ಬೆಂಗಳೂರು, (ಸೆಪ್ಟೆಂಬರ್ 04): ಆಧುನಿಕ ತಂತ್ರಜ್ಞಾನ ಬೆಳೆಯುತ್ತಿದ್ದಂತೆಯೇ ಮನುಷ್ಯ ಕೂಡ ಆಧುನಿಕ ಜೀವನ ಶೈಲಿಗಳಿಗೆ ಹೊಂದಿಕೊಳ್ಳುತ್ತಿದ್ದಾನೆ. ಆದರೆ ಅದೇ ಆಧುನಿಕ ಬದಲಾದ ಜೀವನ ಶೈಲಿಯೂ ನಾನಾ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದ್ದು, ಯುವ ಸಮುದಾಯದಲ್ಲಿ ಇತ್ತೀಚಿಗೆ ಹಲವು ಕಾರಣಗಳಿಂದ ಅಂಗಾಂಗ ವೈಫಲ್ಯಗಳು ಕಾಣಿಸಿಕೊಳ್ಳುತ್ತಿವೆ. ಹೌದು.. ಇತ್ತೀಚಿನ ದಿನಗಳಲ್ಲಿ ಚಿಕ್ಕ ಚಿಕ್ಕ ವಯಸ್ಸಿನ ಯುವಕ-ಯುವತಿಯರು ಅಂಗಾಂಗ ವೈಫಲ್ಯದಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲಿ 19 ರಿಂದ 40ವರ್ಷದ ದುಡಿಯುವ ವರ್ಗವೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಕಿಡ್ನಿ ಹಾಗೂ ಲೀವರ್ಗೆ ಬೇಡಿಕೆ ಹೆಚ್ಚಾಗಿದೆ.
ಈ ಅಂಗಾಂಗ ವೈಫಲ್ಯಕ್ಕೆ ಸಾಕಷ್ಟು ಕಾರಣಗಳಿದ್ದು ವರ್ಕ್ ಪ್ರೇಶರ್, ಮಾನಸಿಕ ಒತ್ತಡದಿಂದ ಅಂಗಾಂಗ ವೈಫಲ್ಯ ಸಮಸ್ಯೆಗೆ ಹೆಚ್ಚಳವಾಗಿದೆ. ಇದಷ್ಟೇ ಅಲ್ಲದೇ ದೈನಂದಿನ ಅಭ್ಯಾಸಗಳೇ ನಮಗೆ ನಮ್ಮ ಆರೋಗ್ಯಕ್ಕೆ ಮಾರಕವಾಗಿದ್ದು, ಕುಡಿಯುವ ಚಟಕ್ಕೆ ಬೆನ್ನು ಬಿದ್ದ ಯುವಕರು ಹೆಚ್ಚಾಗಿ ಕಿಡ್ನಿ ಹಾಗೂ ಲಿವರ್‌ಗಳನ್ನ ಕಳೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಹೃದಯಘಾತ ಪ್ರಕರಣ ಹೆಚ್ಚಳ: ಶಾಲಾ-ಕಾಲೇಜು ಮಕ್ಕಳಿಗೆ CPR ತರಬೇತಿಗೆ ಶಿಕ್ಷಣ ಇಲಾಖೆ ಚಿಂತನೆ!
ಇನ್ನೂ ಕೇವಲ ಮದ್ಯ ಸೇವನೆ ಮಾಡುವವರಲ್ಲದೇ, ಯಾವ ಕೆಟ್ಟ ಚಟವಿರದ ಅದೆಷ್ಟೋ ಮಂದಿಗೆ ಫ್ಯಾಟಿ ಲಿವರ್ ನಂತಹ ಸಮಸ್ಯೆ ಇತ್ತೀಚಿಗೆ ಸರ್ವೇ ಸಾಮಾನ್ಯವಾಗಿ ಹೋಗಿದೆ. ಹೀಗಾಗಿ ಅಂಗಾಂಗಕ್ಕಾಗಿ ಬೇಡಿಕೆ ಹೆಚ್ಚಿದ್ದು ಸಾವಿರಾರು ಸಂಖ್ಯೆಯಲ್ಲಿ ನೊಂದಣಿ ಮಾಡಿಕೊಂಡಿದ್ದಾರೆ. ಹಾಗಾದ್ರೆ ಯಾವ ಯಾವ ಅಂಗಾಂಗಕ್ಕೆ ಎಷ್ಟೆಷ್ಟು ಬೇಡಿಕೆ ಎಂದು ನೋಡೋದಾದ್ರೆ
ರಾಜ್ಯದಲ್ಲಿ ಅಂಗಾಂಗಕ್ಕೆ ಬೇಡಿಕೆಗಳು ಹೆಚ್ಚಾದಂತೆ ಅಂಗಾಂಗ ದಾನಿಗಳು ಸಹ ಹೆಚ್ಚಾಗಿರುವುದು ಸಂತಸದ ವಿಚಾರ.. ಅಂಗಾಂಗ ದಾನದಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿ ಕರ್ನಾಟಕವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಂಗಾಂಗ ದಾನ ಮಾಡುತ್ತಿದ್ದಾರೆ. ಆದರೆ ಅಂಗಾಂಗ ದಾನ ಹೆಚ್ಚಾಗುವುದರ ಜೊತೆಗೆ ನಮ್ಮ ಆರೋಗ್ಯದ ಪರಿಸ್ಥಿತಿ ಕಾಪಾಡಿಕೊಂಡರೆ ಅಂದರೆ ಬಿಪಿ ಕಂಟ್ರೋಲ್, ಒಬೆಸಿಟಿ ನಿಯಂತ್ರಣ ಆಲ್ಕೋಹಾಲ್ ಸೇವನೆ ನಿಲ್ಲಿಸುವುದರ ಜೊತೆಗೆ ಲೈಫ್‌ಸ್ಟೈಲ್ ಚೇಂಜ್ ಮಾಡಿಕೊಂಡರೇ ಅಂಗಾಂಗ ವೈಫಲ್ಯ ತಡೆಗಟ್ಟುವುದಕ್ಕೆ ಸಹಾಕಾರಿಯಾಗಲಿದೆಯಂತೆ.
ಒಟ್ಟಿನಲ್ಲಿ ಸತ್ತು ಮಣ್ಣು ಸೇರುವ ದೇಹದ ಅಂಗಾಂಗಳಿಗೆ ಭಾರಿ ಬೇಡಿಕೆ ಇದ್ದು, ನಾವು ಮಾಡೋ ಒಂದು ನಿರ್ಧಾರದಿಂದ ಬೇರೆ ಜೀವಗಳಿಗೆ ಚೈತನ್ಯ ನೀಡೋ ಶಕ್ತಿ ಇದೆ. ಹೀಗಾಗಿ ಪ್ರತಿಯೊಬ್ಬರು ಅಂಗಾಂಗ ದಾನ ಮಾಡಿದರೆ ಒಳಿತು. ಹಾಗೇ ಜನರು ಕೆಟ್ಟ ಕೆಟ್ಟ ಚಟಗಳಿಂದ ದೂರ ಉಳಿದು ತಮ್ಮ ಅಂಗಾಂಗಗಳನ್ನು ಉಳಿಸಿಕೊಳ್ಳಬೇಕೆದೆ.