ಬೆಂಗಳೂರಿನಲ್ಲಿ ಓದುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ನಿಫಾಗೆ ಸಾವು: ಕರ್ನಾಟಕದಲ್ಲಿ ಹೈ ಟೆನ್ಷನ್
ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ 24 ವರ್ಷದ ವಿದ್ಯಾರ್ಥಿ ನಿಫಾಗೆ ಮೃತಪಟ್ಟಿರುವಂತಹ ಘಟನೆ ಕೇರಳದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿ ಕೇರಳದ ಮಲಪುರಂ ನಿವಾಸಿ ಎಂದು ಗುರುತಿಸಲಾಗಿದೆ. ಇತ್ತ ವಿದ್ಯಾರ್ಥಿ ನಿಫಾಗೆ ಸಾವನ್ನಪ್ಪುತ್ತಿದ್ದಂತೆ ಕರ್ನಾಟಕದಲ್ಲಿ ಹೈ ಟೆನ್ಷನ್ ಶುರುವಾಗಿದೆ. ಹೀಗಾಗಿ ನಾಳೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಸಭೆ ಕರೆಯಲಾಗಿದೆ.
ಬೆಂಗಳೂರು, ಸೆಪ್ಟೆಂಬರ್ 15: ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ 24 ವರ್ಷ ವಿದ್ಯಾರ್ಥಿ ನಿಫಾಗೆ (Nipah Virus) ಸಾವನ್ನಪ್ಪಿರುವಂತಹ ಘಟನೆ ಕೇರಳದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿ ಮಲಪ್ಪುರಂ ಮೂಲದವರು ಎಂದು ತಿಳಿದುಬಂದಿದೆ. ವಿದ್ಯಾರ್ಥಿಗೆ ಅಕ್ಯೂಟ್ ರೆಸ್ಪಿರೇಟರಿ ಡಿಸ್ಟ್ರೆಸ್ ಸಿಂಡ್ರೋಮ್ (ಎಆರ್‌ಡಿಎಸ್) ಕಾಣಿಸಿಕೊಂಡಿದ್ದು, ವಿದ್ಯಾರ್ಥಿಯ ರಕ್ತ ಹಾಗೂ ಸಿರಂ ಸ್ಯಾಂಪಲ್ನಲ್ಲಿ ನಿಫಾ ಪಾಸಿಟಿವ್ ಕಂಡುಬಂದಿದೆ. ಹೀಗಾಗಿ ಸೆಪ್ಟೆಂಬರ್ 8 ರಂದು ಕೇರಳದಲ್ಲಿ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ.
ಕಾಲಿಗೆ ಪೆಟ್ಟು ಬಿದ್ದಿದ್ದರಿಂದ ಆಗಸ್ಟ್ 25ರಂದು ಬೆಂಗಳೂರಿನಿಂದ ವಿದ್ಯಾರ್ಥಿ ಕೇರಳಕ್ಕೆ ತೆರಳಿದ್ದಾರೆ. ಸೆಪ್ಟೆಂಬರ್ 5ರಂದು ವಿದ್ಯಾರ್ಥಿಗೆ ಜ್ವರ ಬಂದಿದ್ದರಿಂದ ಕ್ಲಿನಿಕ್ನಲ್ಲಿ ಚಿಕಿತ್ಸೆ ನೀಡಲಾಗಿದೆ. ಸೆಪ್ಟೆಂಬರ್ 6ರಂದು ವಾಂತಿ ಆಗಿದ್ದು, ಸೆಪ್ಟೆಂಬರ್ 7ರಂದು ಆರೋಗ್ಯ ಗಂಭೀರವಾಗಿದೆ. ಹೀಗಾಗಿ ತಕ್ಷಣ ಎಂಇಎಸ್ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿ ಮೃತಪಟ್ಟಿದ್ದಾರೆ.
ವಿದ್ಯಾರ್ಥಿ ನಿಫಾಗೆ ಬಲಿಯಾದ ಬೆನ್ನಲ್ಲೇ ರಾಜ್ಯದಲ್ಲಿ ಹೈ ಟೆನ್ಷನ್
ಅತ್ತ ವಿದ್ಯಾರ್ಥಿ ನಿಫಾಗೆ ಸಾವನ್ನಪ್ಪುತ್ತಿದ್ದಂತೆ ಇತ್ತ ರಾಜ್ಯದಲ್ಲಿ ಹೈ ಟೆನ್ಷನ್ ಶುರುವಾಗಿದೆ. ಹೀಗಾಗಿ ಕೇಂದ್ರ ಆರೋಗ್ಯಾಧಿಕಾರಿಗಳ ಸಮ್ಮುಖದಲ್ಲಿ ಇಂದು ಮಹತ್ವದ ಸಭೆ ಮಾಡಲಾಗಿದೆ. ರಾಜ್ಯದಲ್ಲಿ ನಿಫಾಗೆ ಮೃತಪಟ್ಟ ವಿದ್ಯಾರ್ಥಿ ಸಂಪರ್ಕಕ್ಕೆ ಬಂದವರ ಬಗ್ಗೆ ಎಚ್ಚರ ವಹಿಸಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Nipah Virus: ನಿಫಾ ವೈರಸ್ ಸೋಂಕಿತ 14 ವರ್ಷದ ಕೇರಳ ಬಾಲಕ ಹೃದಯಸ್ತಂಭನದಿಂದ ನಿಧನ
ನಿಫಾಗೆ ಸಾವನ್ನಪ್ಪಿರುವ ವಿದ್ಯಾರ್ಥಿ ಸಂಪರ್ಕಕ್ಕೆ ಬಂದ 70 ಪ್ರಾಥಮಿಕ ಸಂಪರ್ಕಿತರು ಕೇರಳದವರು ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾಗಿ ರಾಜ್ಯದಲ್ಲಿ ನಿಫಾ ಕುರಿತು ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಪ್ರಾಥಮಿಕ ವರದಿಯಲ್ಲಿ ನಿಫಾ ಲಕ್ಷಣಕಂಡು ಬಂದಿದ್ದು, ಶಂಕಿತ ನಿಫಾಗೆ ಮೃತಪಟ್ಟ ವಿದ್ಯಾರ್ಥಿಯ ಅಂತಿಮ ಪರೀಕ್ಷಾ ವರದಿ ಬರಬೇಕಿದೆ.
ಇದನ್ನೂ ಓದಿ: ಬೆಂಗಳೂರಿನ ಬೀದಿನಾಯಿಗಳ ಕಾಟ: ಟಿವಿ9 ಅಭಿಯಾನ ಬೆನ್ನಲ್ಲೇ ಸಹಾಯವಾಣಿ ಬಿಡುಗಡೆ ಮಾಡಿದ ಬಿಬಿಎಂಪಿ
ನಾಳೆ ಬೆಳಗ್ಗೆ 11 ಗಂಟೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ತುರ್ತು ಸಭೆ ಕರೆಯಲಾಗಿದೆ. ವಿದ್ಯಾರ್ಥಿಯ ಪ್ರಾಥಮಿಕ ಸಂಪರ್ಕಿತರ ಪತ್ತೆಗೆ ತಯಾರಿ ನಡೆಸಲಾಗಿದೆ. ಆರೋಗ್ಯ ಇಲಾಖೆ ಕೇರಳದಿಂದ ಮಾಹಿತಿ ಪಡೆಯಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:05 pm, Sun, 15 September 24