ರಾಷ್ಟ್ರಪತಿಯಿಂದ ಚಿನ್ನದ ಪದಕ ಪಡೆದ ವಿಜಯಪುರ ವಿದ್ಯಾರ್ಥಿನಿಯ ಕಾಲೇಜು ಶುಲ್ಕ ಮನ್ನಾ! ವ್ಯಾಸಂಗ ಉಚಿತ; ಉಪನ್ಯಾಸಕಿ ಹುದ್ದೆ ಖಚಿತ

| Updated By: ಸಾಧು ಶ್ರೀನಾಥ್​

Updated on: Feb 15, 2021 | 6:26 PM

ವಿಜಯಪುರದ ತಮ್ಮ ನಿವಾಸದಲ್ಲಿ ಭೇಟಿಯಾದ ಸೋನಾಲಿಗೆ ಎಂ. ಬಿ. ಪಾಟೀಲ್ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಉಚಿತ ಪ್ರವೇಶ ನೀಡಿದರು. ಜೊತೆಗೆ ಅಭ್ಯಸಿಸಿದ ಕಾಲೇಜಿನಲ್ಲಿಯೇ ಉಪನ್ಯಾಸಕ ಹುದ್ದೆಯ ಆದೇಶ ಪ್ರತಿಯನ್ನು ನೀಡಿದರು.

ರಾಷ್ಟ್ರಪತಿಯಿಂದ ಚಿನ್ನದ ಪದಕ ಪಡೆದ ವಿಜಯಪುರ ವಿದ್ಯಾರ್ಥಿನಿಯ ಕಾಲೇಜು ಶುಲ್ಕ ಮನ್ನಾ! ವ್ಯಾಸಂಗ ಉಚಿತ; ಉಪನ್ಯಾಸಕಿ ಹುದ್ದೆ ಖಚಿತ
ಶಾಸಕ ಎಂ. ಬಿ. ಪಾಟೀಲ್ ಸೋನಾಲಿ ರಾಠೋಡ್​ಗೆ ಗೌರವಿಸಿದರು
Follow us on

ವಿಜಯಪುರ: ಕಳೆದ ವಾರ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ರಾಜ್ಯದ ಪ್ರವಾಸ ಮಾಡಿದ್ದು, ಮೂರು ದಿನಗಳ ಪ್ರವಾಸದ ವೇಳೆ ರಾಷ್ಟ್ರಪತಿ ಕೋವಿಂದ್  ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ವಿಜಯಪುರ ನಗರದ ವಿದ್ಯಾರ್ಥಿನಿ ಸೋನಾಲಿ ರಾಠೋಡ್ ಎರಡು ಚಿನ್ನದ ಪದಕಗಳನ್ನು ರಾಷ್ಟ್ರಪತಿಯಿಂದ ಪಡೆದಿದ್ದರು.

ಅದೃಷ್ಟ ಬದಲಾಯಿಸಿದ ಚಿನ್ನದ ಪದಕಗಳು:
ರಾಷ್ಟ್ರಪತಿಗಳಿಂದ ಚಿನ್ನದ ಪದಕಗಳನ್ನು ಪಡೆದ ಸೋನಾಲಿ ರಾಠೋಡ್ ಜಿಲ್ಲೆಯಲ್ಲಿ ಮನೆ ಮಾತಾಗಿದ್ದು, ವಿದ್ಯಾರ್ಥಿನಿಯ ಸಾಧನೆಗೆ ಬಿಎಲ್​ಡಿಇ ಸಂಸ್ಥೆಯ ಆಧ್ಯಕ್ಷ ಹಾಗೂ ಶಾಸಕ ಎಂ. ಬಿ. ಪಾಟೀಲ್ ಮತ್ತು ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಇತರೆ ಸಿಬ್ಬಂದಿಗಳು ಅಭಿನಂದಿಸಿದ್ದರು. ಇದೀಗಾ ಬಿಎಲ್​ಡಿಇ ಸಂಸ್ಥೆಯ ಆಧ್ಯಕ್ಷ ಹಾಗೂ ಶಾಸಕ ಎಂ. ಬಿ. ಪಾಟೀಲ್ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.

ಉಪನ್ಯಾಕಿ ಹುದ್ದೆಯನ್ನು ಸೋನಾಲಿಗೆ ನೀಡಿದ್ದು, ಕಡು ಬಡತನದಲ್ಲಿಯೇ ಬೆಳೆದು, ಶಿಕ್ಷಣ ಪಡೆದು ನರ್ಸಿಂಗ್ ಕ್ಷೇತ್ರದಲ್ಲಿ ಇಡೀ ರಾಜ್ಯದಲ್ಲಿಯೇ ಅಪ್ರತಿಮ ಸಾಧನೆ ತೋರಿದ ಬಿಎಲ್​ಡಿಇ ಸಂಸ್ಥೆಯ ಬಿ. ಎಂ. ಪಾಟೀಲ್ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ವಿದ್ಯಾರ್ಥಿನಿ ಸೋನಾಲಿ ದೇವಾನಂದ ರಾಠೋಡ ಅವರನ್ನು ಪ್ರಶಂಸಿಸಿ ಬಿಎಲ್​ಡಿಇ ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಎಂ. ಬಿ. ಪಾಟೀಲ್ ಸೋನಾಲಿಯ ಕಳೆದ ನಾಲ್ಕು ವರ್ಷಗಳ ನರ್ಸಿಂಗ್ ಕಾಲೇಜು ಶುಲ್ಕವನ್ನು ಮರು ಪಾವತಿಸಿದ್ದಾರೆ!

ಉಚಿತ ಶಿಕ್ಷಣ ಮತ್ತು ಉಪನ್ಯಾಸಕಿ ಹುದ್ದೆ ಪಡೆದ ಸೋನಾಲಿ ರಾಠೋಡ್

ಸ್ನಾತಕೋತ್ತರ ಶಿಕ್ಷಣ ಉಚಿತ:
ವಿಜಯಪುರದ ತಮ್ಮ ನಿವಾಸದಲ್ಲಿ ಭೇಟಿಯಾದ ಸೋನಾಲಿಗೆ ಎಂ. ಬಿ. ಪಾಟೀಲ್ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಉಚಿತ ಪ್ರವೇಶ ನೀಡಿದರು. ಜೊತೆಗೆ ಅಭ್ಯಸಿಸಿದ ಕಾಲೇಜಿನಲ್ಲಿಯೇ ಉಪನ್ಯಾಸಕ ಹುದ್ದೆಯ ಆದೇಶ ಪ್ರತಿಯನ್ನೂ ನೀಡಿದರು!

ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದ ಸೋನಾಲಿ ದೇವಾನಂದ ರಾಠೋಡ್

ಈ ಸಂದರ್ಭದಲ್ಲಿ ಸೋನಾಲಿ ತಂದೆ-ತಾಯಿ, ಸಹೋದರಿ, ಆಡಳಿತಾಧಿಕಾರಿ ಡಾ.ರಾಘವೇಂದ್ರ ಕುಲಕರ್ಣಿ, ಕಾಲೇಜು ಪ್ರಾಚಾರ್ಯರು ಶೋಲ್ಮೋನ್ ಚೋಪಡೆ, ಉಪಪ್ರಾಚಾರ್ಯ ಸುಚಿತ್ರಾ ರಾಠಿ, ಉಪನ್ಯಾಸಕ ಸಂತೋಷ ಇಂಡಿ ಉಪಸ್ಥಿತರಿದ್ದರು.

ಇದನ್ನೂ ಓದಿ: ರಾಷ್ಟ್ರಪತಿಯಿಂದ ಎರಡು ಚಿನ್ನದ ಪದಕ ಪಡೆದುಕೊಂಡ ಬಿಸಿಲುನಾಡಿನ ವಿದ್ಯಾರ್ಥಿನಿ; ಮಹತ್ತರ ಸಾಧನೆಗೆ ಫುಲ್​ ಖುಷ್!​