಲೆಗೆ ಬಿಟ್ಟು ಬರುತ್ತೇನೆ ಅಂತ ಬೈಕ್ ಮೇಲೆ ಹೋಗಿದ್ದರು. ಮಗನನ್ನು ಶಾಲೆಗೆ ಬಿಟ್ಟು ಜಿಡಗಾ ಕ್ರಾಸ್ ಬಳಿ ಬೈಕ್ ಮೇಲೆ ಬರುತ್ತಿದ್ದರು. ಈ ವೇಳೆ ಬೈಕ್​ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ವಿಶ್ವನಾಥ್​ ಅವರ ಮೇಲೆ ಏಕಾಏಕಿ ಗುಂಡಿನ ದಾಳಿ ಮಾಡಿದ್ದಾರೆ.

ವಿಶ್ವನಾಥ್​ ಅವರ ತೆಲೆಗೆ ಮೂರು ಗುಂಡು ಹೊಡೆದಿದ್ದಾರೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ವಿಶ್ವನಾಥ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿರ್ಜನ ಪ್ರದೇಶದಲ್ಲಿ ವಿಶ್ವನಾಥ್​ ಅವರನ್ನು ಕೊಂದು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ವಿಶ್ವಾನಥ್​ ಮೃತದೇಹ ಕಂಡ ದಾರಿಹೋಕರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಕೂಡಲೇ ಆಳಂದ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.

ಇದನ್ನೂ ಓದಿ: ಹನಿಟ್ರ್ಯಾಪ್ ಖೆಡ್ಡಾಕ್ಕೆ ಬಿದ್ದ ಕಲಬುರಗಿಯ ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು!

ಇನ್ನು, ವಿಚಾರ ತಿಳಿಯುತ್ತಿದ್ದಂತೆ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಕೂಡ ಸ್ಥಳಕ್ಕೆ ನೀಡಿ ಪರೀಶಿಲನೆ ನಡೆಸಿದರು. ವಿಚಾರ ತಿಳಿದ ವಿಶ್ವನಾಥ್ ಕುಟುಂಬಸ್ಥರು ಸ್ಥಳಕ್ಕೆ ತೆರಳಿದರು. ಮೃತದೇಹದ ಮುಂದೆ ಗೋಳಾಡಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಆಳಂದ ಪೊಲೀಸರು ಹಂತಕರ ಪತ್ತೆಗೆ ಬಲೆ ಬಿಸಿದ್ದಾರೆ. ಆಳಂದ ತಾಲೂಕಿನ ಕೋಲಿ ಸಮಾಜದ ಮುಖಂಡ ವಿಶ್ವನಾಥ್​ರ ಭೀಕರ ಹತ್ಯೆಯಿಂದ ಇಡೀ ತಾಲೂಕನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:27 pm, Sat, 14 September 24