ಬೆಂಗಳೂರು; ತಡರಾತ್ರಿ ಲಾಂಗ್​ ಡ್ರೈವ್​ ಹೋಗಿದ್ದ ಮೂವರು ವಿದ್ಯಾರ್ಥಿಗಳು ಹಿಟ್​ ಆ್ಯಂಡ್ ರನ್​ಗೆ ಬಲಿ

ಬೆಂಗಳೂರು ಏರ್ಪೋಟ್ ರಸ್ತೆಯಲ್ಲಿ ತಡರಾತ್ರಿ ಹಿಟ್ ಆ್ಯಂಡ್ ರನ್​ಗೆ ಮೂವರು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ತಡರಾತ್ರಿ ಮೂವರು ವಿದ್ಯಾರ್ಥಿಗಳು ಬೈಕ್​ನಲ್ಲಿ ಲಾಂಗ್ ಡ್ರೈವ್ ಹೊರಟಿದ್ದರು. ಈ ವೇಳೆ ಅಪರಿಚಿತ ವಾಹನ ಗುದ್ದಿದ್ದು ಸ್ಥಳದಲ್ಲೇ ಮೂವರು ಪ್ರಾಣಬಿಟ್ಟಿದ್ದಾರೆ. ಅಪಘಾತದ ರಭಸಕ್ಕೆ ಮೃತದೇಹಗಳು ನಜ್ಜುಗುಜ್ಜಾಗಿವೆ.

ಬೆಂಗಳೂರು; ತಡರಾತ್ರಿ ಲಾಂಗ್​ ಡ್ರೈವ್​ ಹೋಗಿದ್ದ ಮೂವರು ವಿದ್ಯಾರ್ಥಿಗಳು ಹಿಟ್​ ಆ್ಯಂಡ್ ರನ್​ಗೆ ಬಲಿ
ರಾಮನಗರ: ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ: ಒಂದೇ ಕುಟುಂಬದ ಐವರು ದುರ್ಮರಣ
Follow us
| Updated By: ಆಯೇಷಾ ಬಾನು

Updated on:Sep 12, 2024 | 9:09 AM

ಬೆಂಗಳೂರು, ಸೆ.12: ಬೆಂಗಳೂರಲ್ಲಿ ಹಿಟ್​ & ರನ್​ಗೆ ಮೂವರು ವಿದ್ಯಾರ್ಥಿಗಳು (Students) ಬಲಿಯಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಉತ್ತರ ತಾಲೂಕಿನ ಚಿಕ್ಕಜಾಲ ಬಳಿಯ ಕೆಂಪೇಗೌಡ ಏರ್​​ಪೋರ್ಟ್​ ರಸ್ತೆಯಲ್ಲಿ ತಡರಾತ್ರಿ 1 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಮೂವರು ಯುವಕರು ಬೈಕ್​ನಲ್ಲಿ ಲಾಂಗ್​ ಡ್ರೈವ್​ ಹೋಗಿದ್ದಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ (Death). ರೋಹಿತ್​​(22), ಸುಚಿತ್(22), ಹರ್ಷ(22) ಮೃತ ವಿದ್ಯಾರ್ಥಿಗಳು.

ಮೃತ ಮೂವರು GKVKನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅಪಘಾತದ ಭೀಕರತೆಗೆ ಹೆದ್ದಾರಿಯಲ್ಲಿ ನಜ್ಜು ಗುಜ್ಜಾದ ಸ್ಥಿತಿಯಲ್ಲಿ ಮೃತ ದೇಹಗಳು ಚಲ್ಲಾಪಿಲ್ಲಿಯಾಗಿವೆ. ಅಪಘಾತದ ನಂತರ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಮೃತದೇಹಗಳು ಅಂಬೇಡ್ಕರ್​​​ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪಟಾಕಿ ಹಚ್ಚಿದ್ದಕ್ಕೆ ಚಾಕು ಇರಿತ

ಗಣೇಶ ವಿಸರ್ಜನೆ ಬಳಿಕ ಪಟಾಕಿ ಹಚ್ಚಿದ ವಿಚಾರಕ್ಕೆ ಗಲಾಟೆ ನಡೆದಿದೆ. ತುಮಕೂರು ಜಿಲ್ಲೆ ಮಧುಗಿರಿ ಪಟ್ಟಣದ ಮೇಕೆಬಂಡೆ ಬಳಿ ಮಧು ಎಂಬುವನಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಗಲಾಟೆ ತೆಗೆದು ಚಾಕು ಇರಿಯಲಾಗಿದೆ ಎನ್ನಲಾಗಿದೆ. ಮಧು ಹೊಟ್ಟೆ ಭಾಗಕ್ಕೆ ಇರಿತವಾಗಿದ್ದು, ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ.

ಇದನ್ನೂ ಓದಿ: ಅತ್ತೆ-ಮಾವ ಇರಬಾರ್ದು, ವರ್ಷಕ್ಕೆ 30 ಲಕ್ಷ ರೂ. ಸಂಬಳವಿರಬೇಕು ಇಂಥಾ ಪತಿಯೇ ಬೇಕು, ಚರ್ಚೆ ಹುಟ್ಟುಹಾಕಿದ ಪೋಸ್ಟ್​

BMTC ಬಸ್ ಬ್ರೇಕ್ ಫೇಲ್.. ಮರಕ್ಕೆ ಡಿಕ್ಕಿ

ಬಿಎಂಟಿಸಿ ಬಸ್ ಬ್ರೇಕ್ ಫೇಲ್ ಆಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ನಂದಿನ ಲೇಔಟ್​ನ APMC ಕ್ವಾರ್ಟರ್ಸ್ ಬಳಿ ಘಟನೆ ನಡೆದಿದ್ದು, ಜೈಮಾರುತಿ ನಗರದಿಂದ ಮೆಜೆಸ್ಟಿಕ್​ ಕಡೆ ತೆರಳುತ್ತಿದ್ದ BMTC ಬಸ್, ಬ್ರೇಕ್ ಫೇಲಾಗಿದ್ದರಿಂದ ಮರಕ್ಕೆ ಗುದ್ದಿಸಿ ಚಾಲಕ ಗಂಗಾಧರ ಅನಾಹುತ ತಪ್ಪಿಸಿದ್ದಾರೆ. ಪದೇ ಪದೇ ಅನಾಹುತಗಳು ಸಂಭವಿಸ್ತಿದ್ರು ಬಿಎಂಟಿಸಿ ಮಾತ್ರ ಎಚ್ಚೆತ್ತುಕೊಳ್ತಿಲ್ಲ ಅಂತಾ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:08 am, Thu, 12 September 24