ನಕಲಿ ಆಡಿಯೋಗಳನ್ನ ಸೃಷ್ಟಿಸುತ್ತಾರೆ: ಪರೋಕ್ಷವಾಗಿ ಮುನಿರತ್ನ ಆಡಿಯೋ ಡೂಪ್ಲಿಕೇಟ್ ಎಂದ ಯತ್ನಾಳ್
ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹಾಸ್ಯ ಕಲಾವಿದ ಒಬ್ಬ ಇದ್ದಾನೆ, ಎಷ್ಟು ಚೆಂದ ಮಿಮಿಕ್ರಿ ಮಾಡುತ್ತಾರೆ. ಆ ಮೂಲಕ ಪರೋಕ್ಷವಾಗಿ ಮುನಿರತ್ನ ಆಡಿಯೋ ಡೂಪ್ಲಿಕೇಟ್ ಎಂದಿದ್ದಾರೆ. ಶಾಸಕ ಮುನಿರತ್ನ ಆಡಿಯೋ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ವಿಜಯಪುರ, ಸೆಪ್ಟೆಂಬರ್ 15: ರಾಜರಾಜೇಶ್ವರಿನಗರ ಬಿಜೆಪಿ ಶಾಸಕ ಮುನಿರತ್ನ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Yatnal), ಅದು ಏನಿದೆ ನನಗೆ ಗೊತ್ತಿಲ್ಲ, ನಕಲಿ ಆಡಿಯೋಗಳನ್ನ ಸೃಷ್ಟಿಸುತ್ತಾರೆ. ಹಾಸ್ಯ ಕಲಾವಿದ ಒಬ್ಬ ಇದ್ದಾನೆ, ಎಷ್ಟು ಚೆಂದ ಮಿಮಿಕ್ರಿ ಮಾಡುತ್ತಾರೆ. ಆ ಮೂಲಕ ಪರೋಕ್ಷವಾಗಿ ಮುನಿರತ್ನ ಆಡಿಯೋ ಡೂಪ್ಲಿಕೇಟ್ ಎಂದು ಹೇಳಿದ್ದು, ಆಡಿಯೋ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ನವರಿಗೆ ಹಿಂದೂಗಳು ಬೇಕಾಗಿಲ್ಲ, ಮುಸ್ಲಿಮರು ಬೇಕಾಗಿದ್ದಾರೆ. ಮುಸ್ಲಿಮರ ಸಲುವಾಗಿಯೇ ಕಾಂಗ್ರೆಸ್ ಪಕ್ಷ ಇದೆ, ಹಿಂದೂಗಳಿಗೆ ಅಲ್ಲ. ಯಾದಗಿರಿಯಲ್ಲಿ ದಲಿತ ಸಮುದಾಯದ ಪಿಎಸ್ಐ ಆತ್ಮಹತ್ಯೆ ಮಾಡಿಕೊಂಡರು. ದಲಿತ ಸಂಘಟನೆಗಳು ಎಲ್ಲಿದ್ದಾವೆ ಅಂತಾ ನಾನು ಕೇಳುತ್ತೇನೆ. ಕೆಲವು ಮುಖಂಡರು ಪೇಯ್ಡ್ ಸರ್ವೆಂಟ್ ಇದ್ದಾರೆ, ಪೇಟಿಎಂ ಇದ್ದಂಗೆ, ಹಣ ಹಾಕಿದ ಕೂಡಲೇ ಕೆಲ ಸಂಘಟನೆಗಳು ಮಾತಾಡುತ್ತವೆ. ಹಣ ಕಡಿಮೆ ಆಯ್ತು ಅಂದರೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಅಂತಾರೆ.
ಇದನ್ನೂ ಓದಿ: ಜೀವ ಬೆದರಿಕೆ, ಜಾತಿ ನಿಂದನೆ ಆರೋಪ: ಶಾಸಕ ಮುನಿರತ್ನ 2 ದಿನ ಪೊಲೀಸ್ ಕಸ್ಟಡಿಗೆ
ರಾತ್ರಿ ಪೇಮೆಂಟ್ ಆಯ್ತು ಅಂದರೆ ಹೋರಾಟ ಹಿಂಪಡೆಯಲಾಯ್ತು ಅಂತಾರೆ. ಇಂತಹ ಸಂಘಟನೆಗಳಿಂದ ದಲಿತ ಸಮುದಾಯ ಉದ್ಧಾರ ಆಗುವುದಿಲ್ಲ. ದಲಿತರು ಹೊಸ ನಾಯಕತ್ವದ ಚಿಂತನೆ ಮಾಡಬೇಕು. ಅಂಬೇಡ್ಕರ್ ಅವರ ನಿಜವಾದ ಅನುಯಾಯಿ ಆಗಿದ್ದರೆ ಕಾಂಗ್ರೆಸ್ನಲ್ಲಿರಲ್ಲ. ಡಾ.ಅಂಬೇಡ್ಕರ್ ಬಗ್ಗೆ ದಲಿತ ಮುಖಂಡರು ಮೊದಲು ಓದಿಕೊಳ್ಳಲಿ. ಕಾಂಗ್ರೆಸ್ಗೆ ಎಂದೂ ಸೇರಬೇಡಿ ಅಂತಾ ಅಂಬೇಡ್ಕರ್ ಕರೆ ಕೊಟ್ಟಿದ್ದರು. ಕಾಂಗ್ರೆಸ್ನಲ್ಲಿರುವ ದಲಿತ ಮುಖಂಡರು ಅಂಬೇಡ್ಕರ್ ಅನುಯಾಯಿಗಳಲ್ಲ. ಅವರೆಲ್ಲ ಕಮರ್ಷಿಯಲ್ ಎಂದು ವಾಗ್ದಾಳಿ ಮಾಡಿದ್ದಾರೆ.
ರಾಹುಲ್ ಗಾಂಧಿ ಬಗ್ಗೆ ಮಾತನಾಡಿದರೆ ಕೇಸ್ ದಾಖಲಿಸುವ ವಿಚಾರವಾಗಿ ಮಾತನಾಡಿದ್ದು, ಕೇಸ್ ಮಾಡಲಿ ಬಿಡಿ, ನಾನು ಯಾರಿಗೂ ಅಂಜಲ್ಲ. ನಮ್ಮ ಪಕ್ಷದ ಮಹಾನಾಯಕರಿಗೆ ಅಂಜಿಲ್ಲ, ಇವರ್ಯಾರು ಎಂದು ಗುಡುಗಿದ್ದಾರೆ. ಯಾವ ಮಹಾ ನಾಯಕರಿಗೂ ನಾನು ಅಂಜುವುದಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ.
ಸಚಿವ ಎಂಬಿ ಪಾಟೀಲ ವಿರುದ್ಧ ವಾಗ್ದಾಳಿ
ಎಂ.ಬಿ ಪಾಟೀಲರ ಹಿಂದೆ ಸುಫಿ ಸಂತ ಓರ್ವಾ ಮಹಾನ್ ದಾರ್ಷನಿಕನಿದ್ದಾನೆ. ಲಿಂಗಾಯತರು ಮುಸ್ಲಿಂರು ಒಂದು. ಅವರು ನಮ್ಮ ಅನುಚರಣೆಗಳು ಒಂದು. ಅಂದರೆ ದನದ ಮಾಂಸ ತಿಂತಾರಾ ಲಿಂಗಾಯತರು. ಮುಸ್ಲಿಂರಿಗೆ ಲಿಂಗಾಯತರಿಗೆ ಹೋಲಿಸುತ್ತಾರೆ ಇವರು. ಅಲ್ಲೋರ್ವ ದಾರ್ಷಣಿಕನೋರ್ವನಿದ್ದಾನೆ. ಹಿಂದೂ ಸಂಪ್ರದಾಯದಿಂದ ಲಿಂಗಾಯತರನ್ನ ಪ್ರತ್ಯೇಕ ಮಾಡುವುದು ಇದು ಎಂದಿದ್ದಾರೆ.
ಇದನ್ನೂ ಓದಿ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: 2,500 ಕಿ.ಮೀ.ಉದ್ದದ ಮಾನವ ಸರಪಳಿಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ನಿಂದ ಪ್ರಶಸ್ತಿ
ಸನಾತನ ಹಿಂದೂ ಧರ್ಮದ ಕ್ಯಾವಿ ಬಟ್ಟೆಯನ್ನ ನಮ್ಮ ಸ್ವಾಮಿಜಿಗಳು ಹಾಕಿಕೊಳ್ಳುತ್ತಾರೆ. ಅವರೇನಾದರೂ ಹಸಿರು ಬಟ್ಟೆ, ಉದ್ದಗೆ ದಾಡಿ ಬಿಟ್ಟುಕೊಂಡು ಓಡಾಡುತ್ತಾರಾ. ಲಿಂಗಾಯತರು ಮತ್ತು ಮುಸ್ಲಿಂರು ಹೇಗೆ ಒಂದಾಗಲು ಸಾಧ್ಯ. ಲಿಂಗಾಯತರು ಇರಲಿ, ವೀರಶೈವರಿರಲಿ ಎಲ್ಲರು ಸನಾತನ ಹಿಂದೂ ಧರ್ಮದ ಭಾಗನೇ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.