AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nipah Virus: ನಿಫಾ ವೈರಸ್ ಮಕ್ಕಳನ್ನೇ ಹೆಚ್ಚು ಕಾಡುವುದೇಕೆ?

ಮಕ್ಕಳು, ವಿಶೇಷವಾಗಿ ನವಜಾತ ಶಿಶುಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರ ದೇಹ ನಿಫಾ ವೈರಸ್‌ನಂತಹ ಸೋಂಕುಗಳನ್ನು ವಿರೋಧಿಸಲು ಸಿದ್ಧವಾಗಿರುವುದಿಲ್ಲ. ಪೋಷಕರು ತಮ್ಮ ಮಕ್ಕಳಿಗೆ ನಿಫಾ ವೈರಸ್ ಬಗ್ಗೆ ಸರಿಯಾದ ಶಿಕ್ಷಣ ನೀಡುವುದು ಮುಖ್ಯ.

Nipah Virus: ನಿಫಾ ವೈರಸ್ ಮಕ್ಕಳನ್ನೇ ಹೆಚ್ಚು ಕಾಡುವುದೇಕೆ?
ನಿಫಾ ವೈರಸ್ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Sep 19, 2023 | 11:48 AM

ಕೇರಳದಲ್ಲಿ ನಿಫಾ ವೈರಸ್ ಈಗಾಗಲೇ ಬಹಳ ಆತಂಕ ಮೂಡಿಸಿದೆ. ಈ ಝೂನೋಟಿಕ್ ವೈರಸ್ ಹರಡುವುದನ್ನು ತಡೆಯಲು ಕೇರಳ ಆರೋಗ್ಯ ಇಲಾಖೆ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಇದುವರೆಗೆ ಇಬ್ಬರು ನಿಫಾ ವೈರಸ್‌ಗೆ ಬಲಿಯಾಗಿದ್ದಾರೆ. 9 ವರ್ಷದ ಮಗು ಸೇರಿದಂತೆ ಇನ್ನೂ ಕೆಲವರು ಈ ಮಾರಕ ಸೋಂಕಿಗೆ ಒಳಗಾಗಿದ್ದಾರೆ. ಕೇರಳದಲ್ಲಿ ಅಟ್ಟಹಾಸ ಮೆರೆಯುತ್ತಿರುವ ನಿಫಾ ವೈರಸ್ ವಯಸ್ಕರಿಗಿಂತ ಹೆಚ್ಚಾಗಿ ಮಕ್ಕಳನ್ನೇ ಕಾಡುತ್ತಿದೆ.

ನಿಫಾ ವೈರಸ್ ಮಕ್ಕಳಲ್ಲಿ ಏಕೆ ಹೆಚ್ಚು ಹರಡುತ್ತಿದೆ?: ನಿಫಾ ವೈರಸ್ ಝೂನೋಟಿಕ್ ಸೋಂಕು ಆಗಿದ್ದು, ಅದು ಮನುಷ್ಯರ ಜೀವವನ್ನೂ ತೆಗೆಯಬಹುದು. ವಯಸ್ಕರಿಗಿಂತ ಮಕ್ಕಳು ಈ ವೈರಸ್‌ಗೆ ತುತ್ತಾಗುತ್ತಿದ್ದಾರೆ. ಮಕ್ಕಳ ಮೇಲೆ ನಿಫಾ ವೈರಸ್ ಹೆಚ್ಚು ಗಂಭೀರವಾಗಿ ಪರಿಣಾಮ ಬೀರುತ್ತಿರುವುದು ಆತಂಕಕಾರಿಯಾಗಿದೆ. ವಯಸ್ಕರಿಗೆ ಹೋಲಿಸಿದರೆ ಮಕ್ಕಳ ರೋಗನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಇದರಿಂದ ಅವರು ಈ ವೈರಸ್​ನ ಸಂಪರ್ಕಕ್ಕೆ ಬಂದರೆ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ: Guava Juice: ತೂಕ ಇಳಿಸಿಕೊಳ್ಳಲು ಪೇರಲೆ ಜ್ಯೂಸ್ ಕುಡಿದು ನೋಡಿ

ಈ ಬಗ್ಗೆ ಪೊವಾಯಿಯ ಡಾ. ಎಲ್.ಎಚ್ ಹಿರಾನಂದಾನಿ ಆಸ್ಪತ್ರೆಯ ಜನರಲ್ ಮೆಡಿಸಿನ್ ಮತ್ತು ಸಾಂಕ್ರಾಮಿಕ ರೋಗ ತಜ್ಞ ಡಾ. ನೀರಜ್ ಕುಮಾರ್ ತುಲಾರ ಇಂಡಿಯಾ ಡಾಟ್ ಕಾಂಗೆ ಮಾಹಿತಿ ನೀಡಿದ್ದು, ಈ ಸೋಂಕು ಮಕ್ಕಳಲ್ಲಿ ಏಕೆ ಹರಡುತ್ತದೆ ಎಂಬುದನ್ನು ತಿಳಿಸಿದ್ದಾರೆ. ಹಾಗೇ, ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಸಹ ತಿಳಿಸಿದ್ದಾರೆ.

ರೋಗನಿರೋಧಕ ವ್ಯವಸ್ಥೆಯ ಕೊರತೆ:

ಮಕ್ಕಳು ಹೆಚ್ಚು ಸೋಂಕಿಗೆ ಒಳಗಾಗುವವರಲ್ಲಿ ಮುಖ್ಯ ಅಂಶವೆಂದರೆ ಅವರ ಅಭಿವೃದ್ಧಿಯಾಗದ ರೋಗನಿರೋಧಕ ವ್ಯವಸ್ಥೆಗಳು. ಮಕ್ಕಳು, ವಿಶೇಷವಾಗಿ ನವಜಾತ ಶಿಶುಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರ ದೇಹ ನಿಫಾ ವೈರಸ್‌ನಂತಹ ಸೋಂಕುಗಳನ್ನು ವಿರೋಧಿಸಲು ಸಿದ್ಧವಾಗಿರುವುದಿಲ್ಲ.

ಕುಟುಂಬಗಳೊಂದಿಗೆ ನಿಕಟ ಸಂಪರ್ಕ:

ಮಕ್ಕಳು ತಮ್ಮ ಪೋಷಕರು, ಒಡಹುಟ್ಟಿದವರು ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಹೆಚ್ಚು ದೈಹಿಕ ಸಂಪರ್ಕವನ್ನು ಹೊಂದಿರುತ್ತಾರೆ. ಈ ಹತ್ತಿರದ ದೈಹಿಕ ಸಂಪರ್ಕವು ಮನೆಗಳಲ್ಲಿ ವೈರಸ್ ಹರಡಲು ಕಾರಣವಾಗಬಹುದು. ಅಲ್ಲದೆ, ಚಿಕ್ಕ ಮಕ್ಕಳು ಸಂಪೂರ್ಣವಾಗಿ ಎಚ್ಚರ ವಹಿಸಲು ಸಾಧ್ಯವಾಗದಿರಬಹುದು. ಅವರಿಗೆ ಸೋಂಕು ತಡೆಗಟ್ಟುವ ಕ್ರಮವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಇದು ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ನೀವು ದಿನಕ್ಕೆ 5 ಗಂಟೆಗಳಿಗಿಂತ ಹೆಚ್ಚು ಕಾಲ ಎಸಿಯ ತಂಪಿನಲ್ಲಿ ಕೂತಿದ್ದರೆ ಏನಾಗುತ್ತೆ ಗೊತ್ತೇ?

ಅರಿವು ಮತ್ತು ತಿಳಿವಳಿಕೆಯ ಕೊರತೆ:

ವಯಸ್ಕರಿಗೆ ಹೋಲಿಸಿದರೆ, ಮಕ್ಕಳು ಅದೇ ಮಟ್ಟದ ಪ್ರಜ್ಞೆ ಅಥವಾ ಸೋಂಕನ್ನು ತಡೆಗಟ್ಟುವ ಕ್ರಮಗಳ ತಿಳುವಳಿಕೆಯನ್ನು ಹೊಂದಿರುವುದಿಲ್ಲ. ವೈರಸ್ ಹರಡುವುದನ್ನು ತಡೆಯಲು ಆಗಾಗ ಕೈ ತೊಳೆಯುವುದು, ಮಾಸ್ಕ್ ಧರಿಸುವುದು ಮತ್ತು ಇತರರಿಂದ ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅವರಿಗೆ ಕಷ್ಟಕರವಾಗಿರುತ್ತದೆ.

ನಿಫಾ ವೈರಸ್ ತಡೆಯಲು ಸಲಹೆಗಳು:

ಪೋಷಕರು ತಮ್ಮ ಮಕ್ಕಳಿಗೆ ನಿಫಾ ವೈರಸ್ ಬಗ್ಗೆ ಸರಿಯಾದ ಶಿಕ್ಷಣ ನೀಡುವುದು ಬಹಳ ಮುಖ್ಯ. ಈ ವೈರಸ್ ಹರಡುವುದನ್ನು ತಡೆಯಲು ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಆಗಾಗ ಕೈ ತೊಳೆಯುವುದು ಎಷ್ಟು ಮುಖ್ಯ ಎಂಬುದನ್ನು ಅವರಿಗೆ ತಿಳಿಸಿ.

ಯಾವುದಾದರೂ ವಸ್ತುವನ್ನು ತಿನ್ನುವ ಮೊದಲು ಸ್ವಚ್ಛವಾಗಿ ಕೈಗಳನ್ನು ತೊಳೆದುಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ತಿಳಿಸಿ ಹೇಳಿ. ವಾಶ್‌ರೂಮ್ ಬಳಸಿದ ನಂತರ ಹ್ಯಾಂಡ್‌ವಾಶ್ ಅಥವಾ ಸೋಪಿನಿಂದ ಕೈಗಳನ್ನು ತೊಳೆಯಲು ಮಕ್ಕಳಿಗೆ ಕಲಿಸಿ. ಮಾರುಕಟ್ಟೆಗಳು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಅಂತರವನ್ನು ಕಾಪಾಡಿಕೊಳ್ಳುವುದು ಕಷ್ಟಕರವಾಗಿದ್ದರೆ ಮಕ್ಕಳು ಮಾಸ್ಕ್ ಧರಿಸಬೇಕು. ಬಾಯಿ ಮತ್ತು ಮೂಗನ್ನು ಆವರಿಸುವ ಮತ್ತು ಮಗುವಿಗೆ ಧರಿಸಲು ಆರಾಮದಾಯಕವಾದ ಮಾಸ್ಕ್​ಗಳನ್ನು ತೆಗೆದುಕೊಳ್ಳಿ.

ನಿಫಾ ವೈರಸ್​ ಲಕ್ಷಣಗಳು:

ನಿಫಾ ವೈರಸ್ ತಗುಲಿರುವುದರ ಸಾಮಾನ್ಯ ಲಕ್ಷಣಗಳೆಂದರೆ, ಅನಾರೋಗ್ಯ, ಜ್ವರ, ಮೈ ಕೈ ನೋವು, ಸ್ನಾಯುಗಳ ನೋವು, ತಲೆನೋವು, ಸುಸ್ತು, ವಾಂತಿ. ನಿಫಾ ವೈರಸ್ ಮನುಷ್ಯರಲ್ಲಿ ಬಹಳ ವೇಗವಾಗಿ ಹರಡುತ್ತದೆ. ನಿಫಾ ವೈರಸ್ ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುತ್ತದೆ. ಅದೇ ರೀತಿ ಪ್ರಾಣಿಗಳಿಂದ ಮನುಷ್ಯರಿಗೂ ಹರಡುತ್ತದೆ. ಬಾವಲಿ, ಹಂದಿ, ಕುರಿ ಸೇರಿದಂತೆ ಸಾಕು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಬಾವಲಿ ಅಥವಾ ಹಕ್ಕಿಗಳು ಅರ್ಧಂಬರ್ಧ ತಿಂದು ಬಿಟ್ಟ ಹಣ್ಣುಗಳನ್ನು ಸೇವನೆ ಮಾಡುವುದರಿಂದ ನಿಫಾ ವೈರಸ್ ತಗುಲುತ್ತದೆ. ಬಾವಲಿಗಳು ತಿಂದ ಹಣ್ಣುಗಳನ್ನು ಸೇವನೆ ಮಾಡುವುದರಿಂದ ನಿಫಾ ವೈರಸ್ ತಗುಲುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ನಿಫಾ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡದಂತೆ ತಡೆಯಲು, ನಿಫಾ ವೈರಸ್ ತಗುಲಿದವರಿಂದ ಭೌತಿಕ ಅಂತರ ಕಾಪಾಡಿಕೊಳ್ಳಬೇಕು. ನಿಫಾ ವೈರಸ್ ತಗುಲಿದವರನ್ನು ಭೇಟಿಯಾದ ಬಳಿಕ ಕೈಗಳನ್ನು ತಪ್ಪದೇ ತೊಳೆಯಬೇಕು. ನಿಫಾ ವೈರಸ್ ಹರಡದಂತೆ ತಡೆಯಲು, ನಿಫಾ ವೈರಸ್ ತಗುಲಿರುವ ಪ್ರಾಣಿ, ಪಕ್ಷಿಗಳನ್ನು ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಹತ್ಯೆ ಮಾಡಿ ಮಣ್ಣಿನಲ್ಲಿ ಹೂತುಹಾಕಬೇಕು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ