ರೈತರ ಗಮನಕ್ಕೆ: ಸಾಲದ ‘ಫಲ’ವನ್ನು ಸುಲಭವಾಗಿ ಸವಿಯಲು ಬಂತು FRUITS!

| Updated By: KUSHAL V

Updated on: Dec 22, 2020 | 6:49 PM

FRUITS ವೆಬ್​ಸೈಟ್​ ಭೂಮಿ ಆನ್​ಲೈನ್​ (BHOOMI ONLINE) ಜೊತೆ ಸಂಪರ್ಕ ಹೊಂದಿದೆ. ಹೀಗಾಗಿ, ಈ ಜಾಲತಾಣದ ಮೂಲಕ ರೈತರು ಸಬ್ ರಿಜಿಸ್ಟ್ರಾರ್ ಹಾಗೂ ಕಂದಾಯ ಇಲಾಖೆಯ ವಿವಿಧ ಕಚೇರಿಗಳಿಗೆ ಭೇಟಿ ನೀಡದೆ ನೇರವಾಗಿ ಬ್ಯಾಂಕಿನ ಶಾಖೆಯಿಂದ ಸಾಲ ಸೌಲಭ್ಯ ಪಡೆಯಬಹುದಾಗಿದೆ.

ರೈತರ ಗಮನಕ್ಕೆ: ಸಾಲದ ‘ಫಲ’ವನ್ನು ಸುಲಭವಾಗಿ ಸವಿಯಲು ಬಂತು FRUITS!
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಇತ್ತೀಚೆಗೆ ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅದರಲ್ಲೂ, ಹಣಕಾಸು ವಹಿವಾಟಿನಲ್ಲಿ ಡಿಜಿಟಲೀಕರಣ ಗಣನೀಯ ಏರಿಕೆ ಕಂಡಿದೆ. ಈಗ ಡಿಜಿಟಲೀಕರಣಕ್ಕೆ ಮತ್ತಷ್ಟು ಒತ್ತು ನೀಡುವ ದೃಷ್ಟಿಯಿಂದ ರಾಜ್ಯ  ಸರ್ಕಾರ​ ಫ್ರೂಟ್ಸ್​ (FRUITS) ಜಾಲಾತಾಣವನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದೆ.

ಸರ್ಕಾರದ ಇ-ಆಡಳಿತ ಸುಧಾರಣೆ ಕಾರ್ಯಕ್ರಮದ ಅಡಿಯಲ್ಲಿ FRUITS ಜಾಲತಾಣದ ಉದ್ಘಾಟನೆ ಆಗಿದೆ. ಸದ್ಯ, ಇದರ ಪ್ರಾಯೋಗಿಕ ಅನುಷ್ಠಾನಕ್ಕೆ ಕೆನರಾ ಬ್ಯಾಂಕ್​ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. FRUITS ವೆಬ್​ಸೈಟ್​ ಭೂಮಿ ಆನ್​ಲೈನ್​ (BHOOMI ONLINE) ಜೊತೆ ಸಂಪರ್ಕ ಹೊಂದಿದೆ. ಹೀಗಾಗಿ, ಈ ಜಾಲತಾಣದ ಮೂಲಕ ರೈತರು ಸಬ್ ರಿಜಿಸ್ಟ್ರಾರ್ ಹಾಗೂ ಕಂದಾಯ ಇಲಾಖೆಯ ವಿವಿಧ ಕಚೇರಿಗಳಿಗೆ ಭೇಟಿ ನೀಡದೆ ನೇರವಾಗಿ ಬ್ಯಾಂಕಿನ ಶಾಖೆಯಿಂದ ಸಾಲ ಸೌಲಭ್ಯ ಪಡೆಯಬಹುದಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸರ್ಕಾರದ ಇ-ಆಡಳಿತ ಕೇಂದ್ರದ ಅಪರ ಮುಖ್ಯಕಾರ್ಯದರ್ಶಿ ರಾಜೀವ್ ಚಾವ್ಲಾ FRUITS ಜಾಲತಾಣ ರಾಜ್ಯ ಸರ್ಕಾರದ ನೂತನ ಉಪಕ್ರಮವಾಗಿದೆ. ರಾಜ್ಯದ ಸಮಸ್ತ ರೈತರ ಭೂಹಿಡುವಳಿ ಹಾಗೂ ಇನ್ನಿತರ ಉಪಯುಕ್ತ ಮಾಹಿತಿಗಳನ್ನು ಒಂದೆಡೆ ಕ್ರೋಢೀಕರಿಸುವುದು ಹಾಗೂ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸುವದು ಇದರ ಮೂಲ ಉದ್ದೇಶ. ರೈತರನ್ನು ನೋಂದಾಯಿಸಿ, ಎಲ್ಲರಿಗೂ FID ನೋಂದಣಿ ಸಂಖ್ಯೆ ನೀಡಲಾಗುತ್ತದೆ. ಈ ಸಂಖ್ಯೆಯನ್ನು ಬಳಸಿಕೊಂಡು ಬ್ಯಾಂಕ್​ ಮತ್ತು ಇತರ ಹಣಕಾಸು ಸಂಸ್ಥೆಗಳು ರೈತರ ಭೂ-ದಾಖಲೆಗಳನ್ನು ಪರಿಶೀಲಿಸಬಹುದಾಗಿದೆ ಹಾಗೂ ತ್ವರಿತವಾಗಿ ಸಾಲ ಮಂಜೂರಾತಿ ನೀಡಬಹುದಾಗಿದೆ ಎಂದರು.

ಬೆಂಗಳೂರಿನಲ್ಲಿ ಪ್ರಾರಂಭವಾಯ್ತು ಆರ್ಟ್ ಆ್ಯಂಡ್​ ಫೋಟೋಗ್ರಫಿ ಮ್ಯೂಸಿಯಂ; ಇಂದಿನಿಂದಲೇ ವರ್ಚ್ಯುವಲ್​ ವೀಕ್ಷಣೆ