ಬೆಂಗಳೂರಿನ ಬೀದಿನಾಯಿಗಳ ಕಾಟ: ಟಿವಿ9 ಅಭಿಯಾನ ಬೆನ್ನಲ್ಲೇ ಸಹಾಯವಾಣಿ ಬಿಡುಗಡೆ ಮಾಡಿದ ಬಿಬಿಎಂಪಿ

ಬೆಂಗಳೂರಿನ ಬೀದಿನಾಯಿಗಳ ಕಾಟದ ಬಗ್ಗೆ ನಿರಂತರ ವರದಿ ಮೂಲಕ ಜಾಗೃತಿ ಮೂಡಿಸಿದ್ರೂ ಅಲರ್ಟ್ ಆಗದ ಪಾಲಿಕೆ ಆಯುಕ್ತರಿಗೆ ಸ್ವತಃ ಬೀದಿನಾಯಿಗಳ ಅವತಾರದ ದರ್ಶನವಾಗಿದೆ. ಇದರ ಬೆನ್ನಲ್ಲೇ ಬಿಬಿಎಂಪಿ ಪಶುಪಾಲನಾ ವಿಭಾಗದ ಮೂಲಕ ಬೀದಿನಾಯಿ ಕಡಿತ ಪ್ರಕರಣಗಳ ನಿರ್ವಹಣೆಗೆ ಹೆಲ್ಪ್ ಲೈನ್ ಬಿಡುಗಡೆ ಮಾಡಲಾಗಿದೆ.

ಬೆಂಗಳೂರಿನ ಬೀದಿನಾಯಿಗಳ ಕಾಟ: ಟಿವಿ9 ಅಭಿಯಾನ ಬೆನ್ನಲ್ಲೇ ಸಹಾಯವಾಣಿ ಬಿಡುಗಡೆ ಮಾಡಿದ ಬಿಬಿಎಂಪಿ
ಬೆಂಗಳೂರಿನ ಬೀದಿನಾಯಿಗಳ ಕಾಟ: ಟಿವಿ9 ಅಭಿಯಾನ ಬೆನ್ನಲ್ಲೇ ಸಹಾಯವಾಣಿ ಬಿಡುಗಡೆ ಮಾಡಿದ ಬಿಬಿಎಂಪಿ
Follow us
ಶಾಂತಮೂರ್ತಿ
| Updated By: ಗಂಗಾಧರ​ ಬ. ಸಾಬೋಜಿ

Updated on: Sep 14, 2024 | 10:03 PM

ಬೆಂಗಳೂರು, ಸೆಪ್ಟೆಂಬರ್​ 14: ರಾಜಧಾನಿಯ ಬೀದಿನಾಯಿಗಳ (stray dog) ಬಗ್ಗೆ ಅಭಿಯಾನ ನಡೆಸಿದ್ದ ಟಿವಿ9, ಬೀದಿನಾಯಿಗಳ ಕಾಟದ ಬಗ್ಗೆ ನಿರಂತರ ವರದಿ ಪ್ರಸಾರ ಮಾಡಿತ್ತು. ಬೀದಿನಾಯಿಗಳ ಬಗ್ಗೆ ಸೈಲೆಂಟ್ ಆಗಿದ್ದ ಪಾಲಿಕೆ ಆಯುಕ್ತರಿಗೆ ಇಂದು ಬೀದಿನಾಯಿಗಳ ರೋಷಾವೇಷದ ಪ್ರದರ್ಶನವಾಗಿದೆ. ಗುಂಡಿ ಮುಚ್ಚುವ ಕೆಲಸ ಪರಿಶೀಲನೆ ವೇಳೆ ಬೌಬೌ ಗ್ಯಾಂಗ್ ಕಂಡು ಹೌಹಾರಿದ ಮುಖ್ಯ ಆಯುಕ್ತರು, ಇದೀಗ ಬಿಬಿಎಂಪಿ ಪಶುಪಾಲನಾ ವಿಭಾಗದ ಮೂಲಕ ಬೀದಿನಾಯಿ ಕಡಿತ ಪ್ರಕರಣಗಳ ನಿರ್ವಹಣೆಗೆ ಹೆಲ್ಪ್ ಲೈನ್ ಬಿಡುಗಡೆ ಮಾಡಲಾಗಿದೆ.

ಜಾಲಹಳ್ಳಿಯಲ್ಲಿ ಬೀದಿನಾಯಿಗಳ ದಾಳಿಗೆ ವೃದ್ಧೆ ಸಾವನ್ನಪ್ಪಿದ ಬೆನ್ನಲ್ಲೆ ರಾಜ್ಯ ಬೀದಿನಾಯಿಗಳ ಬಗ್ಗೆ ಟಿವಿ9 ವಿಶೇಷ ಅಭಿಯಾನ ನಡೆಸಿತ್ತು. ರಾಜಧಾನಿಯ ಬೀದಿನಾಯಿಗಳ ಕಾಟದ ಬಗ್ಗೆ ನಿರಂತರ ವರದಿ ಮೂಲಕ ಜಾಗೃತಿ ಮೂಡಿಸಿದ್ರೂ ಅಲರ್ಟ್ ಆಗದ ಪಾಲಿಕೆ ಆಯುಕ್ತರಿಗೆ ಸ್ವತಃ ಬೀದಿನಾಯಿಗಳ ಅವತಾರದ ದರ್ಶನವಾಗಿದೆ.

ಇದನ್ನೂ ಓದಿ: ವೃದ್ಧೆಗೆ ಕಚ್ಚಿದ್ದ ಬೀದಿನಾಯಿಗಾಗಿ ಹುಡುಕಾಡಿ ಬಿಬಿಎಂಪಿ ಸುಸ್ತು! ಬರೋಬ್ಬರಿ 110ಕ್ಕೂ ಹೆಚ್ಚು ಬೀದಿನಾಯಿಗಳ ಪರಿಶೀಲನೆ

ಸಹಕಾರನಗರದಲ್ಲಿ ರೌಂಡ್ಸ್ ವೇಳೆ ಪಾಲಿಕೆ ಆಯುಕ್ತರಿಗೆ ಬೌಬೌ ಗ್ಯಾಂಗ್ ಎದುರಾಗಿದ್ದು, ನಾಯಿಗಳ ಕಾಟಕ್ಕೆ ಶಾಕ್ ಆದ ಆಯುಕ್ತರು ರಸ್ತೆಯಿಂದ ವಾಪಸ್ ಆದ್ರೂ, ಈ ವೇಳೆ ಬೀದಿನಾಯಿಗಳ ಕಂಟ್ರೋಲ್ ಬಗ್ಗೆ ಮಾತಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಸದ್ಯ ನಾಯಿಗಳನ್ನ ಬೇರೆಡೆ ಬಿಡಲು ಆಗುತ್ತಿಲ್ಲ. ಒಬಿಸಿ ಮೂಲಕ ಬರ್ತ್ ಕಂಟ್ರೋಲ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಹೆಲ್ಪ್ ಲೈನ್ ನಂಬರ್ ಬಿಡುಗಡೆ

ಇನ್ನು ಬೀದಿನಾಯಿಗಳ ರೋಷಾವೇಷವನ್ನ ಕಣ್ಣಾರೆ ಕಂಡ ಪಾಲಿಕೆ ಮುಖ್ಯ ಆಯುಕ್ತರು, ಇದೀಗ ಬಿಬಿಎಂಪಿಯ ಪಶುಪಾಲನ ಇಲಾಖೆ ಮೂಲಕ ಬೀದಿನಾಯಿಗಳ ಕಡಿತ ಹಾಗೂ ರೇಬಿಸ್​ಗೆ ಹೆಲ್ಪ್ ಲೈನ್ ನಂಬರ್ ಬಿಡುಗಡೆ ಮಾಡಿ ಪ್ರಕಟಣೆ ಹೊರಡಿಸಿದ್ದಾರೆ. 6364893322 ಹಾಗೂ 1533 ಸಹಾಯವಾಣಿ ಬಿಡುಗಡೆ ಮಾಡಿರೋ ಪಾಲಿಕೆ, ಇದರ ಜೊತೆಗೆ ಬಿಬಿಎಂಪಿ ವ್ಯಾಪ್ತಿಯ ಡಾಗ್ ಕೆನಲ್ ಹೆಚ್ಚಳಕ್ಕೂ ತಯಾರಿ ನಡೆಸಿದೆ. ಇನ್ನು ಸಂತಾನಹರಣ, ರೋಗ ನಿರೋಧಕ ಚುಚ್ಚುಮದ್ದು ನೀಡೋದನ್ನ ಕೂಡ ಹೆಚ್ಚಿಸಲು ಚಿಂತನೆ ನಡೆಸಿದ್ದು, ಟಿವಿ9 ವರದಿ ಬಳಿಕ ಪಾಲಿಕೆ ಅಲರ್ಟ್ ಆಗಿದೆ.

ಇದನ್ನೂ ಓದಿ: ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ BBMPಯಿಂದ 4 ವರ್ಷದಲ್ಲಿ 40 ಕೋಟಿ ರೂ. ಖರ್ಚು

ಸದ್ಯ ಬೀದಿನಾಯಿಗಳಿಂದ ಆಗುತ್ತಿದ್ದ ಸಮಸ್ಯೆ ಬಗ್ಗೆ ಎಷ್ಟೇ ದೂರು ಬಂದರೂ ಸೈಲೆಂಟ್ ಆಗಿದ್ದ ಬಿಬಿಎಂಪಿ, ಇದೀಗ ಟಿವಿ9 ಅಭಿಯಾನದ ಬಳಿಕ ಆ ಬಗ್ಗೆ ಗಮನ ನೀಡುವುದಕ್ಕೆ ಸಜ್ಜಾಗಿದೆ. ಸದ್ಯ ಎಲ್ಲಾ ವಲಯಗಳ ಎಬಿಸಿ ಸೆಂಟರ್ ದುರಸ್ಥಿಗೂ ಚಿಂತನೆ ನಡೆಸಿರುವ ಪಾಲಿಕೆ 2023-24ರ ಬಜೆಟ್​ನಲ್ಲಿ ಇದಕ್ಕಾಗಿ ಮೀಸಲಿಟ್ಟಿದ್ದ 1ಕೋಟಿ 77 ಲಕ್ಷದ 32 ಸಾವಿರ ರೂ. ಅನುದಾನ ಬಳಸಿಕೊಳ್ಳೋಕೆ ಸಜ್ಜಾಗಿದೆ. ಒಟ್ಟಿನಲ್ಲಿ ಬೀದಿನಾಯಿಗಳಿಂದ ಬೇಸತ್ತ ಬೆಂಗಳೂರಿನ ಜನರಿಗೆ ಕೊಂಚ ರಿಲೀಫ್ ಸಿಕ್ಕಿದ್ದು, ಇನ್ನಾದ್ರೂ ಬೆಂಗಳೂರಿನ ಬೀದಿಗಳಲ್ಲಿ ಬೀದಿನಾಯಿಗಳ ಕಾಟಕ್ಕೆ ಕಡಿವಾಣ ಬೀಳುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ