ಒನ್ ಡೇ ಟ್ರಿಪ್ ಮಾಡಿ ಕ್ಯಾಬ್ ಚಾಲಕನ ಬಳಿಯೇ ದರೋಡೆ: ಕಾರು ಸಮೇತ ಪರಾರಿಯಾಗಿದ್ದ ಆಸಾಮಿ ಅಂದರ್
ಒನ್ ಡೇ ಟ್ರಿಪ್ ಮಾಡಿ ಕ್ಯಾಬ್ ಚಾಲಕನ ಬಳಿಯೇ ದರೋಡೆ ಮಾಡಿದ ಆರೋಪಿಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿರುವಂತಹ ಘಟನೆ ನಡೆದಿದೆ. ಟೆಕ್ಕಿಯ ಸೋಗಿನಲ್ಲಿ ಬಂದವನಿಂದ ಚಾಕು ತೋರಿಸಿ ದರೋಡೆ ಮಾಡಿದ್ದಲ್ಲದೇ ಕ್ಯಾಬ್ ಸಮೇತ ಪರಾರಿ ಆಗಿದ್ದ.
ದೇವನಹಳ್ಳಿ, ಸೆಪ್ಟೆಂಬರ್ 15: ಕ್ಯಾಬ್ ಚಾಲಕನ ಬಳಿಯೇ ದರೋಡೆ (robbery) ಮಾಡಿ ಜೊತೆಗೆ ಕ್ಯಾಬ್ ಸಮೇತ ಎಸ್ಕೇಪ್ ಆಗಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಬೆಂಗಳೂರು ಮೂಲದ ಖಾನ್ ಎಂಬಾತನನ್ನು ಬಂಧಿಸಿದ್ದಾರೆ. ದರೋಡೆ ಬಗ್ಗೆ ಚಾಲಕ ರವಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ವಿಲ್ಸನ್ ಗಾರ್ಡನ್ನಿಂದ ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಿದ್ದ ಆರೋಪಿ ಟೆಕ್ಕಿಯ ಸೋಗಿನಲ್ಲಿ ಕ್ಯಾಬ್ ಹತ್ತಿದ್ದಾನೆ. ಬಳಿಕ ಚಾಲಕ ರವಿಕುಮಾರ್ ಸಿಟಿ ಏರ್ಪೋಟ್ ಮತ್ತು ನಂದಿಬೆಟ್ಟ ಸುತ್ತಾಡಿ ಸಂಜೆ ಡಾಬಾಗೆ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಗ್ರಾಮ ಪಂಚಾಯತಿ ಮಾಜಿ ಸದಸ್ಯನ ತಲೆಗೆ 3 ಗುಂಡು ಹೊಡೆದು ಬರ್ಬರ ಹತ್ಯೆ
ಈ ವೇಳೆ ಡಾಬಾದಲ್ಲಿ ಚಾಕು ತೋರಿಸಿ ಬೆದರಿಸಿ ಹಣ, ಮೊಬೈಲ್ ಮತ್ತು ಅಕೌಂಟ್ನಲ್ಲಿದ್ದ ಹಣವನ್ನು ದರೋಡೆ ಮಾಡಿದ್ದು, ಬಳಿಕ ಅದೇ ಕ್ಯಾಬ್ನಲ್ಲಿ ಪರಾರಿ ಆಗಿದ್ದ. ಚಾಲಕ ದೂರು ಆಧರಿಸಿ ಸದ್ಯ ಪ್ರಕರಣ ಸಂಬಂಧ ತನಿಖೆ ನಡೆಸಿ ಆರೋಪಿಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಸರಗಳ್ಳತನ, ಮನೆ ಕಳ್ಳತನ ಮಾಡುತ್ತಿದ್ದ ಖದೀಮರು ಅಂದರ್
ತುಮಕೂರು: ನಗರದ ಗೋಕುಲ ಬಡಾವಣೆಯಲ್ಲಿ ಸರಗಳ್ಳತನ, ಮನೆ ಕಳ್ಳತನ ಪ್ರಕರಣವನ್ನು ಜಯನಗರ ಠಾಣೆಯ ಪೊಲೀಸರು ಭೇದಿಸಿ ಕಳ್ಳರನ್ನು ಬಂಧಿಸಿದ್ದಾರೆ. ಸರಗಳವು ಪ್ರಕರಣದಲ್ಲಿ ನಾಗಮಂಗಲ ಮೂಲದ ಕ್ಯಾಬ್ ಚಾಲಕ ಶಶಿಧರ್(37), ಪೀಣ್ಯದ ನಿವಾಸಿ ಅಭಿಷೇಕ್(21), ರೋಹನ್ ಕುಮಾರ್(20) ಬಂಧಿತರು.
ಇದನ್ನೂ ಓದಿ: Murder clue: ಹಿಟ್ ಅಂಡ್ ರನ್ ಅಪಘಾತ ಎಂದು ಬಿಂಬಿಸಿ ಭೀಕರ ಹತ್ಯೆ, ಆದರೆ ಮೃತಳ ಚಪ್ಪಲಿ ನೀಡಿತ್ತು ಮಹತ್ವದ ಸುಳಿವು!
2.95 ಲಕ್ಷ ಮೌಲ್ಯದ 49 ಗ್ರಾಂ 2 ಎಳೆಯ ಚಿನ್ನದ ಸರ, ಒಂದು ಬೈಕ್ ಜಪ್ತಿ ಮಾಡಲಾಗಿದೆ. ಇದರ ಜೊತೆಗೆ ಮನೆ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ. ಒಟ್ಟು 15 ಪ್ರಕರಣಗಳಿಗೆ ಇಬ್ಬರು ಆರೋಪಿಗಳು ಬೇಕಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.